ತುಂಬೆ ಗ್ರೂಪ್‌ನಿಂದ ‘ತುಂಬೆ ಕೇರ್ಸ್’ ಅಭಿಯಾನಕ್ಕೆ ಚಾಲನೆ

ಅಜ್ಮಾನ್ (ಯುಎಇ): ವಿಶ್ವ ದರ್ಜೆಯ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ‘ತುಂಬೆ ಗ್ರೂಪ್’, ತನ್ನ 3,000ಕ್ಕೂ ಅಧಿಕ ಸಿಬ್ಬಂದಿಗಳ ಹಿತದೃಷ್ಟಿಯಿಂದ ‘ತುಂಬೆ ಕೇರ್ಸ್’ ಎಂಬ ವಿನೂತನ ಕ್ಷೇಮಾಭಿವೃದ್ಧಿ ಯೋಜನೆಯನ್ನು ಘೋಷಿಸಿದೆ.
ಯುಎಇಯಲ್ಲಿ ‘ ಕೆಲಸ ಮಾಡಲು ಅತ್ಯುತ್ತಮ ಸಂಸ್ಥೆ ( ಗ್ರೇಟ್ ಪ್ಲೇಸ್ ಟು ವರ್ಕ್’) ಎಂಬ ಪ್ರಮಾಣಪತ್ರ ದೊರೆತ ಬೆನ್ನೆಲ್ಲೆ ಈ ಮಹತ್ವದ ಪ್ರಕಟಣೆ ಹೊರ ಬಂದಿದೆ.
56 ರಾಷ್ಟ್ರಗಳ ವಿವಿಧ ಹಿನ್ನೆಲೆಯ ಉದ್ಯೋಗಿಗಳು ಹಾಗೂ 500 ಕ್ಕೂ ಹೆಚ್ಚು ನುರಿತ ವೈದ್ಯರನ್ನು ಹೊಂದಿರುವ ‘ತುಂಬೆ ಗ್ರೂಪ್’ ತನ್ನ ಸಿಬ್ಬಂದಿಯ ಜೀವನಮಟ್ಟ ಸುಧಾರಣೆ ಮತ್ತು ವೃತ್ತಿ ಜೀವನದ ಬೆಳವಣಿಗೆಗೆ ಈ ಯೋಜನೆಯ ಮೂಲಕ ಹೊಸ ಭಾಷ್ಯ ಬರೆಯಲು ಮುಂದಾಗಿದೆ.
‘ತುಂಬೆ ಕೇರ್ಸ್’ ಕೇವಲ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಯೋಜನೆಯಾಗಿರದೆ ಜನರ ಆದ್ಯತೆಗಳಿಗೆ ಬದ್ಧವಾಗಿದೆ. ಆರೋಗ್ಯ ಸೇವೆ, ಆರ್ಥಿಕ ರಕ್ಷಣೆ, ಶಿಕ್ಷಣ ಬೆಂಬಲ, ಕ್ಷೇಮ ಮತ್ತು ನಾಯಕತ್ವ ತರಬೇತಿಗಳನ್ನು ಒಂದೇ ಸೂರಿನಡಿ ತರುವ ಮೂಲಕ ತುಂಬೆ ಗ್ರೂಪ್ ಈ ಭಾಗದ ಅತ್ಯಂತ ಆಕರ್ಷಕ ಕೆಲಸದ ತಾಣವಾಗಿ ಗುರುತಿಸಿಕೊಂಡಿದೆ.
ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಅವರ ದೂರದೃಷ್ಟಿಯಡಿಯಲ್ಲಿ ಈ ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ. ನಿಜ ಜೀವನದ ಅಗತ್ಯಗಳ ಸುತ್ತ ನಿರ್ಮಿಸಲಾದ ಕಾರ್ಯಕ್ರಮವಾದ ತುಂಬೆ ಕೇರ್ಸ್ ಯೋಜನೆಯು ತಂಡದ ಸದಸ್ಯರನ್ನು ಕೆಲಸದಲ್ಲಿ ಮಾತ್ರವಲ್ಲದೆ ಜೀವನದ ಪ್ರತಿಯೊಂದು ಆಯಾಮದಲ್ಲೂ ಬೆಂಬಲ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
‘‘ನಮ್ಮ ಸಂಸ್ಥೆ ‘ಗ್ರೇಟ್ ಪ್ಲೇಸ್ ಟು ವರ್ಕ್’ ಎಂದು ಗುರುತಿಸಲ್ಪಟ್ಟಿರುವುದು ನಮಗೆ ಹೆಮ್ಮೆಯ ಕ್ಷಣ. ನಮ್ಮ ಸಿಬ್ಬಂದಿ ಆರೋಗ್ಯ, ಬೆಳವಣಿಗೆ ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ಬೆಂಬಲಿತರಾಗಿದ್ದಾರೆ ಎಂಬ ಭರವಸೆಯೇ ಈ ‘ತುಂಬೆ ಕೇರ್ಸ್’ ಆಗಿದೆ. ನಮ್ಮ ಜನರಿಗೆ ಮೌಲ್ಯ ಮತ್ತು ಭದ್ರತೆ ಸಿಕ್ಕಾಗ, ಶ್ರೇಷ್ಠತೆ ತಾನಾಗಿಯೇ ಒದಗಿಬರುತ್ತದೆ. ಇದು ಕೇವಲ ಒಂದು ಉಪಕ್ರಮವಲ್ಲ, ಇದು ನಮ್ಮ ಸಂಸ್ಕೃತಿ"
- ಡಾ. ತುಂಬೆ ಮೊಯಿದ್ದೀನ್, ಸ್ಥಾಪಕ ಅಧ್ಯಕ್ಷರು, ತುಂಬೆ ಗ್ರೂಪ್.
ಯೋಜನೆಯ ಹೈಲೈಟ್ಸ್; ಯೋಜನೆಯ ಪ್ರಮುಖ ಸೌಲಭ್ಯಗಳು
*ತುಂಬೆ ಹೆಲ್ತ್‌ಕೇರ್‌ನಲ್ಲಿ ಉಚಿತ ವೈದ್ಯಕೀಯ ತಪಾಸಣೆ
*ತುಂಬೆ ಲ್ಯಾಬ್ಸ್‌ನಲ್ಲಿ ಉಚಿತ ರಕ್ತ ಪರೀಕ್ಷೆಗಳು.
*ಎಲ್ಲಾ ಸಿಬ್ಬಂದಿಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ.
*ಬಾಡಿ, ಸೋಲ್ ಹೆಲ್ತ್ ಕ್ಲಬ್ ವತಿಯಿಂದ ಉಚಿತ ಸದಸ್ಯತ್ವ, ಶರೀರ ವಿಶ್ಲೇಷಣೆ
*ಜೀವ ವಿಮೆ ಮತ್ತು ಕಾರ್ಮಿಕರ ಪರಿಹಾರ ವಿಮೆ
ಇದು ಮುಂಜಾಗರೂಕತೆ, ಆರಂಭಿಕ ರೋಗನಿರ್ಣಯ, ಫಿಟ್ನೆಸ್ ಮತ್ತು ವೈಯಕ್ತಿಕ ಕ್ಷೇಮವು ದೈನಂದಿನ ಜೀವನದ ಭಾಗವಾಗುವುದನ್ನು ದೃಢಪಡಿಸುತ್ತದೆ. ಇವು ಕೇವಲ ಸಾಂದರ್ಭಿಕ ಸೌಲಭ್ಯಗಳಲ್ಲ.
ಶಿಕ್ಷಣ, ಬೆಳವಣಿಗೆ ಮತ್ತು ನಾಯಕತ್ವದಲ್ಲಿ ತುಂಬೆ ಗ್ರೂಪ್ ತನ್ನ ಹೂಡಿಕೆಯನ್ನು ಕೇವಲ ವ್ಯಕ್ತಿಗಷ್ಟೇ ಸೀಮಿತಗೊಳಿ ಸದೆ, ಅವರ ಕುಟುಂಬಗಳಿಗೆ ಮತ್ತು ಮುಂದಿನ ಪೀಳಿಗೆಗೂ ವಿಸ್ತರಿಸುತ್ತಿದೆ. ಇದರ ಅಂಗವಾಗಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ತಂಡದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.
*ತುಂಬೆ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಎಐ ಹೆಲ್ತ್‌ಕೇರ್ ಮೂಲಕ ಮುಂದಿನ ಪೀಳಿಗೆಗೆ ಉಚಿತ ನಾಯಕತ್ವ ತರಬೇತಿ.
► ಮಾನ್ಯತೆ , ಪ್ರಶಸ್ತಿ
*ಸಾಮರ್ಥ್ಯದ ಆಧಾರದ ಮೇಲೆ ವಿಶೇಷ ಬಹುಮಾನಗಳು ಮತ್ತು ಪ್ರೋತ್ಸಾಹಕ
*ದೀರ್ಘಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಗೆ ವಿಶೇಷ ಸೌಲಭ್ಯಗಳು ಮತ್ತು ವಾರ್ಷಿಕ ಬೋನಸ್ ಕಾರ್ಯಕ್ರಮಗಳು.
*ತುಂಬೆ ಗ್ರೂಪ್‌ನ ವಿವಿಧ ಮಳಿಗೆಗಳಲ್ಲಿ ರಿಯಾಯಿತಿ ದರಗಳು.
ಈ ಯೋಜನೆಯು ಕೇವಲ ಕಚೇರಿಯ ಕೆಲಸಕ್ಕೆ ಸೀಮಿತವಾಗದೆ, ಉದ್ಯೋಗಿಗಳ ವೈಯಕ್ತಿಕ ಜೀವನ, ಆರೋಗ್ಯ ಮತ್ತು ಅವರ ಕುಟುಂಬದ ಭವಿಷ್ಯವನ್ನೂ ಒಳಗೊಂಡಿದೆ. ಈ ಮೂಲಕ ತುಂಬೆ ಗ್ರೂಪ್ ಮಧ್ಯಪ್ರಾಚ್ಯದ ಅತ್ಯಂತ ಜನಸ್ನೇಹಿ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಪ್ರಕಟನೆ ತಿಳಿಸಿದೆ.







