ಎಂಜಿಟಿ, ದಮಾಮ್-ಖೋಬರ್ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ದಮಾಮ್ : ಮಲ್ನಾಡ್ ಗಲ್ಫ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ (ರಿ.) ಇದರ ದಮಾಮ್ - ಖೋಬರ್ ಘಟಕದ ವಾರ್ಷಿಕ ಮಹಾಸಭೆಯು ಮೇ.23ರಂದು ಇಸ್ಥಿರಾ, ದಮಾಮ್ ನಲ್ಲಿ ನಡೆಯಿತು.
ಅಧ್ಯಕ್ಷರಾದ ಅಫ್ಝಲ್ ಸಮದ್ ಕೊಪ್ಪ ಅವರು ಎಲ್ಲರ ಸಹಕಾರ ಮತ್ತು ಸದಸ್ಯರ ಸಮರ್ಪಣಾ ಮನೋಭಾವದ ಬಗ್ಗೆ ಮಾತನಾಡಿ, ಸಂಸ್ಥೆಯ ಧ್ಯೇಯ ಮತ್ತು ದೂರದೃಷ್ಟಿಯ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಹಳೆಯ ಸಮಿತಿಯನ್ನು ಬರ್ಖಸ್ತು ಮಾಡಿ, ಹೊಸ ಸಮಿತಿಯನ್ನು ರಚಿಸಲಾಯಿತು.
ಹೊಸ ಸಮಿತಿಗೆ ಅಧ್ಯಕ್ಷರಾಗಿ ಬಶೀರ್ ಗುಡಿ ಚಿಕ್ಕಮಗಳೂರು ಅವರು ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಜಾವಗಲ್, ನೆಸ್ಮಾ ಕೋಶಾಧಿಕಾರಿಯಾಗಿ ಶಫೀಕ್ ಕೂರ್ಗ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಅಫ್ಝಲ್ ಸಮದ್ ಕೊಪ್ಪ, ಉಪಾಧ್ಯಕ್ಷರಾಗಿ ಅಸ್ಗರ್ ತಳಗೂರು, ಅದಂ ಕೊಡಗು, ಮುಹಮ್ಮದ್ ಸಾದಿಕ್ ಬಾಳೆಹೊನ್ನೂರು, ಸಹ ಕಾರ್ಯದರ್ಶಿಗಳಾಗಿ ದರ್ವೇಶ್ ಮುಹಮ್ಮದ್ ಹುಸೇನ್ ಬಾಳೆಹೊನ್ನೂರು, ಶೌಕತ್ ತೀರ್ಥಹಳ್ಳಿ, ಜೊತೆ ಕೋಶಾಧಿಕಾರಿಗಳಾಗಿ ಇರ್ಫಾನ್ ಕೂರ್ಗ್, ನಫೀದ್ ಚಿಕ್ಕಮಗಳೂರು, ಶಿಕ್ಷಣ ಸಂಯೋಜಕರಾಗಿ ಫಯಾಜ್ ಹಿರೇಬೈಲ್, ವೈದ್ಯಕೀಯ ಸಂಯೋಜಕರಾಗಿ ಝಮೀರ್ ಬಾಳೆಹೊನ್ನೂರು, ಝಕೀರ್ ಹರಿಹರಪುರ, ಅಕ್ವಿದ್ ಉಡುಪಿ, ಮಾದ್ಯಮ ವಿಭಾಗಕ್ಕೆ ಷರೀಫ್ ಚಕ್ಕಮಕ್ಕಿ, ಖಲಂದರ್ ಜಾವಗಲ್, ನಿಜಾಮುದ್ದಿನ್ ಮೂಡಿಗೆರೆ ಹಾಗೂ ಹಿರಿಯ ಸಲಹೆಗಾರರಾಗಿ ಅಬ್ದುಲ್ ಸತ್ತಾರ್ ಜಯಪುರ, ಬಷೀರ್ ಬಾಳ್ಳುಪೇಟೆ, ಇಕ್ಬಾಲ್ ಬಾಳೆಹೊನ್ನೂರು, ಅಶ್ರಫ್ ಜೆ.ವಿ.ಸಿ ಚಿಕ್ಕಮಗಳೂರು, ಹನೀಫ್ ಬಿಳಗುಳ, ಮನ್ಸೂರ್ ಚಿಕ್ಕಮಗಳೂರು, ಇಸ್ಮಾಯಿಲ್ ವೆದರ್ಫೋರ್ಡ್ ಬಾಳೆಹೊನ್ನೂರು, ಸಲೀಂ ಬಿನ್ ಕುರಾಯಾ, ಜನಾಬ್ ಅಶ್ರಫ್ ತೀರ್ಥಹಳ್ಳಿ ಆಯ್ಕೆ ಮಾಡಲಾಯಿತು.
ಹೊಸ ಸಮಿತಿಯ ರಚನೆಯ ನಂತರ, ನೂತನ ಅಧ್ಯಕ್ಷ ಬಷೀರ್ ಗುಡಿ ಅವರು ಎಲ್ಲರ ಸಹಕಾರ ಕೋರಿದರು. ದರ್ವೇಶ್ ಮುಹಮ್ಮದ್ ಹುಸೇನ್ ಬಾಳೆಹೊನ್ನೂರು ಅವರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.