ಖತರ್ : SKMWA ವತಿಯಿಂದ 6ನೇ “ಪೀಸ್ ಟ್ರೋಫಿ ಕಬಡ್ಡಿ ಟೂರ್ನಮೆಂಟ್- 2025”

ದೋಹಾ : ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (SKMWA) ಖತರ್ ವತಿಯಿಂದ 6ನೇ “ಪೀಸ್ ಟ್ರೋಫಿ ಕಬಡ್ಡಿ ಟೂರ್ನಮೆಂಟ್ -2025” ಅಸ್ಪೈರ್ ಲೇಡೀಸ್ ಹಾಲ್ ನಲ್ಲಿ ಅ.10 ರಂದು ನಡೆಯಿತು.
SKMWA ಖತರ್, ತುಳುಕೂಟ ಖತರ್, ಮೈಸರಕರ್, ಮಾರ್ಖಿಯಾ ಅಲ್ ಫಿಫಾ ಮತ್ತು ಸಂಸ್ಕೃತ್ ಖತರ್ ಎಂಬ ಐದು ತಂಡಗಳು ಭಾಗವಹಿಸಿದ್ದವು. ಲೀಗ್ ರೌಂಡ್, ಸೆಮಿಫೈನಲ್ ಮತ್ತು ಗ್ರ್ಯಾಂಡ್ ಫೈನಲ್ ಸೇರಿ ಹನ್ನೆರಡು ರೋಚಕ ಪಂದ್ಯಗಳು ನಡೆದವು. ತುಳುಕೂಟ ಖತರ್ ಚಾಂಪಿಯನ್ ಆಗಿ ಹೊರಹೊಮ್ಮಿತು. SKMWA ಕತಾರ್ ರನ್ನರ್-ಅಪ್ ಪಡೆದುಕೊಂಡಿತು.
ಕಾರ್ಯಕ್ರಮವು ಅರ್ಹಾನ್ ಅಂಶಾರ್ ಅವರ ಕುರ್ಆನ್ ಪಠಣದೊಂದಿಗೆ ಪ್ರಾರಂಭವಾಯಿತು. SKMWA ಅಧ್ಯಕ್ಷ ಇಮ್ರಾನ್ ಅಹ್ಮದ್ ಬಾವಾ ಅವರ ಸ್ವಾಗತ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ರಶೀದ್ ಬಾಂಬಿಲ ಅವರು ಪ್ರಮಾಣ ವಚನ ಬೋಧಿಸಿದರು. SKMWA ಮಾಜಿ ಅಧ್ಯಕ್ಷರು ಮತ್ತು ಹಿರಿಯ ಸದಸ್ಯರು, ಜೊತೆಗೆ ತುಳುಕೂಟ ಕತಾರ್ ಅಧ್ಯಕ್ಷರು ಸೇರಿ ಟೂರ್ನಮೆಂಟ್ ಗೆ ಅಧಿಕೃತ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಸಲೀಂ ಅಲಿ ಅವರು ನಿರ್ವಹಿಸಿದರು. ಮಂಗಳೂರಿನ ಪ್ರಸಿದ್ಧ ಕಬಡ್ಡಿ ನಿರೂಪಕ ದಿವಾಕರ್ ಉಪ್ಪಳ ಅವರು ನಿರೂಪಣೆ ಮಾಡಿದರು. ರೆಫರಿಗಳಾದ ರತೀಶ್ ತೊಕ್ಕೊಟ್ಟು ಮತ್ತು ಅರೀಸ್ ಕಲ್ಪಣೆ ಪಂದ್ಯಗಳನ್ನು ನ್ಯಾಯಯುತವಾಗಿ ನಿರ್ವಹಿಸಿದರು. ಕಬಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನಿಲ್ ಮತ್ತು ರಾಮಣ್ಣ ಅವರಿಗೆ ಧನ್ಯವಾದಗಳು ಸಲ್ಲಿಸಲಾಯಿತು. ಇಬ್ರಾಹಿಂ ಬ್ಯಾರಿ ಮತ್ತುCK ಫಿರೋಜ್ ಬ್ಯಾರಿ ಅವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಗಣ್ಯ ಅತಿಥಿಗಳಾದ ICC ಅಧ್ಯಕ್ಷ ಮನಿಕಂಠನ್, ISC ಅಧ್ಯಕ್ಷ ಅಬ್ದುಲ್ ರಹ್ಮಾನ್ ಮತ್ತು ICBF ಅಧ್ಯಕ್ಷ ಶಾನವಾಝ್ ಬಾವಾ ಅವರು ಭಾಗವಹಿಸಿದ್ದರು. ರಶೀದ್ ಕಕ್ಕಿಂಜೆ ಅವರು ಹಾಜಿ ಮೊಹಮ್ಮದ್ ಕುಂಞಿ ಅವರ ಜೀವನಪರ್ಯಂತ ಸೇವೆ ಮತ್ತು ಸಮರ್ಪಣೆಗೆ ಗೌರವ ಸಲ್ಲಿಸಿದರು.
ಈ ಕಾರ್ಯಕ್ರಮ ಯಶಸ್ವಿಯಾಗಲು ಉಪಾಧ್ಯಕ್ಷ ಮೊಹಮ್ಮದ್ ಕೊಂಡಾನ, ಖಜಾಂಚಿ ಶಂಸೀರ್, ಕಾರ್ಯಕ್ರಮದ ಕಾರ್ಯದರ್ಶಿಗಳಾದ ಸರ್ಫರಾಜ್, ಸಲೀಂ ಉಳ್ಳಾಲ, ಅಹ್ಮದ್ ಇರ್ಫಾನ್, ಕ್ರೀಡಾ ಕಾರ್ಯದರ್ಶಿ ಅಮೀರ್ ಹಮ್ಜಾ ಸಹಕರಿಸಿದರು.
ಪ್ರಧಾನ ಕಾರ್ಯದರ್ಶಿ ರಶೀದ್ ಬಾಂಬಿಲ ಅವರು ಧನ್ಯವಾದ ಸಲ್ಲಿಸಿದರು.







