Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಜುಬೈಲ್ : "ಮಲೆನಾಡ ಸಂಗಮ 2023"...

ಜುಬೈಲ್ : "ಮಲೆನಾಡ ಸಂಗಮ 2023" ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ27 Nov 2023 4:59 PM IST
share
ಜುಬೈಲ್ : ಮಲೆನಾಡ ಸಂಗಮ 2023 ಕಾರ್ಯಕ್ರಮ

ಜುಬೈಲ್ : ಕರ್ನಾಟಕ ರಾಜ್ಯದ ನಾಲ್ಕು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗು ಕೊಡಗುಗಳನ್ನು ಒಳಗೊಂಡ ಮಲ್ನಾಡ್ ಪ್ರದೇಶದ ಅಸಹಾಯಕರ ಆಶಾಕಿರಣವಾದ "ಮಲ್ನಾಡ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (MGT)" ಸೌದಿ ಅರೇಬಿಯಾದ ಜುಬೈಲ್ ಘಟಕದ ವತಿಯಿಂದ "ಮಲೆನಾಡ ಸಂಗಮ 2023" ಎಂಬ ಕುಟುಂಬ ಸಮ್ಮಿಲನವು ಜುಬೈಲ್ ನ Desert Camp ನಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.

ಸುಮಾರು 1500ಕ್ಕೂ ಹೆಚ್ಚು ಪುರುಷರು, ಮಹಿಳೆಯರು ಹಾಗು ಮಕ್ಕಳು ಸೇರಿದ್ದ ಈ ಕಾರ್ಯಕ್ರಮವು ರಾತ್ರಿ 9 ಗಂಟೆಗೆ ಆರಂಭಗೊಂಡಿತು. ಆಕರ್ಷಕ ದಫ್ ಮೂಲಕ ಮುಖ್ಯ ಅತಿಥಿಗಳನ್ನು ಸ್ವಾಗತಿಸಲಾಯಿತು.

ಮಾಸ್ಟರ್ ಹುಮೈದ್ ಬಿನ್ ಮೊಹಮ್ಮದ್ ಶರೀಫ್ ಕಳಸ ಖಿರಾತ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಅಬು ಸುಫ್ಯಾನ್ (ಇಬ್ರಾಹಿಂ ಮದನಿ)ಯವರು ದುಃಅ ದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ "ಮಲ್ನಾಡ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (MGT)" ಎಲ್ಲಿ, ಹೇಗೆ, ಯಾವಾಗ, ಯಾವ ಕಾರಣಕ್ಕಾಗಿ ಸ್ಥಾಪನೆಯಾಯಿತು; MGT ಬೆಳೆದು ಬಂದ ದಾರಿ; MGTಯ ಕಾರ್ಯ ಚಟುವಟಿಕೆಗಳು; MGTಯ ಮುಂದಿನ ಯೋಜನೆಗಳು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರವು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು

ನಂತರ ಕಾರ್ಯಕ್ರಮ ನಿರೂಪಕರಾದ ಇಬ್ರಾಹಿಂ ಖಾದರ್ ತೆಂಗಿನಮನೆಯವರು ಮುಖ್ಯ ಅತಿಥಿಗಳನ್ನು ಪರಿಚಯ ಮಾಡುವುದರೊಂದಿಗೆ ಸ್ವಾಗತ ಕೋರಿ ವೇದಿಕೆಗೆ ಆಹ್ವಾನಿಸಿದರು.

MGT ಜುಬೈಲ್ ಘಟಕದ ಅಧ್ಯಕ್ಷ ಅಬೂಬಕ್ಕರ್ ಹಂಡುಗುಳಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅಬು ಸುಫ್ಯಾನ್ (ಇಬ್ರಾಹಿಂ ಮದನಿ), ಝಕರಿಯ (ಅಲ್ ಮುಝೈನ್), ಅಬ್ದುಲ್ ಅಝೀಝ್ (ಫಹದ್ ಅಲ್ ತಮಿಮಿ), ಶರೀಫ್ (ಅಲ್ ಮುಝೈನ್), ಉಸ್ಮಾನ್ (ಹಮಾದಿ ಜುಬೈಲ್), ಅಕ್ರಂ ಹಾಜಿ ಮೂಡಿಗೆರೆ (MGT ರಾಷ್ಟೀಯ ಸಮಿತಿಯ ಅಧ್ಯಕ್ಷರು), ಅಬ್ದುಲ್ ಸತ್ತಾರ್ ಜಯಪುರ, ಕ್ಲವ್ಡ್ ಸೆವೆನ್ (MGT ಕೇಂದ್ರೀಯ ಸಮಿತಿಯ ಅಧ್ಯಕ್ಷರು), ಬಿ.ಎಂ. ಹನೀಫ್ (ಹಿರಿಯ ಪತ್ರಕರ್ತರು), ಅಷ್ಪಕ್ ಅಹ್ಮದ್ ಖಾನ್ (ಸ್ಯಾಮ್ಕನ್), ನೂರ್ ಮೊಹಮ್ಮದ್ (ಓಶಿಯನ್ ಸ್ಕೇಲ್), ಸಲೀಮ್ (ಗಲ್ಫ್ ಪೈಪ್), ಅಶ್ಕಾಫ್ (ಪ್ಲಾಂಟ್ ಸಲ್ಯೂಶನ್), ಕಮರುದ್ದೀನ್ ಗೂಡಿನಬಳಿ (ಕೆಸಿಎಫ್‌ನ ವೃತ್ತಿಪರ ಅಭಿವೃದ್ಧಿ ವಿಭಾಗದ ಮುಖ್ಯಸ್ಥರು), ಬಶೀರ್ (ಅಲ್ ಫಲಕ್), ಬಶೀರ್ ಬಾಳುಪೇಟೆ (MGT ಸ್ಥಾಪಕ ಅಧ್ಯಕ್ಷರು ಹಾಗು ದಮಾಮ್ ಘಟಕದ ಹಾಲಿ ಅಧ್ಯಕ್ಷರು), ಇಕ್ಬಾಲ್ ಗಬ್ಗಲ್ (MGT ಜಿದ್ದಾ ಘಟಕದ ಅಧ್ಯಕ್ಷರು), ನಝೀರ್ ಜಯಪುರ (MGT ರಿಯಾದ್ ಘಟಕದ ಅಧ್ಯಕ್ಷರು), ಸಿರಾಜ್ ಚಕ್ಕಮಕ್ಕಿ (MGT ಅಂತರಾಷ್ಟ್ರೀಯ ಸಂಯೋಜಕರು), ಇರ್ಶಾದ್ ಚಕ್ಕಮಕ್ಕಿ (MGT ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ), ಹಾಗು ಫಾರೂಕ್ (ಪೋರ್ಟ್ ವೇ) - ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಭಾಷಣಕಾರರಾದ ಬಿ.ಎಂ. ಹನೀಫ್ ರವರು "ಪ್ರಚಲಿತ ವಿಧ್ಯಮಾನಗಳು ಹಾಗು ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣ" ಎಂಬ ವಿಷಯದ ಬಗ್ಗೆ ಕನ್ನಡದಲ್ಲಿ, ಉಸ್ತಾದ್ ಅಬು ಸುಫ್ಯಾನ್ ರವರು "ಕೌಟುಂಬಿಕ ಜೀವನ" ದ ಬಗ್ಗೆ ಬ್ಯಾರಿ ಭಾಷೆಯಲ್ಲಿ ಹಾಗು ಕಮರುದ್ದೀನ್ ರವರು "ಉನ್ನತ ವಿದ್ಯಾಭ್ಯಾಸ ಹಾಗು ಗಲ್ಫ್ ನಲ್ಲಿ ಉದ್ಯೋಗಾವಕಾಶ"ದ ಕುರಿತು ಇಂಗ್ಲಿಷ್ ನಲ್ಲಿ ಮಾತನಾಡಿದದು.

ಝಕರಿಯ ಹಾಜಿ ಹಾಗು ಸಲೀಮ್ ರವರು ಸಾಂದರ್ಭಿಕವಾಗಿ ಮಾತನಾಡಿ MGTಯ ಕಾರ್ಯಚಟುವಟಿಕೆ ಹಾಗು ಧೇಯೋದ್ದೇಶಗಳನ್ನು ಕೊಂಡಾಡಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವ ಭರವಸೆಯಿತ್ತರು.

ಅಕ್ರಮ್ ಹಾಜಿ, ಬಷೀರ್ ಬಾಳ್ಳುಪೇಟೆ ಹಾಗೂ ಅಬ್ದುಲ್ ಸತ್ತಾರ್ ಜಯಪುರ ಮಾತನಾಡಿ MGT ಯ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿ, ಪ್ರಾರಂಭಿಕವಾಗಿ ಸ್ಥಾಪಿಸಲು ಉದ್ದೇಶಿಸಿರುವ MGT ಯ ಕಚೇರಿ , ತರಬೇತಿ ಕೇಂದ್ರ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು . ಈ ಯೋಜನೆಗಳಿಗೆ ದಾನಿಗಳು ಹಾಗೂ ಹಿತೈಷಿಗಳು ಸಂಪೂರ್ಣ ಸಹಕಾರವನ್ನು ಕೊಟ್ಟು ,MGTಯ ಬೆಳವಣಿಗೆಗೆ ತನು-ಮನ-ಧನ ಸಹಾಯವನ್ನು ನೀಡಬೇಕಾಗಿ ಅಪೇಕ್ಷಿಸಿದರು .

ಮಲೆನಾಡ ಸಂಗಮ 2023ರ ಯಶಸ್ಸಿಗೆ ಕಾರಣಕರ್ತರಾದ ಪ್ರಧಾನ ದಾನಿಗಳು, ಮುಖ್ಯ ಭಾಷಣಕಾರರು ಮತ್ತು ಹಿತೈಷಿಗಳನ್ನು ಈ ಸಂದರ್ಭ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.

ತದನಂತರ ಶಬೀರ್ ರವರು ಧನ್ಯವಾದಗಳನ್ನು ಸಲ್ಲಿಸಿದರು. ಕೊನೆಯಲ್ಲಿ ಸಭಾಧ್ಯಕ್ಷರ ಭಾಷಣದಲ್ಲಿ ಅಬೂಬಕ್ಕರ್ ಹಂಡುಗುಳಿಯವರು ಮಲೆನಾಡ ಸಂಗಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬ ಸದಸ್ಯರನ್ನೂ ಅಭಿನಂದಿಸಿ, ದಾನಿಗಳು ಹಾಗು ಹಿತೈಷಿಗಳನ್ನು ಪ್ರಶಂಸಿಸಿ ಸಮಾರಂಭವನ್ನು ಸಮಾಪ್ತಿಗೊಸಿದರು.

ಇಬ್ರಾಹಿಂ ತೆಂಗಿನಮನೆಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ಕ್ವಿಝ್ ಸ್ಫರ್ಧೆಯನ್ನು ನೆರವೇರಿಸಿದರು.

ಸಭಾಕಾರ್ಯಕ್ರಮದ ನಂತರ MGT ಜುಬೈಲ್ ನ ಪ್ರಧಾನ ಕಾರ್ಯದರ್ಶಿ ಮೊಹ್ಸಿನ್ ರವರ ನೇತೃತ್ವದಲ್ಲಿ ನಡೆದ ಮಡಿಕೆ ಒಡೆಯುವ ಸ್ಪರ್ಧೆ ಹಾಗು ಹಗ್ಗ ಜಗ್ಗಾಟ ಸ್ಪರ್ಧೆಗಳು ನೆರೆದವರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು.

ಮಹಿಳೆಯರು ಹಾಗು ಮಕ್ಕಳ ವಿವಿಧ ಒಳಾಂಗಣ ಹಾಗು ಹೊರಾಂಗಣ ಸ್ಪರ್ಧೆಗಳು ನಡೆಯಿತು.




















































































share
ವಾರ್ತಾಭಾರತಿ
ವಾರ್ತಾಭಾರತಿ
Next Story
X