ಸೌದಿ ಅರಬಿಯ: ಮಲ್ನಾಡ್ ಗಲ್ಫ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಿಂದ 'ಮಲೆನಾಡ ಸಂಗಮ' ಕಾರ್ಯಕ್ರಮ

ಸೌದಿ ಅರಬಿಯ: ಮಲ್ನಾಡ್ ಗಲ್ಫ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್(ಎಂಜಿಟಿ) ವತಿಯಿಂದ 'ಮಲೆನಾಡ ಸಂಗಮ' ಕಾರ್ಯಕ್ರಮವು ಇತ್ತೀಚೆಗೆ ಜಿದ್ದಾದ ಪಾಲ್ಮ್ ಲ್ಯಾಂಡ್ ನಲ್ಲಿ ನಡೆಯಿತು.
ಎಂಜಿಟಿ ಜಿದ್ದಾ ವಲಯ ಅಧ್ಯಕ್ಷ ಜಲಾಲ್ ಬೇಗ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇರಣಾ ಭಾಷಣಕಾರ ರಫೀಕ್ ಮಾಸ್ಟರ್, ಡಾ.ಹಬೀಬ್ ಆಲಂ ರಝ, ಕಾಸಿಂ ಅಹ್ಮದ್ (ಮಂಗಳೂರು) ಆಗಮಿಸಿದ್ದರು.
ಎಂಜಿಟಿ ಕೇಂದ್ರ ಸಮಿತಿಯ ಅಧ್ಯಕ್ಷ ಇರ್ಷಾದ್ ಅಬ್ದುಲ್ ರಹ್ಮಾನ್ ಚಕ್ಮಕ್ಕಿ, ಗೌರವಾಧ್ಯಕ್ಷ ಅಬ್ದುಲ್ ಸತ್ತಾರ್ ಜಯಪುರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಜಯಪುರ, ಟ್ರಸ್ಟಿ ಶರೀಫ್ ಕಳಸ, ಫಾರೂಕ್ ಅರಬ್ ಎನರ್ಜಿ, ಝೈನುದ್ದಿನ್ ಮುನ್ನೂರು, ಜಾವಿದ್ ಕಲ್ಲಡ್ಕ, ಮುಹಮ್ಮದ್ ರಾಫಿ, ಮುಸ್ತಾಕ್ ಗಬ್ಗಲ್, ಇಸ್ಮಾಯೀಲ್ ಹೈದ್ರೋಸ್, ಇಕ್ಬಾಲ್ ಗಬ್ಗಲ್, ಹಸನ್ ರಜಬ್, ಹಾರಿಸ್ ಬಿಳಗುಳ, ಅದ್ನಾನ್ ಅಹ್ಮದ್, ನಾಸಿರ್ ಬಾಳೆಹೊನ್ನೂರು, ಝಕರಿಯಾ ನೆಲ್ಯಾಡಿ, ತ್ವಾಹಾ ಮುಹಮ್ಮದ್ ಕೊಡ್ಲಿಪೇಟೆ, ಸಮೀರ್ ಕೊಡ್ಲಿಪೇಟೆ, ಹಾರಿಸ್ ಬುಖಾರಿ, ಸಫ್ವಾನ್ ಉಮರ್, ಝುಬೈರ್ ಉಪ್ಪಳ್ಳಿ, ಸಮೀರ್ ರಿಪ್ಪನ್ ಪೇಟೆ, ಇಮ್ರಾನ್ ಅರಸೀಕೆರೆ, ಜಾಶಿಮ್ ಕಲ್ಲಡ್ಕ, ಅನ್ಸಾರ್ ನೆಲ್ಯಾಡಿ, ನೂರ್ ಮುಹಮ್ಮದ್, ಸಾದ್ ಬಾಳೆಹೊನ್ನೂರು, ಅಯಾಝ್ ಮತ್ತು ಎಂಜಿಟಿ ಕೇಂದ್ರೀಯ ಸಮಿತಿ ಸೌದಿ ಅರಬಿಯಾದ -ದಮ್ಮಾಮ್, ಜುಬೈಲ್, ರಿಯಾದ್ ನಿಂದ ಸಹ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಕಿರಾಅತ್ ಸ್ಪರ್ಧೆ, ಹಿರಿಯರಿಗೆ ಆಟೋಟ ಸ್ಪರ್ಧೆಗಳು ಹಾಗೂ ವಿವಿಧ ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.







