ದುಬೈ | 67 ಅಂತಸ್ತಿನ ಟೈಗರ್ ಟವರ್ ನಲ್ಲಿ ಬೆಂಕಿ ಆಕಸ್ಮಿಕ

PC : X \ @openletteryt
ದುಬೈ ಮರೀನಾ: ದುಬೈನ 764 ಮನೆಗಳಿರುವ 67 ಅಂತಸ್ತಿನ ಟೈಗರ್ ಟವರ್ ಮರಿನಾ ಪಿನಾಕಲ್ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ.ಆ ವೇಳೆ ಕಟ್ಟಡದಲ್ಲಿದ್ದ 3,820 ನಿವಾಸಿಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ ಎಂದು ದುಬೈನ ಮಾಧ್ಯಮ ಕಚೇರಿ ಶನಿವಾರ ಮಾಹಿತಿ ನೀಡಿದೆ.
ಈ ಕುರಿತು ವರದಿ ಮಾಡಿರುವ ಖಲೀಜ್ ಟೈಮ್ಸ್ ದುಬೈನ ನಾಗರಿಕ ಸೇನಾ ತಂಡವು ಆರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಕಟ್ಟಡದ ನಿವಾಸಿಗಳಿಗೆ ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸುವ, ಅವರ ಸುರಕ್ಷತೆ ಮತ್ತು ಆರೈಕೆ ಬಗ್ಗೆ ಗಮನಹರಿಸುವಂತೆ ಕಟ್ಟಡದ ಡೆವಲಪರ್ ಜತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದೆ.
When corruption doesn't rule.
— Open Letter (@openletteryt) June 14, 2025
When rules are actually followed.
When human life is valued.
Things fall in place, even after mishaps.
67-storey building in Dubai caught fire, 4,000 residents were evacuated safely. No loss of life is reported.
pic.twitter.com/biOia5TYvp
67 ಅಂತಸ್ತಿನ ಕಟ್ಟಡದಲ್ಲಿದ್ದ ಜನರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಅವರ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೈಕೆಯ ಕಾಳಜಿಗೆ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ. ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ತಂಡ ತನ್ನ ಪ್ರಯತ್ನ ಮುಂದುವರಿಸಿದೆ ಎಂದು ತಿಳಿದು ಬಂದಿದೆ.
ಟೈಗರ್ ಟವರ್ ಎಂದೇ ಕರೆಯಲಾಗುವ ಮರಿನಾ ಪಿನಾಕಲ್ನಲ್ಲಿ ಇಂಥ ಅಗ್ನಿ ಅವಘಡ ಸಂಭವಿಸಿದ್ದು ಇದೇ ಮೊದಲಲ್ಲ. 2015ರಲ್ಲೂ 47ನೇ ಅಂತಸ್ತಿನ ಅಡುಗೆ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡು ಅದು 48ನೇ ಅಂತಸ್ತಿಗೂ ವ್ಯಾಪಿಸಿತ್ತು.