Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. 'ದುಬೈ ರನ್ 2026' | ಮತ್ತೊಮ್ಮೆ ಜಾಗತಿಕ...

'ದುಬೈ ರನ್ 2026' | ಮತ್ತೊಮ್ಮೆ ಜಾಗತಿಕ ಗಮನಸೆಳೆಯಲು ಸಜ್ಜಾದ 'ದುಬೈ ಬ್ಯಾರೀಸ್'

ಟೀ-ಶರ್ಟ್ ಅನಾವರಣಗೊಳಿಸಿದ ಡಾ.ತುಂಬೆ ಮೊಯ್ದಿನ್

ಎಂ.ಇಕ್ಬಾಲ್ ಉಚ್ಚಿಲ, ದುಬೈಎಂ.ಇಕ್ಬಾಲ್ ಉಚ್ಚಿಲ, ದುಬೈ21 Nov 2026 11:23 AM IST
share
ದುಬೈ ರನ್ 2026 | ಮತ್ತೊಮ್ಮೆ ಜಾಗತಿಕ ಗಮನಸೆಳೆಯಲು ಸಜ್ಜಾದ ದುಬೈ ಬ್ಯಾರೀಸ್

3 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ

ದುಬೈ: ಜಾಗತಿಕ ಮಟ್ಟದಲ್ಲಿ ಗಮನಸೆಳೆಯುತ್ತಿರುವ ದುಬೈನ ಪ್ರತಿಷ್ಠಿತ ‘ದುಬೈ ರನ್ 2026’ರಲ್ಲಿ ‘ದುಬೈ ಬ್ಯಾರೀಸ್’ಸಮುದಾಯದ ಸದಸ್ಯರು ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದೊಂದಿಗೆ ಸಾಮೂಹಿಕವಾಗಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.

ದುಬೈನ ಪ್ರಸಿದ್ಧ ಶೇಖ್ ಝಾಯೆದ್ ರಸ್ತೆಯಲ್ಲಿ ನವೆಂಬರ್ 22ರಂದು ನಡೆಯಲಿರುವ ಐತಿಹಾಸಿಕ ‘ದುಬೈ ರನ್ 2026’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, ‘ದುಬೈ ಬ್ಯಾರೀಸ್’ ಸಮುದಾಯ ಮತ್ತೊಮ್ಮೆ ತನ್ನ ಬೃಹತ್ ಸಾಮೂಹಿಕ ಭಾಗವಹಿಸುವಿಕೆಯ ಮೂಲಕ ಜಾಗತಿಕ ಗಮನಸೆಳೆಯಲು ಸಜ್ಜಾಗಿದೆ. ಈ ಬಾರಿ 3,000ಕ್ಕೂ ಹೆಚ್ಚು ಮಂದಿ ಬ್ಯಾರಿ ಸಮುದಾಯದ ಸದಸ್ಯರು ಓಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಕಳೆದ ವರ್ಷದ ಸ್ಮರಣೀಯ ಪ್ರದರ್ಶನವನ್ನು ಮೀರಿಸುವಂತಹ ಮತ್ತೊಂದು ವಿನೂತನ ಪ್ರಯತ್ನಕ್ಕೆ ಸಮುದಾಯ ಸಜ್ಜಾಗುತ್ತಿದೆ.

ಕಳೆದ ವರ್ಷ(2025)ದ ದುಬೈ ರನ್ನಲ್ಲಿ ಬ್ಯಾರೀಸ್ ಸಮುದಾಯ ಕೈಗೊಂಡಿದ್ದ ವಿಶಿಷ್ಟ ಪ್ರಯತ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಶೇಖ್ ಝಾಯೆದ್ ರಸ್ತೆಯಲ್ಲಿ 30 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ ಬೃಹತ್ ಯುಎಇ ರಾಷ್ಟ್ರಧ್ವಜವನ್ನು ಹಿಡಿದು ಸಾಗುವ ಮೂಲಕ 'ದುಬೈ ಬ್ಯಾರೀಸ್' ಸದಸ್ಯರು ಎಲ್ಲರ ಗಮನಸೆಳೆದಿದ್ದರು. ಈ ಅಪರೂಪದ ದೃಶ್ಯದ ವೀಡಿಯೊವನ್ನು ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಪ್ರತಿಷ್ಠಿತ ‘ಗಲ್ಫ್ ನ್ಯೂಸ್’ಕೂಡ ಈ ವಿಶೇಷ ಪ್ರಯತ್ನಕ್ಕೆ ವ್ಯಾಪಕ ಪ್ರಚಾರ ನೀಡಿತ್ತು.

ಕ್ರೀಡೆ, ಆರೋಗ್ಯ ಮತ್ತು ಸಾಮುದಾಯಿಕ ಒಗ್ಗಟ್ಟಿನ ಸಂದೇಶ ಸಾರುವ ಈ ಬೃಹತ್ ಓಟದ ಕಾರ್ಯಕ್ರಮದಲ್ಲಿ 'ದುಬೈ ಬ್ಯಾರೀಸ್' ಸಮುದಾಯದ ಭಾಗವಹಿಸುವಿಕೆ ವಿಶೇಷ ಗಮನ ಸೆಳೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ರೀತಿಯ ಸಿದ್ಧತಾ ಕಾರ್ಯವನ್ನು ಕೈಗೊಂಡಿರುವ ಜೊತೆಗೆ, ಬ್ಯಾರೀಸ್ ಸಮುದಾಯದ ದಾಖಲೆಯ ಜನ ಭಾಗವಹಿಸುವಂತೆ ಮಾಡುವುದರೊಂದಿಗೆ ಗಲ್ಫಿನ ನೆಲದಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿದೆ.

ಸದಾ ವಾಹನಗಳಿಂದ ಗಿಜಿಗುಡುತ್ತಿರುವ ದುಬೈನ ಶೇಖ್ ಝಾಯೆದ್ ರಸ್ತೆ, ಈ ಬಾರಿ ಜನಸಾಗರದಿಂದ ಕಂಗೊಳಿಸಲು ಸಜ್ಜಾಗಿದೆ. ರವಿವಾರ ಬೆಳಗ್ಗೆ 6:30ಕ್ಕೆ ಆರಂಭಗೊಳ್ಳಲಿರುವ ಪ್ರತಿಷ್ಠಿತ ‘ದುಬೈ ರನ್ 2026’ನಲ್ಲಿ ಐದು ಕಿ.ಮೀ. ಮತ್ತು 10 ಕಿ.ಮೀ. ಎಂಬ ಎರಡು ವಿಭಿನ್ನ ಮಾರ್ಗಗಳಲ್ಲಿ ಲಕ್ಷಾಂತರ ಮಂದಿ ಓಟಗಾರರು ಉತ್ಸಾಹದಿಂದ ಪಾಲ್ಗೊಳ್ಳಲಿದ್ದಾರೆ.

ಬ್ಯಾರಿ ಸಮುದಾಯದ ಮಕ್ಕಳು, ಮಹಿಳೆಯರು, ಪುರುಷರು, ಯುವಕ-ಯುವತಿಯರು ಸೇರಿದಂತೆ ಸಾವಿರಾರು ಮಂದಿ ನೀಲಿ ಬಣ್ಣದ ಟೀ-ಶರ್ಟ್ಗಳನ್ನು ಧರಿಸಿ, ಸಾಮೂಹಿಕ ಒಗ್ಗಟ್ಟು ಮತ್ತು ಸಮುದಾಯದ ಐಕ್ಯದ ಸಂದೇಶ ಸಾರುತ್ತಾ ದುಬೈ ರನ್ನಲ್ಲಿ ಹೆಜ್ಜೆ ಹಾಕಲಿದ್ದಾರೆ.

ವಯಸ್ಸಿನ ಭೇದವಿಲ್ಲದೆ ಒಂದೇ ಬಣ್ಣದ ಉಡುಪಿನಲ್ಲಿ ಒಂದೇ ಗುರಿಯೊಂದಿಗೆ ಸಾಗುವ ಬ್ಯಾರೀಸ್ ಸಮುದಾಯದ ಈ ಸಾಮೂಹಿಕ ಭಾಗವಹಿಸುವಿಕೆ ದುಬೈ ರನ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ಆರೋಗ್ಯದ ಜಾಗೃತಿಯೊಂದಿಗೆ ತಮ್ಮ ಸಮುದಾಯದ ಒಗ್ಗಟ್ಟು, ಶಿಸ್ತು ಮತ್ತು ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲು ದುಬೈ ಬ್ಯಾರೀಸ್ ಸಜ್ಜಾಗಿದೆ.

ಟೀ-ಶರ್ಟ್ ಅನಾವರಣಗೊಳಿಸಿದ ಡಾ.ತುಂಬೆ ಮೊಯ್ದಿನ್

ದುಬೈ ರನ್ನಲ್ಲಿ ಬ್ಯಾರೀಸ್ ಸಮುದಾಯದ ಸಾಮೂಹಿಕ ಭಾಗವಹಿಸುವಿಕೆಗಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ನೀಲಿ ಬಣ್ಣದ ಟೀ-ಶರ್ಟ್ನ್ನು ಯುಎಇಯ ಪ್ರತಿಷ್ಠಿತ ತುಂಬೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರು ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿ ಶುಕ್ರವಾರ ಅಧಿಕೃತವಾಗಿ ಅನಾವರಣಗೊಳಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದುಬೈ ಬ್ಯಾರೀಸ್ ನ ಹಿದಾಯತ್ ಅಡ್ಡೂರು, ಸಲೀಂ ಮೂಡುಬಿದಿರೆ, ಸಮದ್ ಬಿರಾಲಿ, ಆಸಿಫ್ ಕನ್ನಂಗಾರ್, ಮುಹಮ್ಮದ್ ಇಕ್ರಂ ಮೂಳೂರು, ಸಂಶುದ್ದೀನ್ ಪಿಲಿಗೊಡು, ಯೂಸುಫ್ ಭಟ್ಕಳ್, ಮೂಸಾ ಪೆರುವಾಯಿ, ನವಾಝ್ ಬಜಾರ್, ಫಾರೂಕ್ ಇಂಗ್ಲೆಂಡ್, ಫಾರೂಕ್ ಮೂರ್ಜೆ, ನವಾಝ್ ಕೋಟೆಕಾರ್, ಅಕ್ಬರ್ ಕೊಣಾಜೆ, ಮಕ್ಬೂಲ್ ವಿಟ್ಲ, ಸನಾನ್ ಮೂಡುಬಿದಿರೆ ಉಪಸ್ಥಿತರಿದ್ದರು.

ಈ ಬಾರಿ 3,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ: ಹಿದಾಯತ್ ಅಡ್ಡೂರು

ಈ ಕುರಿತು ‘ವಾರ್ತಾ ಭಾರತಿ'ಯೊಂದಿಗೆ ಮಾತನಾಡಿದ ದುಬೈ ಬ್ಯಾರೀಸ್ ನಾಯಕ ಹಿದಾಯತ್ ಅಡ್ಡೂರು, “ಈ ಬಾರಿ 3,000ಕ್ಕೂ ಅಧಿಕ ಮಂದಿ ದುಬೈ ರನ್ನಲ್ಲಿ ಭಾಗವಹಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಅಗತ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಮುದಾಯದ ಹಿರಿಯರು, ಕಿರಿಯರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬ್ಯಾರೀಸ್ ಸಮುದಾಯದ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯನ್ನು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ವಿಶ್ವಾಸವಿದೆ”ಎಂದು ತಿಳಿಸಿದರು.

ದುಬೈ ರನ್ ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈ ಬಾರಿ 'ದುಬೈ ಬ್ಯಾರೀಸ್' ತಂಡಕ್ಕೆ 'ತುಂಬೆ ಗ್ರೂಪ್'ನ ತುಂಬೆ ಮೊಯ್ದಿನ್, 'ಝಿನ್ಕ್ ಗ್ಯಾರೇಜಿ'ನ ಶರೀಫ್- ಮುಜಾಹಿದ್, 'ಕ್ಲಾಸಿಕ್ ಮರೀನ್'ನ ಹಂಝ ದೆಂಜಿಪಡಿ, 'ಮಖವಿ'ನ ಶಕೀಲ್, 'ದಿ ಫ್ರೆಶ್'ನ ಸನಾ ಹಿದಾಯತ್ ಅಡ್ಡೂರು, 'ಬಿಗ್ಗೈಸ್'ನ ಸಲೀಂ ಮೂಡುಬಿದಿರೆ, 'ಅಲ್ವಿನ ಪೆರ್ಫ್ಯೂಮ್ಸ್'ನ ಅಲ್ವಿನ ರೆಜಿ ಸಹಕಾರ ನೀಡಿದ್ದಾರೆ.

ಬ್ಯಾರೀಸ್ ಸಮುದಾಯದ ಒಗ್ಗಟ್ಟು, ಸಾಮೂಹಿಕ ಉತ್ಸಾಹ ಮತ್ತು ಏಕತೆಯ ಸಂಕೇತವಾಗಿ ರೂಪಿಸಲಾಗಿರುವ ಈ ಟೀ-ಶರ್ಟ್, ದುಬೈ ರನ್ನಲ್ಲಿ ಭಾಗವಹಿಸುವ ಸದಸ್ಯರಿಗೆ ವಿಶೇಷ ಗುರುತಿನ ರೂಪದಲ್ಲಿ ಮೂಡಿಬರಲಿದೆ.

ವಯಸ್ಸಿನ ಭೇದವಿಲ್ಲದೆ ಹಿರಿಯರು-ಕಿರಿಯರು ಸೇರಿದಂತೆ ಯುಎಇಯಲ್ಲಿರುವ ವಿವಿಧ ದೇಶಗಳ ನಿವಾಸಿಗಳು, ಪ್ರವಾಸಿಗಳು ಈ ಬೃಹತ್ ಕ್ರೀಡಾಕೂಟದಲ್ಲಿ ಹೆಜ್ಜೆ ಹಾಕಲಿದ್ದು, ಆರೋಗ್ಯ ಜಾಗೃತಿ, ಸಾಮುದಾಯಿಕ ಒಗ್ಗಟ್ಟು ಮತ್ತು ಕ್ರಿಯಾಶೀಲ ಜೀವನಶೈಲಿಯ ಸಂದೇಶ ಸಾರಲಿದ್ದಾರೆ.

Tags

Dubai Run 2026Dubai BearysGlobal MarkThumbay Moideen
share
ಎಂ.ಇಕ್ಬಾಲ್ ಉಚ್ಚಿಲ, ದುಬೈ
ಎಂ.ಇಕ್ಬಾಲ್ ಉಚ್ಚಿಲ, ದುಬೈ
Next Story
X