Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈ: ಎನ್‌ಆರ್‌ಐ ಉದ್ಯಮಿ ನಾಸಿರ್...

ದುಬೈ: ಎನ್‌ಆರ್‌ಐ ಉದ್ಯಮಿ ನಾಸಿರ್ ಸೈಯದ್‌ಗೆ ಐಕನ್ಸ್ ಆಫ್ ಯುಎಇ ಅವಾರ್ಡ್

ವಾರ್ತಾಭಾರತಿವಾರ್ತಾಭಾರತಿ15 Oct 2023 10:12 AM IST
share
ದುಬೈ: ಎನ್‌ಆರ್‌ಐ ಉದ್ಯಮಿ ನಾಸಿರ್ ಸೈಯದ್‌ಗೆ ಐಕನ್ಸ್ ಆಫ್ ಯುಎಇ ಅವಾರ್ಡ್

ದುಬೈನ ದಿ ಪಾಮ್‌ನಲ್ಲಿರುವ ತಾಜ್ ಎಕ್ಸೋಟಿಕಾ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವರ್ಣರಂಜಿತ ಸಮಾರಂಭವೊಂದರಲ್ಲಿ ಅನಿವಾಸಿ ಭಾರತೀಯ ಉದ್ಯಮಿ ನಾಸಿರ್ ಸೈಯದ್ ಅವರಿಗೆ ಎನ್ ಕೆಎನ್ ಮಾಧ್ಯಮ ಸಂಸ್ಥೆಯ ವತಿಯಿಂದ ‘ಐಕನ್ಸ್ ಆಫ್ ಯುಎಇ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಈ ಸಮಾರಂಭದಲ್ಲಿ ಡೆನ್ಯೂಬ್ ಗ್ರೂಪ್‌ನ ಅಧ್ಯಕ್ಷ ರಿಝ್ವಾನ್ ಸಾಜನ್, ಪೆಟ್ರೋಕೆಮ್ ಮಿಡ್ಲ್ ಈಸ್ಟ್‌ನ ಸಿಇಒ ಯೋಗೇಶ್ ಮೆಹ್ತಾ, ತುಂಬೆ ಗ್ರೂಪ್‌ನ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ವೆಸ್ಟ್ ರೆನ್ ಗ್ರೂಪ್‌ನ ನರೇಶ್ ಕುಮಾರ್ ಭವ್ನಾನಿ ಸಹಿತ ವಿವಿಧ ಉದ್ಯಮ ವಲಯಗಳ 16 ಪ್ರಖ್ಯಾತ ಉದ್ಯಮ ನಾಯಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೇಂದ್ರದ ವಿದೇಶಾಂಗ ವ್ಯವಹಾರಗಳ ಮಾಜಿ ರಾಜ್ಯ ಸಚಿವ, ಸಂಸದ ಹಾಗೂ ಖ್ಯಾತ ಲೇಖಕ ಶಶಿ ತರೂರ್ ಉಪಸ್ಥಿತರಿದ್ದು, ನಾಸಿರ್ ಸೈಯದ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.


ಮೂಲತಃ ಮೂಡುಬಿದಿರೆಯವರಾದ, ಸೈಯದ್ ಮೊಹಿದಿನ್ ಹಾಗೂ ಖುರ್ಷಿದ್ ಬೇಗಮ್ ಅವರ ಪುತ್ರರಾದ ನಾಸಿರ್ ಸೈಯದ್, ಯುಎಇಯಲ್ಲಿ ಪ್ರಖ್ಯಾತ ಉದ್ಯಮಿ ಹಾಗೂ ಅಂತರ್‌ರಾಷ್ಟ್ರೀಯ ಸೂಪರ್ ಬೈಕ್ ರೇಸರ್ ಆಗಿ ಖ್ಯಾತಿ ಗಳಿಸಿದ್ದಾರೆ. ಅವರು ದುಬೈಯಲ್ಲಿ ಕ್ರಿಯೇಟಿವ್ ಹೌಸ್ ಸ್ಕಫೋಲ್ಡಿಂಗ್ ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಪ್ರತಿಷ್ಠಿತ ಸಮಾರಂಭವನ್ನು ಭಾರತದ ಮುಂಚೂಣಿ ಮಾಧ್ಯಮ ಸಂಸ್ಥೆಯಾದ ‘ಇಂಡಿಯಾ ಟುಡೇ’ ಸಮೂಹದ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ‘ಇಂಡಿಯಾ ಟುಡೇ’ ಹಾಗೂ ‘ಆಜ್ ತಕ್’ ಚಾನೆಲ್‌ಗಳು ಕಾರ್ಯಕ್ರಮವನ್ನು ತಮ್ಮ ಚಾನೆಲ್ ಗಳಲ್ಲಿ ಪ್ರಸಾರ ಮಾಡಿದ್ದವು. ದೂರದೃಷ್ಟಿಯ ನಾಯಕರು ಯುಎಇ ಉದ್ಯಮ ವಲಯ ಹಾಗೂ ಸಮುದಾಯದ ಮೇಲೆ ಬೀರಿರುವ ಧನಾತ್ಮಕ ಪರಿ ಣಾಮಗಳನ್ನು ಗುರುತಿಸುವ ಉದ್ದೇಶ ಈ ಪ್ರಶಸ್ತಿಗಿದೆ.


ವಿವೇಕ್ ಒಬೆರಾಯ್ ಹಾಗೂ ಸಲ್ಮಾನ್ ಯೂಸುಫ್ ಖಾನ್ ಸೇರಿದಂತೆ ಖ್ಯಾತ ನಟರು ಹಾಗೂ ಪ್ರಭಾವಿ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದ್ದರು. ಭಾರತದ ಖ್ಯಾತ ಪತ್ರಕರ್ತ ಹಾಗೂ ಸುದ್ದಿ ನಿರೂಪಕ ರಾಜದೀಪ್ ಸರ್ದೇಸಾಯಿ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಸಮಾರಂಭವು ಈ ಉದ್ಯಮ ನಾಯಕರ ಸ್ಫೂರ್ತಿದಾಯಕ ಪಯಣಗಳು ಹಾಗೂ ತಮ್ಮ ಕನಸನ್ನು ನನಸು ಮಾಡಿಕೊಂಡ ಹಾದಿಯ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯಾಯಿತು. ಈ ಪ್ರಭಾವಿಗಳ ಅನುಭವಗಳು ಹಾಗೂ ಸಾಧನೆಗಳ ಕುರಿತು ವೀಕ್ಷಕರಿಗೆ ಬೆಳಕು ಚೆಲ್ಲುವ ತಲಾ 30 ನಿಮಿಷಗಳ ಅವಧಿಯ ಸಂಚಿಕೆಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಲಿವೆ.

ನಾಸಿರ್ ಸೈಯದ್ - ದುಬೈನ ಸೂಪರ್ ಸ್ಟಾರ್ ಕನ್ನಡಿಗ

ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲೇ ಕಳೆದು ಹೋಗಲು ಬಯಸದೆ ಸ್ವಂತ ಉದ್ಯಮ ಕಟ್ಟಿ ಬೆಳೆಸುವ ಭಾರೀ ಸವಾಲನ್ನು ದಿಟ್ಟವಾಗಿ ಎದುರಿಸಿ ಭರ್ಜರಿಯಾಗಿ ಗೆದ್ದವರು ನಾಸಿರ್ ಸೈಯದ್. ಈ ಶತಮಾನದ ಆರಂಭದಲ್ಲೇ ಸ್ವಂತ ಉದ್ಯಮ ಸ್ಥಾಪಿಸಲು ಇರುವ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಸ್ಕಫೋಲ್ಡಿಂಗ್ ಕ್ಷೇತ್ರದಲ್ಲಿ ತನ್ನದೇ ಕಂಪೆನಿಯನ್ನು ಪ್ರಾರಂಭಿಸಿದವರು ನಾಸಿರ್. ಕಠಿಣ ಪರಿಶ್ರಮ, ಅತ್ಯುತ್ತಮ ಗ್ರಾಹಕ ಸೇವೆ, ವಿನೂತನ ಶೈಲಿ ಹಾಗೂ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂಬ ಅವರ ನೀತಿಯಿಂದಾಗಿ ಬಹಳ ಬೇಗ 2005ರಲ್ಲಿ ಅವರ ಉದ್ಯಮಕ್ಕೆ ಪ್ರಮುಖ ತಿರುವು ಸಿಕ್ಕಿತು. ದೊಡ್ಡ ಗ್ರಾಹಕರನ್ನು ಸೆಳೆಯುವಲ್ಲಿ ಅವರ ಕಂಪೆನಿ ಯಶಸ್ವಿಯಾಯಿತು. ಅಲ್ಲಿಂದ ನಾಸಿರ್ ಸೈಯದ್ ಹಿಂದಿರುಗಿ ನೋಡಲೇ ಇಲ್ಲ. ಒಂದೊಂದೇ ಹೆಜ್ಜೆ ಮುಂದಿಡುತ್ತಾ ಬೆಳೆಯುತ್ತಲೇ ಹೋದರು. ಒಬ್ಬರೇ ಪ್ರಾರಂಭಿಸಿದ ಅವರ ಕಂಪೆನಿಯ ಸಮೂಹ ಇಂದು ಇನ್ನೂರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿದೆ ಎಂದರೆ ಅವರ ಸಾಧನೆ ಅದೆಷ್ಟು ದೊಡ್ಡದು ಎಂಬ ಅರಿವಾಗುತ್ತದೆ.


ಇಂದು ಸ್ಕಫೋಲ್ಡಿಂಗ್ ಹಾಗೂ ಫಾರ್ಮ್ ವರ್ಕ್ ಕ್ಷೇತ್ರದಲ್ಲಿ ಇಡೀ ಯುಎಇ ಯಲ್ಲೇ ಮುಂಚೂಣಿ ಕಂಪೆನಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾದ ಸಿ ಎಚ್ ಎಸ್ ಕ್ರಿಯೇಟಿವ್ ಹೌಸ್ (CHS Creative House), ಕೈಗಾರಿಕಾ ವಾಲ್ವ್‌ಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿರುವ ವಿಎಂಇ ವಾಲ್ವ್ಸ್ ಫ್ಯಾಕ್ಟರಿ ಎಲ್‌ಎಲ್‌ಸಿ (VME Valves Factory LLC), ವಿಶ್ವದರ್ಜೆಯ ಇವೆಂಟ್‌ಗಳನ್ನು ನಡೆಸುವ ಕ್ರಿಯೇಟಿವ್ ಹೌಸ್ ಇವೆಂಟ್ಸ್ (Creative House Events) ಹಾಗೂ ಅಂತರ್ ರಾಷ್ಟ್ರೀಯ ರೇಸಿಂಗ್ ಸ್ಪರ್ಧೆ ಆಯೋಜಿಸುವ ಪ್ರತಿಷ್ಠಿತ ಡಿಎಸ್‌ಬಿಕೆ ಸೂಪರ್ ಬೈಕ್ ರೇಸಿಂಗ್ ಕಂಪೆನಿ (DSBK - D SUPER BIKE RACING)ಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ನಾಸಿರ್ ಸೈಯದ್.

ಯಶಸ್ವಿ ಉದ್ಯಮಿ, ಸೂಪರ್ ಬೈಕ್ ರೇಸಿಂಗ್ ಚಾಂಪಿಯನ್

ಶಾಲಾ ಕಾಲೇಜು ದಿನಗಳಲ್ಲೇ ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್ ಆಡುತ್ತಿದ್ದ ನಾಸಿರ್ ಸೈಯದ್ ಕ್ರಮೇಣ ಬೈಕ್ ರೇಸಿಂಗ್‌ನತ್ತ ಆಕರ್ಷಿತರಾದರು. ಅತ್ಯಂತ ದುಬಾರಿ ಹಾಗೂ ಅಷ್ಟೇ ಅಪಾಯಕಾರಿಯೂ ಆಗಿರುವ ಮೈನವಿರೇಳಿಸುವ ರೋಮಾಂಚಕಾರಿ ಸೂಪರ್ ಬೈಕ್ ರೇಸಿಂಗ್ ಅನ್ನು ದೂರದಿಂದ ನೋಡಿ ಆನಂದಿಸುವವರೇ ಹೆಚ್ಚು. ದುಬೈಯಲ್ಲಿ ನೆಲೆಸಿದ ಮೇಲೆ ಸೂಪರ್ ಬೈಕ್ ರೇಸಿಂಗ್ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಅವರು ಆ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲೂ ಅಂತರ್ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಒಂದಾದ ಮೇಲೊಂದರಂತೆ 38 ಪ್ರೊ ಬೈಕ್ ರೇಸಿಂಗ್ ಸ್ಪರ್ಧೆಗಳಲ್ಲಿ ಚಾಂಪಿಯನ್ ಆದರು. ಯುಎಇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಹಾಗೂ ಬಹರೈನ್ ಸೂಪರ್ ಬೈಕ್ ಚಾಂಪಿಯನ್ ಶಿಪ್‌ಗಳಲ್ಲೂ ಅವರು ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.

ಈಗ ದುಬೈಯಲ್ಲಿ ಸೂಪರ್ ಬೈಕ್ ರೇಸಿಂಗ್ ಆಯೋಜಿಸುವ ಹೊಸ ಕಂಪೆನಿಯನ್ನೇ ಸ್ಥಾಪಿಸಿದ್ದಾರೆ. DSBK - D SUPER BIKE RACING ಹೆಸರಿನ ಕಂಪೆನಿ ಈಗಾಗಲೇ ತನ್ನ ಮೊದಲನೇ ರೇಸಿಂಗ್ ಸ್ಪರ್ಧೆ ನಡೆಸಿ ಯಶಸ್ವಿಯಾಗಿದೆ. ಸೂಪರ್ ಬೈಕ್ ರೇಸರ್‌ಗಳು, ಅದರ ಅಭಿಮಾನಿಗಳು ಹಾಗೂ ಪ್ರತಿಷ್ಠಿತ ಬ್ರ್ಯಾಂಡ್‌ಗಳನ್ನು ಒಂದೇ ವೇದಿಕೆಗೆ ತರುವ ವಿನೂತನ ಹಾಗೂ ಸಾಹಸಿ ಪ್ರಯತ್ನ ಈ ಡಿಎಸ್‌ಬಿಕೆ.


ನಾಸಿರ್ ಅವರ ಪತ್ನಿ ಅನಿಲ ನಾಸಿರ್, ಪತಿಯ ಉದ್ಯಮ ಹಾಗೂ ಕ್ರೀಡಾ ಸಾಹಸಗಳಲ್ಲಿ ಅವರ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಪುತ್ರ ಅಬ್ದುಲ್ ಸಮಿ ಈಗಾಗಲೇ ಉದಯೋನ್ಮುಖ ಸೂಪರ್ ಬೈಕ್ ರೇಸರ್ ಆಗಿ ಹೆಸರು ಗಳಿಸಿದ್ದಾರೆ. ಇನ್ನೋರ್ವ ಪುತ್ರ ಯಹ್ಯಾ ನಾಸಿರ್, ಪುತ್ರಿಯರಾದ ಹನ ನಾಸಿರ್ ಹಾಗೂ ರಿದ ನಾಸಿರ್‌ ರ ತುಂಬು ಕುಟುಂಬ ಅವರದ್ದು.


ಯಶಸ್ವಿ ಉದ್ಯಮಿ ಹಾಗೂ ಚಾಂಪಿಯನ್ ಸೂಪರ್ ಬೈಕ್ ರೇಸರ್ ನಾಸಿರ್ ಸೈಯದ್ ಅವರು ಊರಿನಲ್ಲಿ ಹಲವು ಜನೋಪಯೋಗಿ ಸಾಮಾಜಿಕ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಸಹಿತ ಹಲವು ರಂಗಗಳಲ್ಲಿ ಅರ್ಹರಿಗೆ ನೆರವು ತಲುಪಿಸುತ್ತಿದ್ದಾರೆ.

ಭಾರತದಲ್ಲೂ DSBK ಚಾಂಪಿಯನ್‌ಶಿಪ್!

ನಾಸಿರ್ ಸೈಯದ್ ಅವರ ಮಹತ್ವಾಕಾಂಕ್ಷಿ ‘ಡಿಎಸ್‌ಬಿಕೆ ಸೂಪರ್ ಬೈಕ್ ರೇಸಿಂಗ್’ ಕಂಪೆನಿ ಮುಂದಿನ ವರ್ಷ ಭಾರತದಲ್ಲಿ ಚಾಂಪಿಯನ್‌ಶಿಪ್ ಆಯೋಜಿಸಲಿದೆ. ಈ ಬಗ್ಗೆ ನವೆಂಬರ್ ೪ಕ್ಕೆ ಮುಂಬೈಯಲ್ಲಿ ನಾಸಿರ್ ಸೈಯದ್ ಸುದ್ದಿಗೋಷ್ಠಿ ನಡೆಸಿ ಘೋಷಿಸಲಿದ್ದಾರೆ.

Instagramನಲ್ಲಿರುವ DSBKracing ಪೇಜ್‌ನಲ್ಲಿ ಈ ಕುರಿತ ಎಲ್ಲ ಮಾಹಿತಿಗಳೂ ಲಭ್ಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X