ಜುಬೈಲ್| ‘ರೈಟ್ ಚಾಯ್ಸ್’ ಕಂಪೆನಿಯಿಂದ ಸಂಭ್ರಮದ ಇಫ್ತಾರ್ ಕೂಟ

ಜುಬೈಲ್: ‘ರೈಟ್ ಚಾಯ್ಸ್’ ಕಂಪೆನಿ ವತಿಯಿಂದ ತಮ್ಮ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟವು ಜುಬೈಲ್‌ನ ಪುಲಿ ರೆಸ್ಟೋರೆಂಟ್‌ನಲ್ಲಿ ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಯಾಝ್ ಕೈಕಂಬ, ಅಲ್ ಮುಝೈನ್ ಸಂಸ್ಥೆಯ ಸಿಐಒ ಝಕರಿಯಾ ಜೋಕಟ್ಟೆ, ಝಹೀರ್ ಝಕರಿಯಾ, ನಝೀರ್, ಮಂಗಳೂರು ಸಿಸಿಬಿಯ ಇನ್ಸ್ಪೆಕ್ಟರ್ ರಫೀಕ್, ಜಬ್ಬಾರ್ ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿ ಇಫ್ತಾರ್ ಕೂಟಕ್ಕೆ ವಿಶೇಷ ಮೆರುಗು ನೀಡಿದರು.
ರಮಝಾನ್ ತಿಂಗಳು ಮಾನವೀಯತೆ, ಸಹಾನುಭೂತಿ ಮತ್ತು ಹಂಚಿಕೊಳ್ಳುವಿಕೆಯ ಸಂದೇಶ ನೀಡುವ ಪವಿತ್ರ ಸಮಯ, ಉಪವಾಸಿಗರಿಗೆ ಉಪವಾಸ ಮುರಿಯಲು ವ್ಯವಸ್ಥೆ ಮಾಡುವುದು ನಿಜಕ್ಕೂ ಮಹತ್ವದ, ಪುಣ್ಯದ ಕಾರ್ಯವಾಗಿದೆ. ಇಂತಹ ಇಫ್ತಾರ್ ಕೂಟಗಳು ಸಮಾಜ ಮತ್ತು ಸಮುದಾಯದಲ್ಲಿ ಸಹೋದರತ್ವ, ಸ್ನೇಹ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸುವಂತಾಗಲಿ ಎಂದು ಗಣ್ಯರು ಹಾರೈಸಿದರು.
Next Story






