ದುಬೈನಲ್ಲಿ ತುರ್ತು ಎಚ್ಚರಿಕೆಗಳ ನಡುವೆ ಜಬಲ್ ಅಲಿ ಪೋರ್ಟ್ ಮೇಲೆ ಕ್ಷಿಪಣಿ ದಾಳಿ: ವರದಿ

Photo Credit : hindustantimes
ದುಬೈ: ದೇಶಾದ್ಯಂತ ನಿವಾಸಿಗಳು ಮತ್ತು ಪ್ರವಾಸಿಗರಿಗೆ ತುರ್ತು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದ ಕೆಲವೇ ಕ್ಷಣಗಳಲ್ಲಿ, ದುಬೈ ನ ಜಬಲ್ ಅಲಿ ಪೋರ್ಟ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಸಂಭಾವ್ಯ ಕ್ಷಿಪಣಿ ಬೆದರಿಕೆ ಹಿನ್ನೆಲೆಯಲ್ಲಿ ತಕ್ಷಣ ಆಶ್ರಯ ಪಡೆಯುವಂತೆ ಸೂಚಿಸುವ ಎಚ್ಚರಿಕೆಗಳನ್ನು ಅಧಿಕಾರಿಗಳು ಮೊಬೈಲ್ ಫೋನ್ಗಳಿಗೆ ರವಾನಿಸಿದ್ದರು. ಇದರ ಬೆನ್ನಲ್ಲೇ ಜಬಲ್ ಅಲಿ ಪೋರ್ಟ್ ಪ್ರದೇಶದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ, ಪೋರ್ಟ್ ಮೇಲೆ ದಾಳಿ ನಡೆದಿರುವ ಕುರಿತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಘಟನೆಯ ಸ್ವರೂಪ, ಸಂಭವನೀಯ ಹಾನಿ ಹಾಗೂ ಸಾವುನೋವುಗಳ ಬಗ್ಗೆ ತಕ್ಷಣ ಸ್ಪಷ್ಟ ಮಾಹಿತಿ ದೊರಕಿಲ್ಲ.
ಘಟನೆಯ ಕುರಿತಂತೆ ಸಂಬಂಧಿತ ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸುವಂತೆ ಮನವಿ ಮಾಡಲಾಗಿದೆ.




