ಅಬುಧಾಬಿ ಕೈಗಾರಿಕಾ ಪ್ರದೇಶದ ಮೇಲೆ ಡ್ರೋನ್ ದಾಳಿ: ವರದಿ

ಸಾಂದರ್ಭಿಕ ಚಿತ್ರ| PTI
ಅಬುಧಾಬಿ: ಮಂಗಳವಾರ ಅಬುಧಾಬಿಯ ರುವೈಸ್ ಕೈಗಾರಿಕಾ ವಲಯದ ಮೇಲೆ ಮಂಗಳವಾರ ಡ್ರೋನ್ ದಾಳಿ ನಡೆದ ಬಳಿಕ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಪ್ರದೇಶದಲ್ಲಿ `ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ(ಎಡಿಎನ್ಒಸಿ) ಸೌಲಭ್ಯಗಳಿದ್ದು ಇಲ್ಲಿ ದಿನಕ್ಕೆ 9,22,000 ಬ್ಯಾರೆಲ್ಗಳಷ್ಟು ತೈಲವನ್ನು ಸಂಸ್ಕರಿಸಬಹುದು. ಜೊತೆಗೆ ಹಲವಾರು ರಾಸಾಯನಿಕ, ರಸಗೊಬ್ಬರ ಮತ್ತು ಕೈಗಾರಿಕಾ ಅನಿಲ ಸ್ಥಾವರಗಳಿವೆ. ಈ ಮಧ್ಯೆ, ಮಂಗಳವಾರ ತನ್ನ ವಾಯುರಕ್ಷಣಾ ವ್ಯವಸ್ಥೆಯು 9 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿದ್ದು ಇದರಲ್ಲಿ 8ನ್ನು ಹೊಡೆದುರುಳಿಸಲಾಗಿದೆ. ಒಂದು ಕ್ಷಿಪಣಿ ಸಮುದ್ರದಲ್ಲಿ ಪತನಗೊಂಡಿದೆ ಎಂದು ಯುಎಇ ರಕ್ಷಣಾ ಇಲಾಖೆ ಹೇಳಿದೆ.
Next Story





