ಖತರ್ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ನಿಧನ

Photo |Amiri Diwan
ದೋಹಾ, ಜು. 12: ಖತರ್ ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರು 74ನೇ ವಯಸ್ಸಿನಲ್ಲಿ ರವಿವಾರ ನಿಧನರಾದರು ಎಂದು ದೇಶದ ಉನ್ನತ ಸರಕಾರಿ ಸಂಸ್ಥೆಯಾದ Amiri Diwan ಪ್ರಕಟಿಸಿದೆ.
ಖತರ್ನ ಆಧುನಿಕ ಪುನರುಜ್ಜೀವನಕ್ಕೆ ಮಹತ್ವದ ಕೊಡುಗೆ ನೀಡಿದ ನಾಯಕರೆಂದು ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿತ್ತು. ಅವರ ಆಡಳಿತಾವಧಿಯಲ್ಲಿ ಖತರ್ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಅಭಿವೃದ್ಧಿ ಸಾಧಿಸಿತು ಎಂದು ಖತರ್ನ ಸರಕಾರಿ ವೆಬ್ಸೈಟ್ ತಿಳಿಸಿದೆ.
ಮಾಜಿ ಅಮೀರ್ ಅವರ ನಿಧನವನ್ನು ದೃಢಪಡಿಸಿರುವ ಅಮಿರಿ ದಿವಾನ್, ಇದು ರಾಷ್ಟ್ರಕ್ಕೆ ಸಂಭವಿಸಿದ ದೊಡ್ಡ ನಷ್ಟ ಎಂದು ಹೇಳಿದೆ.
"ದೇವರ ಆಜ್ಞೆ ಮತ್ತು ವಿಧಿಯಲ್ಲಿ ದೃಢ ನಂಬಿಕೆಯೊಂದಿಗೆ, ಇಂದು ಬೆಳಿಗ್ಗೆ ನಿಧನರಾದ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ಅಗಲಿಕೆಯಿಂದ ರಾಷ್ಟ್ರಕ್ಕೆ ಉಂಟಾದ ದೊಡ್ಡ ನಷ್ಟಕ್ಕೆ ಅಮಿರಿ ದಿವಾನ್ ತೀವ್ರ ಶೋಕ ವ್ಯಕ್ತಪಡಿಸುತ್ತದೆ. ದೇವರು ಅವರ ಮೇಲೆ ಕರುಣೆ ತೋರಲಿ" ಎಂದು ರವಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ Amiri Diwan ತಿಳಿಸಿದೆ.




