Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅಜ್ಮಾನ್| 25 ವರ್ಷ ಪೂರೈಸಿದ ತುಂಬೆ...

ಅಜ್ಮಾನ್| 25 ವರ್ಷ ಪೂರೈಸಿದ ತುಂಬೆ ಲ್ಯಾಬ್ಸ್‌ಗೆ ISO 15189:2022 ಮಾನ್ಯತೆ

ವಾರ್ತಾಭಾರತಿವಾರ್ತಾಭಾರತಿ22 Jun 2026 8:16 PM IST
share
ಅಜ್ಮಾನ್| 25 ವರ್ಷ ಪೂರೈಸಿದ ತುಂಬೆ ಲ್ಯಾಬ್ಸ್‌ಗೆ ISO 15189:2022 ಮಾನ್ಯತೆ

ಅಜ್ಮಾನ್ (ಯುಎಇ): ಉತ್ತರ ಎಮಿರೇಟ್ಸ್‌ ನಲ್ಲಿರುವ ಶೈಕ್ಷಣಿಕ ರೋಗನಿರ್ಣಯ ಉಲ್ಲೇಖ ಪ್ರಯೋಗಾಲಯಗಳ ಅತಿದೊಡ್ಡ ಜಾಲವಾಗಿರುವ ತುಂಬೆ ಲ್ಯಾಬ್ಸ್, 25 ವರ್ಷಗಳ ಸೇವೆ ಪೂರೈಸಿದ ಸಂದರ್ಭದಲ್ಲಿ ವೈದ್ಯಕೀಯ ಪ್ರಯೋಗಾಲಯಗಳ ಗುಣಮಟ್ಟ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಅಂತರರಾಷ್ಟ್ರೀಯ ಮಾನದಂಡವೆನಿಸಿರುವ ISO 15189:2022 ಮಾನ್ಯತೆ ಪಡೆದಿದೆ.

ಈ ಮೂಲಕ ಈಗಾಗಲೇ ಅಮೆರಿಕದ ಕಾಲೇಜ್ ಆಫ್ ಅಮೆರಿಕನ್ ಪ್ಯಾಥಾಲಜಿಸ್ಟ್ಸ್ (CAP) ಮಾನ್ಯತೆ ಹೊಂದಿ ರುವ ತುಂಬೆ ಲ್ಯಾಬ್ಸ್, ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದ ಎರಡು ಪ್ರತಿಷ್ಠಿತ ಗುಣಮಟ್ಟದ ಮಾನ್ಯತೆಗಳನ್ನು ಏಕಕಾಲದಲ್ಲಿ ಹೊಂದಿರುವ ಸಂಸ್ಥೆಗಳ ಸಾಲಿಗೆ ಸೇರಿದೆ.

2001ರಲ್ಲಿ ಆರಂಭವಾದ ತುಂಬೆ ಲ್ಯಾಬ್ಸ್, ತುಂಬೆ ಗ್ರೂಪ್‌ನ ಮೊದಲ ಆಸ್ಪತ್ರೆ ಹಾಗೂ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ವೈದ್ಯಕೀಯ ಶಿಕ್ಷಣ ಚಟುವಟಿಕೆಗಳಿಗೆ ಬೆಂಬಲ ನೀಡುವ ಸಣ್ಣ ಪ್ರಯೋಗಾಲಯವಾಗಿ ಕಾರ್ಯಾರಂಭ ಮಾಡಿತ್ತು. ನಂತರ ಹಂತ ಹಂತವಾಗಿ ವಿಸ್ತರಣೆಗೊಂಡು, ಐದು ಪ್ರಯೋಗಾಲಯಗಳ ಜಾಲವಾಗಿ ಬೆಳೆಯಿತು. ತುಂಬೆ ಮೆಡಿಸಿಟಿಯಲ್ಲಿರುವ 25,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ರೋಗನಿರ್ಣಯ ಸಂಕೀರ್ಣದಿಂದ ಕಾರ್ಯನಿರ್ವಹಿಸುತ್ತಿದ್ದು, ಉತ್ತರ ಎಮಿರೇಟ್ಸ್‌ನ ವಿವಿಧ ಭಾಗಗಳಿಗೂ ಸೇವೆ ವಿಸ್ತರಿಸಿದೆ.

ಕಳೆದ 25 ವರ್ಷಗಳಲ್ಲಿ 19 ಮಿಲಿಯನ್‌ ಗಿಂತ ಹೆಚ್ಚು ರೋಗಿಗಳಿಗೆ ಸೇವೆ ಒದಗಿಸಿರುವ ಆರೋಗ್ಯ ಜಾಲಕ್ಕೆ ಪ್ರಯೋಗಾಲಯ ಬೆಂಬಲ ನೀಡಿದೆ. ಇದೇ ಅವಧಿಯಲ್ಲಿ 100,000 ಕ್ಕೂ ಹೆಚ್ಚು ಶಿಶುಗಳ ಜನನಕ್ಕೆ ಸಂಬಂಧಿಸಿದ ವೈದ್ಯಕೀಯ ಸೇವೆಗಳಲ್ಲಿ ಇದರ ಪರೀಕ್ಷಾ ವರದಿಗಳು ಮಹತ್ವದ ಪಾತ್ರ ವಹಿಸಿವೆ.

ಕೋವಿಡ್-19 ಸಾಂಕ್ರಾಮಿಕದ ವೇಳೆ ಪ್ರಾದೇಶಿಕ ಕೋವಿಡ್ ಪರೀಕ್ಷಾ ಕೇಂದ್ರವಾಗಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದ್ದ ಪ್ರಯೋಗಾಲಯ, ತೀವ್ರ ಹಂತದಲ್ಲಿ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಿತ್ತು. 175 ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಸೇವೆ ಒದಗಿಸಿರುವ ಪ್ರಯೋಗಾಲಯವು, ಇದುವರೆಗೆ ಸುಮಾರು 30 ಮಿಲಿಯನ್‌ಗಿಂತ ಹೆಚ್ಚು ಪರೀಕ್ಷೆಗಳನ್ನು ನಡೆಸಿದೆ.

ವೈದ್ಯಕೀಯ ಪ್ರಯೋಗಾಲಯಗಳಿಗಾಗಿ ರೂಪಿಸಲಾದ ಜಾಗತಿಕ ಗುಣಮಟ್ಟದ ಮಾನದಂಡದ ಇತ್ತೀಚಿನ ಆವೃತ್ತಿ ISO 15189:2022. ಮಾದರಿ ಸಂಗ್ರಹಣೆ, ಪರೀಕ್ಷೆ, ಫಲಿತಾಂಶಗಳ ಪರಿಶೀಲನೆ, ವ್ಯಾಖ್ಯಾನ ಮತ್ತು ವರದಿ ತಯಾರಿಕೆ ಸೇರಿದಂತೆ ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯಲ್ಲಿ ಗುಣಮಟ್ಟ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಇದು ಮೌಲ್ಯಮಾಪನ ಮಾಡುತ್ತದೆ. ಸ್ವತಂತ್ರ ಮೌಲ್ಯಮಾಪನದ ಬಳಿಕ ಈ ಮಾನ್ಯತೆ ನೀಡಲಾಗುತ್ತದೆ.

"25 ವರ್ಷಗಳ ಹಿಂದೆ ವಿಶ್ವಾಸಾರ್ಹ ರೋಗನಿರ್ಣಯ ಸೇವೆ ಒದಗಿಸುವ ಉದ್ದೇಶದಿಂದ ತುಂಬೆ ಲ್ಯಾಬ್ಸ್ ಆರಂಭಿಸಲಾಗಿತ್ತು. ಈಗ ಸಂಸ್ಥೆಯನ್ನು ಯುಎಇಯಿಂದ ಜಿಸಿಸಿ ರಾಷ್ಟ್ರಗಳು ಹಾಗೂ ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಗುರಿ ಹೊಂದಿದ್ದೇವೆ" ಎಂದು ತುಂಬೆ ಗ್ರೂಪ್‌ ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಹೇಳಿದ್ದಾರೆ.

ಕ್ಲಿನಿಕಲ್ ಪರೀಕ್ಷೆಗಳು, ಸೂಕ್ಷ್ಮಜೀವಿ ಪರೀಕ್ಷೆಗಳು, ಆಣ್ವಿಕ ರೋಗನಿರ್ಣಯ, ಔದ್ಯೋಗಿಕ ಆರೋಗ್ಯ ಮತ್ತು ಹಿಸ್ಟೋಪಾಥಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತುಂಬೆ ಲ್ಯಾಬ್ಸ್ ಸೇವೆ ಒದಗಿಸುತ್ತಿದೆ. ಕ್ಯಾನ್ಸರ್ ರೋಗ ನಿರ್ಣಯಕ್ಕೆ ಹಿಸ್ಟೋಪಾಥಾಲಜಿ ವಿಭಾಗ ನೆರವಾಗುತ್ತಿದ್ದು, ನವಜಾತ ಶಿಶುಗಳ ತಪಾಸಣಾ ಕಾರ್ಯಕ್ರಮವು ಉತ್ತರ ಎಮಿರೇಟ್ಸ್‌ನ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮತ್ತು ತುಂಬೆ ಆಸ್ಪತ್ರೆಗಳ ಪ್ರಯೋಗಾಲಯ ಸೇವೆಗಳಿಗೆ ಸಂಶೋಧನೆ ಹಾಗೂ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳ ಮೂಲಕ ಬೆಂಬಲ ಒದಗಿಸಲಾಗುತ್ತಿದೆ. ಅಬುಧಾಬಿಯಲ್ಲಿ ಹೊಸ ಪ್ರಯೋಗಾಲಯ ಸ್ಥಾಪಿಸುವ ಯೋಜನೆಯೂ ಇದೆ.

ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ಗಳನ್ನು ಪರಿಚಯಿಸ ಲಾಗುತ್ತಿದ್ದು, ಇದರ ಮೂಲಕ ರೋಗಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆಗಳನ್ನು ಬುಕ್ ಮಾಡಿ ಪಾವತಿ ಮಾಡಬಹು ದಾಗಿದೆ. ಮನೆ ಬಾಗಿಲಿಗೆ ಮಾದರಿ ಸಂಗ್ರಹಣಾ ಸೇವೆಯನ್ನು ಅಬುಧಾಬಿಗೂ ವಿಸ್ತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಆಲ್ಝೈಮರ್ ಕಾಯಿಲೆಯ ಆರಂಭಿಕ ಪತ್ತೆಗೆ ರಕ್ತ ಆಧಾರಿತ ಪರೀಕ್ಷೆಯನ್ನು ಪರಿಚಯಿಸಲು ಸಂಸ್ಥೆ ಸಿದ್ಧತೆ ನಡೆಸಿದೆ. ApoE4, pTau181, pTau217 ಮತ್ತು ನ್ಯೂರೋಫಿಲಮೆಂಟ್ ಲೈಟ್ ಚೈನ್ ಸೇರಿದಂತೆ ಹಲವು ಜೈವಿಕ ಗುರುತುಗಳನ್ನು ಪತ್ತೆಹಚ್ಚುವ ಮೂಲಕ ರೋಗದ ಆರಂಭಿಕ ಹಂತದಲ್ಲಿಯೇ ತಪಾಸಣೆ ನಡೆಸಲು ಈ ಪರೀಕ್ಷೆ ನೆರವಾಗಲಿದೆ.

ಇದರ ಜೊತೆಗೆ ‘ಲ್ಯಾಬ್ 5.0’ ಪರಿಕಲ್ಪನೆಯಡಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಗುಣಮಟ್ಟದ ಮೇಲ್ವಿಚಾರಣೆ, ಮುನ್ಸೂಚನಾ ವಿಶ್ಲೇಷಣೆ ಹಾಗೂ ಸುಧಾರಿತ ಯಾಂತ್ರೀಕರಣವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆಗೆ ಹೆಚ್ಚು ನಿಖರ ಮಾರ್ಗದರ್ಶನ ನೀಡುವ ವ್ಯವಸ್ಥೆ ರೂಪಿಸುವುದು ಇದರ ಉದ್ದೇಶವಾಗಿದೆ.

2001ರಲ್ಲಿ ಸ್ಥಾಪನೆಯಾದ ತುಂಬೆ ಲ್ಯಾಬ್ಸ್, ಯುಎಇ ಆರೋಗ್ಯ ಮತ್ತು ತಡೆಗಟ್ಟುವಿಕೆ ಸಚಿವಾಲಯದ ಪರವಾನಗಿ ಹೊಂದಿದ್ದು, CAP ಹಾಗೂ ISO 15189 ಎರಡೂ ಮಾನ್ಯತೆಗಳನ್ನು ಪಡೆದಿರುವ ಪ್ರದೇಶದ ಪ್ರಮುಖ ಖಾಸಗಿ ಶೈಕ್ಷಣಿಕ ಪ್ರಯೋಗಾಲಯ ಜಾಲಗಳಲ್ಲಿ ಒಂದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X