ಶಾರ್ಜಾ | ನ.15ರಂದು 'ಶಾರ್ಜಾ ಕರ್ನಾಟಕ ಸಂಘ'ದ ರಾಜ್ಯೋತ್ಸವ; ಸುಂದರ್ ಶೆಟ್ಟಿಗೆ 2026ರ 'ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ'

ಸುಂದರ ಶೆಟ್ಟಿ
ಶಾರ್ಜಾ: ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಕರ್ನಾಟಕ ಸಂಘ ಶಾರ್ಜಾ ನೀಡುವ 2026ರ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ಗೆ ಸಮಾಜಸೇವಕ ಹಾಗೂ ಉದ್ಯಮಿ ಸುಂದರ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಸಂಘ ಶಾರ್ಜಾದ 24ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ.15ರಂದು ಅಜ್ಮಾನ್ನ ನಾರ್ತ್ ಗೇಟ್ ಬ್ರಿಟಿಷ್ ಸ್ಕೂಲ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವು ಮಧ್ಯಾಹ್ನ 3:30ರಿಂದ ಆರಂಭವಾಗಲಿದೆ.
ವಿಶೇಷ ಸಾಧಕ ಗೌರವ
ರಘುರಾಮ್ ಶೆಟ್ಟಿಗಾರ್, ಪ್ರಭಾಕರ ಸುವರ್ಣ, ಅಬ್ದುಲ್ ಸಲಾಮ್ ಹಸನ್ ಬ್ಯಾರಿ
ಪ್ರತೀ ವರ್ಷದಂತೆ ಸಂಘದ ಸದಸ್ಯರಿಗೆ ಸಂಘದ ಸಂಘಟನೆ ಸೇವೆಗಾಗಿ ನೀಡುವ ಗೌರವವನ್ನು ನಮ್ಮ ಸಂಘದ ಸಕ್ರೀಯ ಸದಸ್ಯರಾದ ರಘುರಾಮ್ ಶೆಟ್ಟಿಗಾರ್, ಕಲಾಸೇವೆಗಾಗಿ ಪ್ರಭಾಕರ ಸುವರ್ಣ ಮತ್ತು ಸಾಹಿತ್ಯ ಕ್ಷೇತ್ರದ ಅಬ್ದುಲ್ ಸಲಾಮ್ ಹಸನ್ ಬ್ಯಾರಿ ಅವರನ್ನೂ ಕೂಡ ಗುರುತಿಸಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ವಿಶೇಷ ಆಕರ್ಷಣೆ : ಅರ್ಷಿಯಾ ಖಾನ್ ಅವರಿಂದ ಐತಲಕಡಿ ಕಾರ್ಯಕ್ರಮ
ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡೈಜಿವರ್ಲ್ಡ್ ಹೆಸರಾಂತ ಟಿವಿ ಗೇಮ್ ಶೋ ಐತಲಕಡಿ ಕಾರ್ಯಕ್ರಮದ ಯಕ್ಷಪ್ರಿಯೇ ಆರ್ಷಿಯಾ ಖಾನ್ ವಿಶೇಷ ಆಹ್ವಾನಿತ ಅತಿಥಿಗಳಾಗಿ ಭಾಗವಹಿಸಿ ಐತಲಕಡಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಯುಎಇಯ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.






