Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ವಿದ್ಯೆಯನ್ನು ಪ್ರೋತ್ಸಾಹಿಸುವುದು ನಿಜವಾದ...

ವಿದ್ಯೆಯನ್ನು ಪ್ರೋತ್ಸಾಹಿಸುವುದು ನಿಜವಾದ ರಾಷ್ಟ್ರ ಪ್ರೇಮ: ಸ್ಪೀಕರ್‌ ಯುಟಿ ಖಾದರ್

ಡಿಕೆಎಸ್‌ಸಿ - ಯುಎಇ ರಜತ ಮಹೋತ್ಸವ, ಫ್ಯಾಮಿಲಿ ಮುಲಾಕಾತ್

ವಾರ್ತಾಭಾರತಿವಾರ್ತಾಭಾರತಿ16 Jan 2025 11:47 PM IST
share
ವಿದ್ಯೆಯನ್ನು ಪ್ರೋತ್ಸಾಹಿಸುವುದು ನಿಜವಾದ ರಾಷ್ಟ್ರ ಪ್ರೇಮ: ಸ್ಪೀಕರ್‌ ಯುಟಿ ಖಾದರ್

ಅಜ್ಮಾನ್: ಸಮಾಜದ ಶೈಕ್ಷಣಿಕ ಸಬಲೀಕರಣದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಸಾಧನೆಯನ್ನು ಮಾಡುತ್ತಾ, ಅನಾಥ ಮತ್ತು ನಿರ್ಗತಿಕ ಮಕ್ಕಳು ಸಹಿತ ಸುಮಾರು 3000ಕ್ಕೂ ಅಧಿಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್-ಅಲ್ ಇಹಸಾನ್ ಎಜುಕೇಷನಲ್ ಇನ್ಸಿಟ್ಯೂಷನ್ ಶೈಕ್ಷಣಿಕ, ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಗಣನೀಯ ಮಟ್ಟದ ಸೇವೆಯನ್ನು ನೀಡುತ್ತಿರುವ ಬಹು ಜನಪ್ರಿಯ ಸಂಸ್ಥೆಯಾಗಿದೆ.


ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು ಎ ಇ ವತಿಯಿಂದ ಜ.12ರಂದು ಅಜ್ಮಾನ್‌ನ ವುಡ್ ಲೆಮ್ ಪಾರ್ಕ್ ಸ್ಕೂಲ್ ಸಭಾಂಗಣದಲ್ಲಿ ಅದ್ದೂರಿಯಾದ ಸಿಲ್ವರ್ ಜ್ಯುಬಿಲಿ ಸಮಾರಂಭ ಮತ್ತು ಫ್ಯಾಮಿಲಿ ಮುಲಾಕತ್ ಕಾರ್ಯಕ್ರಮ ಏರ್ಪಡಿಸಲಾಯಿತು.


ಕರ್ನಾಟಕ ವಿಧಾನ ಸಭಾ ಸಭಾಪತಿ ಯು ಟಿ ಖಾದರ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ, UAE, ಸೌದಿ ಅರೇಬಿಯಾ ಸಹಿತ ಗಲ್ಫ್ ರಾಷ್ಟ್ರಗಳಿಂದ ಆಗಮಿಸಿದ ಹಲವಾರು ವಿಶೇಷ ಅತಿಥಿಗಳು, ಉಲಮಾ, ಸಾದಾತ್, ಉಮರಾಗಳು, ಪ್ರಖ್ಯಾತ ಉದ್ಯಮಿಗಳು ಸಹಿತ ಸುಮಾರು 1000 ದಷ್ಟು DKSCಯ ಹಿತೈಷಿಗಳು ತಮ್ಮ ಕುಟುಂಬ ಸಮೇತ ಭಾಗವಹಿಸಿದ್ದರು.


ಸಂಸ್ಥೆಯ UAE ಯ ಪ್ರಧಾನ ಅಧ್ಯಕ್ಷ ಅಸ್ಸಾಯ್ಯದ್ ತಾಹಾ ಬಾಫಖಿ ತಂಙಳ್ ಮತ್ತು ಕಾರ್ಯಾಧ್ಯಕ್ಷ ಎಂ ಇ ಮೂಳೂರು ಅವರ ನಾಯಕತ್ವದಲ್ಲಿ ಸಿಲ್ವರ್ ಜುಬಿಲಿ ಕಾರ್ಯಕ್ರಮದ ಚಯರ್ ಮೆನ್ ಇಕ್ಬಾಲ್ ಹಾಜಿ ಕಣ್ಣಂಗಾರ್ ಮುಂದಾಳ್ತನದಲ್ಲಿ ಕಾರ್ಯಕ್ರಮ ಬೆಳಿಗ್ಗೆ 8ರಿಂದ ಸಂಜೆ 8 ಘಂಟೆಯ ವರೆಗೆ ನಡೆಯಿತು.

ಗೌರವ ಅಧ್ಯಕ್ಷರಾದ ತ್ವಾಹಾ ಬಾಫಖಿ ತಂಙಳ್ ರವರ ದುವಾದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.


ಸಂಜೆ ನಡೆದ ಪ್ರಶಸ್ತಿ ವಿತರಣಾ ಸಭಾ ಕಾರ್ಯಕ್ರಮದಲ್ಲಿ ಸ್ಪೀಕರ್ ಯು ಟಿ ಖಾದರ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ, ಯು ಟಿ ಖಾದರ್ ಅವರು DKSC ಮಾಡುತ್ತಿರುವ ಶೈಕ್ಷಣಿಕ ಸೇವೆ ಮತ್ತು ಆ ನಿಟ್ಟಿನಲ್ಲಿ ಆ ಸ್ಥಾಪನೆಯ ಸಾಧನೆಯನ್ನು ಶ್ಲಾಘಿಸಿದರು. ಉತ್ತಮವಾದ ವಿದ್ಯಾವಂತ ಪ್ರೌಢ ಸಮಾಜವೇ ದೇಶದ ಉನ್ನತಿಗೆ ಅಡಿಪಾಯ. ಹಾಗಾಗಿ ಪ್ರತೀ ಭಾರತೀಯನು ತನ್ನ ಮಕ್ಕಳಿಗೆ ಮತ್ತು ತನ್ನ ಸಮಾಜಕ್ಕೆ ಉತ್ತಮ ವಿದ್ಯೆ ಸಿಗುವಂತೆ ಪ್ರಯತ್ನಿಸುವುದು ಅವನ ದೇಶ ಭಕ್ತಿಯ ಅಂಗ ಎಂದು ಶಿಕ್ಷಣದ ಮಹತ್ವವನ್ನು ವಿವರಿಸಿದರು.


DKSC ಯ ಅಲ್ ಇಹಸಾನ್ ವಿದ್ಯಾ ಸಂಸ್ಥೆಯ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ, ಮುಖ್ಯವಾಗಿ ಮುಂದಿನ ಯೋಜನೆಗಳಾದ ಇಂಜಿನಿಯರಿಂಗ್, ಪಾರಾ ಮೆಡಿಕಲ್, ಮೆಡಿಕಲ್, ವೃತ್ತಿ ತರಬೇತಿ ಶೈಕ್ಷಣಿಕ ಕೇಂದ್ರ, ಆಸ್ಪತ್ರೆ ಮೊದಲಾದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅದಕ್ಕಾಗಿ ತಮ್ಮ ಕೈಲಾದ ಸಹಾಯವನ್ನು ಒದಗಿಸುವುದಾಗಿ ಭರವಸೆ ಕೊಟ್ಟರು.

ಪ್ರಧಾನ ಕಾರ್ಯದರ್ಶಿ ಯೂಸುಫ್ ಅರ್ಲಪದವು ತಮ್ಮ ಸ್ವಾಗತ ಭಾಷಣದಲ್ಲಿ DKSCಯ ಪರಿಚಯ ನೀಡುತ್ತಾ DKSC ಬಂದ ದಾರಿಯ ವಿವರಣೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.


ಸಿಲ್ವ‌ರ್ ಜ್ಯುಬಿಲಿ ಚಯರ್ ಮ್ಯಾನ್ ಹಾಜಿ ಇಕ್ಬಾಲ್ ಕಣ್ಣಂಗಾರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ DKSC UAE ಯ ಕಳೆದ 25 ವರುಷಗಳ ಸಾಮಾಜಿಕ ಸೇವೆಯ ವಿವರ ನೀಡುತ್ತಾ ಈ ಸಿಲ್ವರ್ ಜ್ಯುಬಿಲಿಯಲ್ಲಿ DKSC ನಡೆಸಿದ 12 ಕಾರ್ಯಕ್ರಮಗಳು ಮತ್ತು ಈ ನಿಟ್ಟಿನಲ್ಲಿ DKSC UAE ವಹಿಸಿಕೊಂಡ ಅಲ್ ಇಹಸಾನ್ ಅಮ್ಮಿಸಿಸ್ಟ್ರೇಟಿವ್ ಕಾಂಪ್ಲೆಕ್ಸ್ ಇದರ ವಿವರ ನೀಡಿ ಇದಕ್ಕಾಗಿ ಶ್ರಮ ಪಟ್ಟ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.


ಕಾರ್ಯಾಧ್ಯಕ್ಷರಾದ ಎಂ ಇ ಮೂಳೂರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ DKSC ಇದುವರೆಗೆ ಸಾಧಿಸಿ ತೋರಿಸಿದ ವಿವಿಧ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ, ಶೈಕ್ಷಣಿಕ ಮತ್ತು ನೈತಿಕ ಮೈಲಿಗಲ್ಲುಗಳು ಮತ್ತು ಅದಕ್ಕಾಗಿ ಮುಖ್ಯವಾಗಿ ದೊಡ್ಡ ರೀತಿಯಲ್ಲಿ ಸಹಕರಿಸಿದ ಸಮಾಜದ ನಾಯಕರುಗಳು, ಉದ್ಯಮಿಗಳಿಗೆ ಮತ್ತು ಇತರ ಹಿತ ಚಿಂತಕರು ಗಳಿಗೆ ಧನ್ಯವಾದವನ್ನು ಅರ್ಪಿಸಿದರು. DKSC ಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸುತ್ತಾ ಎಲ್ಲರ ಸಹಕಾರವನ್ನು ಯಾಚಿಸಿದರು.


ಸೌದಿ ಅರೇಬಿಯಾದಿಂದ ಆಗಮಿಸಿದ್ದ ವಿಶೇಷ ಅತಿಥಿ, DKSC ಕೇಂದ್ರ ಸಮಿತಿಯ ನಾಯಕರಾದ ಹಾಜಿ K H ರಫೀಕ್ ಅವರು ತಮ್ಮ ಭಾಷಣದಲ್ಲಿ DKSC ಯ ಕಾರ್ಯ ವೈಖರಿ, DKSCಯ ಇದುವರೆಗಿನ ಸಾಧನೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಮುಂದಿನ ಯೋಜನೆಗಳ ಬಗ್ಗೆ UT ಖದರ್ ಅವರಿಗೆ ತಿಳಿಸಿ, DKSC ನೀಡುತ್ತಿರುವ ಶೈಕ್ಷಣಿಕ ಸೇವೆಯ ಮಹತ್ವವನ್ನು ಪರಿಗಣಿಸಿ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ವಿನಂತಿಸಿದರು.


ಅಂದಿನ ಇತರ ಮುಖ್ಯ ಅತಿಥಿಗಳಾಗಿ DKSCಯ ಹಿತ ಚಿಂತಕರಾದ ಅಕ್ರಮ್ ಎಂ ಶೇಕ್ ( ಸ್ಥಾಪಕ ನಿರ್ದೇಶಕರು- ಇಂಟೆರ್ ಶಿಪ್ ಸರ್ವಿಸೆಸ್ ), ಡಾ. ಅಬ್ದುಲ್ ಶಕೀಲ್ (ಫೌಂಡರ್ - Dr ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ), ಉಮರ್ ಹಾಜಿ ( ಸ್ಥಾಪಕ ನಿರ್ದೇಶಕರು, ಅಭಿಮಾನ್ ಕನ್ಟ್ರಕ್ಷನ್ಸ್) ಅವರ ಪ್ರತಿನಿಧಿ ಸಮೀರ್, ಅಶ್ರಫ್ ಮಾಂತೂರ್ (M D: ಕರೀಯತ್ ಶಮ್ಸ್ ಕನ್ಟ್ರಕ್ಷನ್ಸ್), ಎದ್ದು ಹೊನ್ನಾವರ್, ಡಾ. ಅಬೂಬಕರ್ ಅರ್ಲಪದವು ( ಅಧ್ಯಕ್ಷರು- ಕರ್ನಾಟಕ ವಿಜ್ಞಾನ ಪರಿಷತ್, ದಕ್ಷಿಣ ಕನ್ನಡ), ಹಾಜಿ ಕೆ ಎಚ್ ರಫೀಕ್, ಹಾಜಿ ಅಬ್ದುಲ್ ಅಝೀಝ್ ಮೂಳೂರು (DKSC ಕೇಂದ್ರ ಸಮಿತಿ) ಹಿದಾಯತ್ ಅಡ್ಡೂರು ( ಅಧ್ಯಕ್ಷರು- BCCI ), ಇಸ್ಮಾಯಿಲ್ (ಮ್ಯಾನೇಜಿಂಗ್ ಡೈರೆಕ್ಟರ್, ಬಾಬ್ ಅನ್ನೂರ್ ರೆಸ್ಟೋರಂಟ್ಸ್), ಬಷೀರ್ ಕಿನ್ನಿಂಗಾರ್ ( ಡೈರೆಕ್ಟರ್- ಮ್ಯಾಕ್ಸ್ ಕೇರ್ ಮೆಡಿಕಲ್ ಸೆಂಟರ್), ತೋನ್ಸೆ ಹೆಲ್ತ್ ಸೆಂಟರ್ ಮಾಲಕ ಬಿ ಎಂ ಜಾಫರ್ ರವರ ಪ್ರತಿನಿಧಿ ಖಾಲಿದ್ ಸಾಬ್ (ಮುಂಬೈಯ ಹೆಸರಾಂತ ಉದ್ಯಮಿ ಮತ್ತು ರಾಜಕೀಯ ಮುಂದಾಳು), ರಶೀದ್ ಪಾಷಾ ( ಉದ್ಯಮಿ - ಸೌದಿ ಅರೇಬಿಯಾ), ಹಾಜಿ ಅಬ್ದುಲ್ಲಾ ಕೂವಂಜ, P A ಅಬೂಬಕ‌ರ್ ಮತ್ತು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿಶೇಷ ಅತಿಥಿಗಳು ಉಪಸ್ಥಿತರಿದ್ದರು.


ಅಕ್ರಮ್ ಎಂ ಶೇಕ್, ಡಾ. ಅಬ್ದುಲ್ ಶಕೀಲ್, ಇಬ್ರಾಹಿಮ್ ಹಾಜಿ ಕಿನ್ಯ, ಇಕ್ಬಾಲ್ ಹಾಜಿ ಕಣ್ಣಂಗಾ‌ರ್ ಅವರನ್ನು ಸನ್ಮಾನಿಸಲಾಯಿತು.

DKSC UAE ಯ 2024 ಅವಧಿಯಲ್ಲಿ ಆಯೋಜಿಸಿ ಅನುಷ್ಠಾನಗೊಳಿಸಿದ ವಿವಿಧ ಕಾರ್ಯಕ್ರಮಗಳ, ಯೋಜನೆಗಳ ಚಯರ್ಮ್ಯಾನ್ ಮತ್ತು ಅವರ ಸಹವರ್ತಿಗಳನ್ನು ಸನ್ಮಾನಿಸಲಾಯಿತು.

ಅಕ್ರಮ್ ಎಂ ಶೇಕ್, ಡಾ. ಅಬ್ದುಲ್ ಶಕೀಲ್, ಅಶ್ರಫ್ ಮಂತೂರು ಅವರು ತಮ್ಮ ಭಾಷಣದಲ್ಲಿ DKSC ಯ ಸಮಾಜ ಸೇವೆ ಮತ್ತು ಕಾರ್ಯ ವೈಖರಿಯ ಬಗ್ಗೆ ಮಾತಾಡುತ್ತಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರಲ್ಲದೆ ಮುಂದಕ್ಕೆ ತಾವು ನಿರಂತರವಾಗಿ DKSC ಯ ಸೇವೆಯಲ್ಲಿ ಸಹಕರಿಸುವುದಾಗಿ ಭರವಸೆ ಇತ್ತರು.


ಯು ಟೂಬ್ ಸ್ಟಾರ್ ಮಾಸ್ಟರ್ ನಸೀಫ್ ಅವರ ಮದ್ ಹ್ ಮತ್ತು ನಾತ್ ವಿಶೇಷ ಆಕರ್ಷಣೆಯಾಗಿತ್ತು.

DKSC ಯ ಸಾಧನೆಯ ವಿವರ ನೀಡುವ ಒಂದು ಆಡಿಯೋ, ವೀಡಿಯೊ ಪ್ರದರ್ಶನಾ ರೀಲ್ ಅನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ಫ್ಯಾಮಿಲಿ ಮುಲಾಕತ್ ಅಂಗವಾದ ಸ್ಪರ್ಧೆಗಳು, ಆಟೋಟ ಮೇಲಾಟಗಳು, ಹಗ್ಗ ಜಗ್ಗಾಟ, ಮುಖ್ಯವಾಗಿ ಮಹಿಳೆಯರ ಪಾಕ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮತ್ತು ಪುರುಷರು ಪಾಲ್ಗೊಂಡರು.


DKSCಯ ಪದಾಧಿಕಾರಿಗಳು:

ಇಬ್ರಾಹಿಂ ಹಾಜಿ ಕಿನ್ಯಾ, ನವಾಝ್‌ ಕೋಟೆಕಾರ್‌, ಸಜಿಪ ರಹ್ಮಾನ್‌, ಮುಹಮ್ಮದ್‌ ಸುಲೈಮಾನ್‌, ಸಮದ್‌ ಬಿರಲಿ, ಅಬ್ದುಲ್ಲಾ ಪೆರುವಾಯಿ, ಇಬ್ರಾಹಿಂ ಕಲತೂರ್‌, ರಿಯಾಝ್‌ ಕುಲಾಯಿ, ಅಬ್ದುಲ್‌ ಲತೀಫ್‌ ತಿಂಗಳಾಡಿ, ಅಕ್ಬರ್‌ ಅಲಿ ಸುರತ್ಕಲ್‌, ಸಮೀರ್‌ ಕೊಲ್ನಾಡ್‌, ವಹಾಬ್‌ ಕುಂಚಿಲ್‌ಕುಂಜೆ, ಶರೀಫ್‌ ಬೊಲ್ಮಾರ್‌, ಅಶ್ರಫ್‌ ಸಟ್ಟಿಕಲ್‌, ಶುಕೂರ್‌ ಮನಿಲ, ಬಾಬಾ ಮೂಸಬ್ಬ, ಅಬ್ದುಲ್‌ ಹಮೀದ್‌ ಕಬಾಯಿಲ್‌, ಕಮರುದ್ದಿನ್‌ ಗುರುಪುರ, ಶಬೀರ್‌ ಜೋಕಟ್ಟೆ, ಮುಹಮ್ಮದ್‌ ಅಲಿ ಮೂಡುತೋಟ, ಸಿರಾಜ್‌ ಮೂಳೂರು, ತೌಫೀಕ್‌ ಕುಂದಾಪುರ, ನಝೀರ್‌ ಕುಪ್ಪೆಟ್ಟಿ, ಮುಹಮ್ಮದ್‌ ಅಲಿ ಮೂಡುತೋಟ, ರಫೀಕ್‌ ಸಟ್ಟಿಕಲ್‌, ರಿಯಾಝ್‌ ಮೂಡುತೋಡ, ಹಸಬ್‌ ಬಾವ.

ಉಮರ್ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ನವಾಝ್ ಕೋಟೆಕಾರ್ ವಂದಿಸಿದರು.





































share
ವಾರ್ತಾಭಾರತಿ
ವಾರ್ತಾಭಾರತಿ
Next Story
X