ಕೆ.ಸಿ.ಎಫ್ ಬಹ್‌ರೈನ್: ಗಲ್ಫ್ ಇಶಾರ ಚಂದಾ ಅಭಿಯಾನಕ್ಕೆ ಚಾಲನೆ

ಬಹರೈನ್: ಕೆ.ಸಿ.ಎಫ್ ಮುಖವಾಣಿ ಗಲ್ಫ್ ಇಶಾರ ಮಾಸಿಕ ಪತ್ರಿಕೆಯ 2025 ನೇ ಸಾಲಿನಚಂದಾ ಅಭಿಯಾನಕ್ಕೆ ಜ.24 ಶುಕ್ರವಾರ ದಂದು ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ವಿಟ್ಲ ಜಮಾಲುದ್ದೀನ್ ಅವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಸೆಂಟರ್ ಗುದೈಬಿಯಾದಲ್ಲಿ ಚಾಲನೆ ನೀಡಲಾಯಿತು.
ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿ ಅವರ ದುವಾದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಕೆ.ಸಿ.ಎಫ್ ಐ.ಸಿ ಪೆನಾನ್ಸ್ ಕಂಟ್ರೋಲರ್ ಜನಾಬ್ ಅಲಿ ಮುಸ್ಲಿಯಾರ್ ಕೊಡಗು ಉದ್ಘಾಟಿಸಿದರು. ಹನೀಫ್ ಮುಸ್ಲಿಯಾರ್ ರೆಂಜ ಸ್ವಾಗತ ಭಾಷಣ ಮಾಡಿದರು.
ಕಾರ್ಯಕ್ರಮದ ಭಾಗವಾಗಿ ನಡೆದ 'ಪುಸ್ತಕ ಓದುವಿಕೆಯ ಮಹತ್ವ' ವಿಚಾರಗೋಷ್ಠಿಯಲ್ಲಿ ಯೂನುಸ್ ಇಮ್ದಾದಿ ಉಸ್ತಾದ್, ಮಂಜುನಾಥ್ ದರ್ಬೆ ಹಾಗೂ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ವಿಷಯ ಮಂಡನೆಯನ್ನು ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಸೂಫಿ ಪೈಂಬಚ್ಚಾಲ್, ಶಿಕ್ಷಣ ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ರಿಲೀಫ್ ಅಧ್ಯಕ್ಷ ರಝಾಕ್ ಆನೇಕಲ್, ಕಾರ್ಯದರ್ಶಿ ಅಶ್ರಫ್ ಕಿನ್ಯ, ಆಡಳಿತ ವಿಭಾಗದ ಅಧ್ಯಕ್ಷ ಮೂಸಾ ಪೈಂಬಚ್ಚಾಲ್, ಕಾರ್ಯದರ್ಶಿ ಸಿದ್ದೀಕ್ ಎಣ್ಮೂರ್, ಮಾಜಿ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿ ಉಪಸ್ಥಿತರಿದ್ದರು.
ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು, ಪ್ರೊಫೆಸನಲ್ ವಿಭಾಗದ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ ಧನ್ಯ ವಾದಗೈದರು.
ಗಲ್ಫ್ ರಾಷ್ಟ್ರಗಳಾದ್ಯಂತ ಕನ್ನಡದ ಕಂಪನ್ನು ಪಸರಿಸಿದ ಗಲ್ಫ್ ಇಶಾರ ಪತ್ರಿಕೆಯ ಚಂದಾ ಅಭಿಯಾನಾವು ಫೆಬ್ರವರಿ 22 ರ ತನಕ ಬಹರೈನಿನಲ್ಲಿ ನಡೆಯಲಿದ್ದು, ಅನಿವಾಸಿ ಕನ್ನಡಿ ಗರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರಾಗಬೇಕೆಂದು ರಾಷ್ಟ್ರೀಯ ಸಮಿತಿಯ ನಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.