'ಮಿಸ್ಕಿನ್ ಎಂಪವರ್ ಮೆಂಟ್ ಫೌಂಡೇಶನ್ ಸೌದಿ ಅರಬಿಯಾ ಸಮಿತಿ'ಗೆ ಪದಾಧಿಕಾರಿಗಳ ಆಯ್ಕೆ

ಅಯಾಝ್ | ಶಂಸುದ್ದೀನ್
ಸೌದಿ ಅರೇಬಿಯಾ: ಮಿಸ್ಕಿನ್ ಎಂಪವರ್ ಮೆಂಟ್ ಫೌಂಡೇಶನ್ ಸೌದಿ ಅರೇಬಿಯಾ ಸಮಿತಿ, ಮಜೂರು ಇದರ 3ನೇ ವಾರ್ಷಿಕ ಮಹಾಸಭೆ ಜನವರಿ 17ರಂದು ಸೌದಿ ಅರಬಿಯಾದ ಜುಬೈಲ್ ನಲ್ಲಿ ನಡೆಯಿತು.
ಆನ್ ಲೈನ್ ಮೂಲಕ ಮಜೂರು ಖತೀಬ್ ಎಂ.ಕೆ.ಅಬ್ದುಲ್ ರಶೀದ್ ಸಖಾಫಿ ಅಲ್ ಕಾಮಿಲ್ ಸಭೆಯನ್ನು ಉದ್ಘಾಟಿಸಿದರು. ಆಸಿಫ್ ಜುಬೈಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ 2025-26 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಅಯಾಝ್ ಮಜೂರು (ಕೈಕಂಬ), ಅಧ್ಯಕ್ಷರಾಗಿ ಶಂಸುದ್ದೀನ್ ಉಮರ್ ಮಜೂರು (ಜುಬೈಲ್ )
ಉಪಾಧ್ಯಕ್ಷರಾಗಿ ನಝಿರ್ ಎಚ್.ಝೆಡ್ ಮಜೂರು (ಜುಬೈಲ್), ಪ್ರದಾನ ಕಾರ್ಯದರ್ಶಿಯಾಗಿ ನಾಸಿಮ್ ಮಲ್ಲಾರ್ (ರಿಯಾದ್),
ಜೊತೆ ಕಾರ್ಯದರ್ಶಿಯಾಗಿ ಜಾಬಿರ್ ಮಜೂರು(ಜುಬೈಲ್), ಕೋಶಾಧಿಕಾರಿಯಾಗಿ ಸುಹೈಲ್ ಎಂ.ಎಚ್. ಮಜೂರು ಆಯ್ಕೆಯಾದರು.
ಮುಖ್ಯ ಸಂಯೋಜಕರಾಗಿ ಆಸಿಫ್ ಮಜೂರು(ಜುಬೈಲ್), ಸಹ ಸಂಯೋಜಕರಾಗಿ ಇರ್ಫಾನ್ ಸ್ವಾಗತ್ (ಜುಬೈಲ್), ಇವೆಂಟ್ ಉಸ್ತುವಾರಿಯಾಗಿ ಸಮೀರ್ ಎಸ್.ಎಂ.ಎಸ್. ಮಜೂರು (ಜುಬೈಲ್), ಮಾಧ್ಯಮ ಉಸ್ತುವಾರಿಯಾಗಿ ಹಾರಿಸ್ ಮಜೂರು(ರಿಯಾದ್), ಸಂಘಟನ ಉಸ್ತುವಾರಿಗಳಾಗಿ ಶಬೀರ್ ಮಜೂರು(ಬಹರೈನ್), ಆರಿಫ್ ಅಚ್ಚಲ್ ಮತ್ತು ಮಹ್ರೂಫ್ ಕರಂದಾಡಿ(ಜುಬೈಲ್), ಶಕೀಲ್ ರಿಯಾದ್ ಮತ್ತು ಆಯಾಷ್ ಕೊಂಬಗುಡ್ಡೆ(ರಿಯಾದ್), ಅಲ್ತಾಫ್ ಕರಂದಾಡಿ(ಜಿದ್ದಾ), ಸಮಿತಿಯ ಸಲಹೆಗರಾರಾಗಿ ಮುಸಕ ಕುಚಿಗುಡ್ಡೆ, ಹಫೀಝ್ ಮಜೂರು ಜುಬೈಲ್, ದಾವೂದ್ ಜುಬೈಲ್, ಬಶೀರ್ ರಿಯಾದ್ ಆಯ್ಕೆಯಾದರು.







