ಫೆ.15: ಯುಎಇ ಮೆಡಿಸಿಟಿಯಲ್ಲಿ ತುಂಬೆ ಗ್ರೂಪ್‍ನಿಂದ ವೈದ್ಯಕೀಯ ಸಮ್ಮೇಳನ
► 250 ತಜ್ಞರು, 10 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ► 25 ಮಿಲಿಯನ್ ಜನರಿಗೆ ತಲುಪುವ ಉದ್ದೇಶ

ಅಜ್ಮಾನ್: ಆರೋಗ್ಯ ಸೇವೆಗಳನ್ನು ಡಿಜಿಟಲ್‍ಗೊಳಿಸಿ ಜನರಿಗೆ ಇನ್ನಷ್ಟು ವೇಗದಲ್ಲಿ ಹಾಗೂ ಗುಣಮಟ್ಟದ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ತುಂಬೆ ಗ್ರೂಫ್ ಯುಎಇ ಅಲ್‍ಜುರ್ಫ್ ಅಜ್ಮಾನ್‍ನ ಮೆಡಿಸಿಟಿಯಲ್ಲಿ ಫೆ.15ರಂದು ಬೆಳಗ್ಗೆ 8ರಿಂದ ಸಂಜೆ 6 ಗಂಟೆ ತನಕ ಬೃಹತ್ ವೈದ್ಯಕೀಯ ಸಮ್ಮೇಳನ (ಹೆಲ್ತ್ ಕೇರ್ ಇನ್‍ಪ್ಲುಯೆನ್ಸರ್ಸ್ ಸಮ್ಮಿತ್ 2025) ಆಯೋಜಿಸಿದೆ.
ತುಂಬೆ ಗ್ರೂಪ್‍ನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನದಲ್ಲಿ 250 ವಿಶೇಷ ತಜ್ಞರು, 10 ಸಾವಿರ ಸಂದರ್ಶಕರು ಪಾಲ್ಗೊಳ್ಳಲಿದ್ದು, 25 ಮಿಲಿಯನ್ ಜನರನ್ನು ತಲುಪುವ ಉದ್ದೇಶ ಹೊಂದಲಾಗಿದೆ. ಆರೋಗ್ಯ ವೃತ್ತಿಪರರು, ಸಾಮಾಜಿಕ ಪ್ರಭಾವಿಗಳು ಮತ್ತು ಉದ್ಯಮ ತಜ್ಞರನ್ನು ಒಟ್ಟುಗೂಡಿಸಲಿದೆ. ಡಿಜಿಟಲ್ ತಳಹದಿಯನ್ನು ಅನ್ವೇಷಿಸಲು ಈ ಮೂಲಕ ಸಾಧ್ಯವಾಗಲಿದೆ.
ಇಂದಿನ ಡಿಜಿಟಲ್ ಯುಗದಲ್ಲಿ, ಆರೋಗ್ಯ ಸೇವೆಯ ಮಾಹಿತಿಯನ್ನು ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ರವಾನಿಸಲಾಗುತ್ತದೆ. ವೃತ್ತಿಪರರು ಮತ್ತು ತಜ್ಞರು ತಮ್ಮ ಪ್ಲಾಟ್‍ಫಾರ್ಮ್‍ಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಕಡ್ಡಾಯವಾಗಿದೆ. ಈ ಸಮ್ಮೇಳನವು ವೈದ್ಯಕೀಯ ಪರಿಣತಿ ಮತ್ತು ಸಾರ್ವಜನಿಕ ನಿಶ್ಚಯದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆರೋಗ್ಯ ರಕ್ಷಣೆಯ ಸವಾಲುಗಳು, ಅವಕಾಶಗಳು ಮತ್ತು ನೈತಿಕ ಪರಿಗಣನೆಗಳ ಕುರಿತು ಚರ್ಚೆಗಳಾಗುವಂತೆ ಮಾಡಲಿದೆ.
ಆರೋಗ್ಯ ಸಂವಹನದಲ್ಲಿ ಡಿಜಿಟಲ್ ಮಾಧ್ಯಮದ ವಿಕಾಸದ ಪಾತ್ರದ ಬಗ್ಗೆ ದೃಷ್ಟಿಕೋನಗಳು ಸಿಗಲಿದೆ. ತಜ್ಞರ ನೇತೃತ್ವದ ಪರಸ್ಪರ ಚರ್ಚೆಗಳು, ಡಿಜಿಟಲ್ ಹೆಲ್ತ್‌ಕೇರ್ ಸಂವಹನ, ಟೆಲಿಮೆಡಿಸಿನ್ ಮತ್ತು ಸಾಮಾಜಿಕ ಮಾಧ್ಯಮಗಳ ಭವಿಷ್ಯದಂತಹ ನಿರ್ಣಾಯಕ ವಿಷಯಗಳು ಚರ್ಚೆಯಾಗಲಿವೆ. ಆರೋಗ್ಯ ಕ್ಷೇತ್ರದಲ್ಲಿನ ಮುಂದಿನ ಸವಾಲುಗಳನ್ನು ಅರಿತು ಕಾರ್ಯಾಗಾರಗಳು, ವಿಷಯ ರಚನೆ, ಪ್ರಾಯೋಗಿಕ ಕೌಶಲ, ಹಣ ಗಳಿಕೆ, ಪ್ರಾಯೋಗಿಕ ಕೌಶಲಗಳನ್ನು ಹೆಚ್ಚಿಸುವಲ್ಲಿ ಈ ಸಮ್ಮೇಳನ ಬೆಳಕು ಚೆಲ್ಲಲಿದೆ.
ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು, ಸಮುದಾಯಗಳನ್ನು ಪ್ರೇರೇಪಿಸಲು ಮತ್ತು ಉತ್ತಮ ಆರೋಗ್ಯ ಪದ್ಧತಿಗಳಿ ಗಾಗಿ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ಈ ಸಮ್ಮೇಳನ ಹಾಕಿ ಕೊಡಲಿದೆ. ಆರೋಗ್ಯ ರಕ್ಷಣೆಯಲ್ಲಿ ಅತ್ಯುತ್ತಮ ಸಾಮಾಜಿಕ ಮಾಧ್ಯಮ ಅಭಿಯಾನ, ಸಾರ್ವಜನಿಕ ಆರೋಗ್ಯ ಜಾಗೃತಿಯಲ್ಲಿ ಶ್ರೇಷ್ಠತೆ, ಡಿಜಿಟಲ್ ಹೆಲ್ತ್ ಪ್ರವರ್ತಕ, ಫಿಟ್‍ನೆಸ್ ಮತ್ತು ಸ್ವಾಸ್ಥ್ಯ ಮೊದಲಾದ ವಿಭಾಗಗಳಲ್ಲಿ ಆರೋಗ್ಯ ವೃತ್ತಿಪರರು ಮತ್ತು ವಿಷಯ ತಜ್ಞರನ್ನು ತಮ್ಮ ಪರಿಣಾಮಕಾರಿ ಕೊಡುಗೆ ಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದೆ.
ಹೆಲ್ತ್ ಕೇರ್ ಸಂಸ್ಥೆಯಾಗಿ ಬೆಳೆಯುತ್ತಿರುವ ಸಮುದಾಯವನ್ನು ಬೆಂಬಲಿಸುವ ತನ್ನ ಬದ್ಧತೆಯ ಭಾಗವಾಗಿ, ತುಂಬೆ ಗ್ರೂಪ್ ವಿಶೇಷ ಕಚೇರಿ ಸ್ಥಳವನ್ನು ಸ್ಥಾಪಿಸಲು ಸಜ್ಜಾಗಿದೆ. ಆರೋಗ್ಯ ರಕ್ಷಣೆಯಲ್ಲಿ ತಮ್ಮ ವೃತ್ತಿ ಜೀವನವನ್ನು ನಿರ್ಮಿಸಲು ಸಂಪನ್ಮೂಲಗಳು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ. ಆರೋಗ್ಯ, ಶಿಕ್ಷಣ, ಸಂಶೋಧನೆ, ಸ್ವಾಸ್ಥ್ಯ, ಆತಿಥ್ಯ ಮತ್ತು ಚಿಲ್ಲರೆ ಪ್ರಯೋಗಾಲಯಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ 250 ಪ್ರಭಾವಿಗಳ ಜಾಲವನ್ನು ಪೋಷಿಸುವ ಉದ್ದೇಶವನ್ನು ಹೊಂದಿದೆ. ಇದು ವಿಶ್ವಾದಾದ್ಯಂತ 25 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ.
ಪಾಲ್ಗೊಳ್ಳುವವರಿಗೆ ಉದ್ಯಮದ ಮುಖಂಡರೊಂದಿಗೆ ಸಂಪರ್ಕ ಸಾಧಿಸಲು, ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಆರೋಗ್ಯ ರಕ್ಷಣೆಯ ಭವಿಷ್ಯವನ್ನು ಹೆಚ್ಚಿಸುವ ಸಹಯೋಗವನ್ನು ನಿರ್ಮಿಸಲು ಅವಕಾಶವಿದೆ. ಈ ಸಮ್ಮೇಳನವು ಕೇವಲ ಜ್ಞಾನವನ್ನು ಪಡೆಯುವುದರ ಬಗ್ಗೆ ಮಾತ್ರವಲ್ಲದೆ ಆರೋಗ್ಯ ಸಂವಹನದಲ್ಲಿ ವ್ಯತ್ಯಾಸವನ್ನುಂಟು ಮಾಡಲು ಬದ್ಧವಾಗಿರುವ ಸಮಾನ ಮನಸ್ಕ ವೃತ್ತಿಪರರ ಬಲವಾದ ಜಾಲವನ್ನು ರಚಿಸುವ ಬಗ್ಗೆಯೂ ಇದೆ.
ಆರೋಗ್ಯ ರಕ್ಷಣೆಯು ಡಿಜಿಟಲ್ ಪ್ರಭಾವವನ್ನು ಅತ್ಯಂತ ನವೀನ ರೀತಿಯಲ್ಲಿ ಪೂರೈಸುವ ವೇದಿಕೆಯನ್ನು ನೀಡುತ್ತದೆ. ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬೆ ಗ್ರೂಪ್ ಆರೋಗ್ಯ ವೃತ್ತಿಪರರು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ವಿದ್ಯಾರ್ಥಿಗಳು ಮತ್ತು ಡಿಜಿಟಲ್ ಹೆಲ್ತ್ ಪ್ರತಿನಿಧಿಗಳನ್ನು ಆಹ್ವಾನಿಸುತ್ತದೆ.
ನೋಂದಣಿ ಹೇಗೆ?
ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು www.thumbay.com ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ info@thumbay.com ಅನ್ನು ಸಂಪರ್ಕಿಸಿ ಅಥವಾ +971 4 2985555 ಗೆ ಕರೆ ಮಾಡಬಹುದು.
ಡಾ.ತುಂಬೆ ಮೊಯ್ದೀನ್ ಅವರು 1997ರಲ್ಲಿ ತುಂಬೆ ಗ್ರೂಪ್ ಸ್ಥಾಪನೆ ಮಾಡಿದ್ದಾರೆ. ಪ್ರಸ್ತುತ ಜಾಗತಿಕವಾಗಿ ಮಾನ್ಯತೆ ಪಡೆದ ವ್ಯವಹಾರ ಸಂಘಟನೆಯಾಗಿದೆ. ಆರೋಗ್ಯ, ಶಿಕ್ಷಣ, ರೋಗನಿರ್ಣಯ, ಸ್ವಾಸ್ಥ್ಯ, ಚಿಲ್ಲರೆ ವ್ಯಾಪಾರ, ಮಾಧ್ಯಮ ಮತ್ತು ತಂತ್ರಜ್ಞಾನದಲ್ಲಿ ಹೊಸತನ ರೂಢಿಸಿಕೊಂಡು ಮಹತ್ತರವಾದ ಸಾಧನೆ ಮಾಡುತ್ತಿದೆ.







