ಸೌದಿ ಅರೇಬಿಯಾದಲ್ಲಿ ಮಾ.20ಕ್ಕೆ ಈದುಲ್ ಫಿತ್ರ್

ಸಾಂದರ್ಭಿಕ ಚಿತ್ರ | Photo Credit : aljazeera.com
ರಿಯಾದ್, ಮಾ.18: ಬುಧವಾರ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಮಾ.20ರಂದು ಶುಕ್ರವಾರ ಆಚರಿಸಲಾಗುತ್ತದೆ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿದೆ.
ಚಂದ್ರ ವೀಕ್ಷಣೆ ಸಮಿತಿಯು ಮಾ.18ರಂದು ಸಭೆ ಸೇರಿ ಚಂದ್ರ ದರ್ಶನದ ಬಗ್ಗೆ ಪರಿಶೀಲನೆ ನಡೆಸಿತು. ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ರಮಝಾನ್ ತಿಂಗಳು 30 ದಿನಗಳನ್ನು ಪೂರ್ಣಗೊಳಿಸಲಿದ್ದು, ಅದರ ಬಳಿಕದ ದಿನವಾದ ಮಾ.20ರಂದು ಈದುಲ್ ಫಿತ್ರ್ ಹಬ್ಬದ ಆಚರಣೆ ನಡೆಯಲಿದೆ ಎಂದು ತಿಳಿಸಿದೆ.
Next Story




