Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ತುಳುಕೂಟ ಖತರ್‌ ವಾರ್ಷಿಕ ಮಹಾಸಭೆ:...

ತುಳುಕೂಟ ಖತರ್‌ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ವಿಜಯ್ ಕುಂಬ್ರ ಅವಿರೋಧ ಆಯ್ಕೆ

ವಾರ್ತಾಭಾರತಿವಾರ್ತಾಭಾರತಿ9 July 2026 11:45 PM IST
share
ತುಳುಕೂಟ ಖತರ್‌ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ವಿಜಯ್ ಕುಂಬ್ರ ಅವಿರೋಧ ಆಯ್ಕೆ

ದೋಹ: ಖತರ್‌ನ ಭಾರತೀಯ ರಾಯಭಾರ ಕಚೇರಿಯ ಅಧೀನದಲ್ಲಿರುವ ಇಂಡಿಯನ್ ಕಲ್ಬರಲ್ ಸೆಂಟರ್ (ICC)ನ ಅಂಗಸಂಸ್ಥೆಯಾದ ಪ್ರತಿಷ್ಠಿತ ತುಳುಕೂಟ ಖತರ್‌ನ ಮುಂದಿನ ಅಧ್ಯಕ್ಷರಾಗಿ ವಿಜಯ್ ಕುಂಬ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜುಲೈ 3ರಂದು ಐಸಿಸಿ ಖತರ್‌ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು.

ಇತ್ತೀಚೆಗಷ್ಟೇ ತನ್ನ ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡ ತುಳುಕೂಟ ಖತರ್‌, ಅತ್ಯಂತ ಕ್ರಿಯಾಶೀಲ ಹಾಗೂ ಮಾದರಿ ಭಾರತೀಯ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಳೆದ 26 ವರ್ಷಗಳಿಂದ ಭಾಷೆ, ಸಂಸ್ಕೃತಿ, ಪರಂಪರೆ, ಕ್ರೀಡೆ, ಸಮಾಜಸೇವೆ ಹಾಗೂ ಸಮುದಾಯದ ಏಳಿಗೆಗಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಘವು ಅನೇಕ ಗಮನಾರ್ಹ ಕಾರ್ಯಕ್ರಮಗಳ ಮೂಲಕ ಸದಸ್ಯರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸಿದೆ.

ಹಾಲಿ ಅಧ್ಯಕ್ಷರಾದ ಸಂದೇಶ್ ಆನಂದ್ ಅವರು ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ಕಳೆದ ಎರಡು ವರ್ಷಗಳಲ್ಲಿ ಸಂಘವು ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಪಕ್ಷಿನೋಟವನ್ನು ನೀಡಿದರು. ಈ ಅವಧಿಯಲ್ಲಿ ಸಂಘದ ಚಟುವಟಿಕೆಗಳಿಗೆ ಬೆಂಬಲ ನೀಡಿದ ಎಲ್ಲಾ ಸ್ವಯಂಸೇವಕರು, ಪ್ರಾಯೋಜಕರು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ಹಾಲಿ ಕಾರ್ಯಕಾರಿ ಮಂಡಳಿಯ ಸದಸ್ಯರಾದ ವಿಜಯ್ ಕುಂಬ್ರ, ಪ್ರವೀಣ ಶೆಟ್ಟಿ, ಜೀವನ್ ಪ್ರಕಾಶ್, ದಿವ್ಯಶ್ರೀ, ವಿಜಯಾ ಶೆಟ್ಟಿ, ಸೌರಭ್ ಶೆಟ್ಟಿ, ಪ್ರಶಾಂತ್ ಗೌಡ, ನಿಯಾಝ್, ಮೋಹನ್ ರಾವ್ ಹಾಗೂ ಜೆರಾಲ್ಡ್ ಡಿ'ಮೆಲ್ಲೋ ಅವರಿಗೆ, ಜೊತೆಗೆ ಸಲಹಾ ಸಮಿತಿಯ ಅಧ್ಯಕ್ಷರಾದ ಕಿರಣ್ ಆನಂದ್ ಹಾಗೂ ಸದಸ್ಯರಾದ ಅಸ್ಮತ್ ಅಲಿ ಮತ್ತು ಚೈತಾಲಿ ಉದಯ್ ಶೆಟ್ಟಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ತುಳುಕೂಟದ ಪರವಾಗಿ ಸಲಹಾ ಸಮಿತಿಯು ಅಧ್ಯಕ್ಷರಾದ ಸಂದೇಶ್ ಆನಂದ್ ಅವರನ್ನು ಅವರ ಆದರ್ಶ ನಾಯಕತ್ವ ಹಾಗೂ ತುಳುಕೂಟದ ಬೆಳ್ಳಿ ಹಬ್ಬದ ಸಂಭ್ರಮವನ್ನು ಅದ್ದೂರಿ ಯಶಸ್ಸಿನತ್ತ ಕೊಂಡೊಯ್ದ ಅಪೂರ್ವ ಸೇವೆಯನ್ನು ಗುರುತಿಸಿ ಅಭಿನಂದಿಸಿತು. ಸಂಸ್ಥೆಯ ಬೆಳವಣಿಗೆಗೆ ಅವರು ಸಲ್ಲಿಸಿದ ಸಮರ್ಪಿತ ಸೇವೆಯನ್ನು ಗೌರವಿಸಿ, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯದರ್ಶಿ ಪ್ರವೀಣ ಶೆಟ್ಟಿ ಅವರು ಹಿಂದಿನ ಮಹಾಸಭೆಯ ವರದಿಯೊಂದಿಗೆ ಕಳೆದ ಎರಡು ವರ್ಷಗಳ ಕಾರ್ಯ ಚಟುವಟಿಕೆಗಳ ಸಮಗ್ರ ವರದಿಯನ್ನು ಮಂಡಿಸಿದರು. ಖಜಾಂಚಿ ಜೀವನ್ ಪ್ರಕಾಶ್ ಅವರು ಲೆಕ್ಕಪತ್ರವನ್ನು ಸಭೆಯ ಅನುಮೋದನೆಗೆ ಮಂಡಿಸಿದರು.

ಚುನಾವಣಾಧಿಕಾರಿಯಾಗಿದ್ದ ಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯೆಯಾದ ಮಿಲನ್ ಅರುಣ್ ಅವರು ಹಾಲಿ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ, ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದರು.


2026-2028ನೇ ಸಾಲಿನ ಅಧ್ಯಕ್ಷರಾಗಿ ವಿಜಯ್ ಕುಂಬ್ರ ಅವರು ಅವಿರೋಧವಾಗಿ ಆಯ್ಕೆಯಾದರು.

ಅವರೊಂದಿಗೆ ಪ್ರವೀಣ ಪ್ರಕಾಶ್ ಶೆಟ್ಟಿ (ಉಪಾಧ್ಯಕ್ಷೆ), ಸುಪ್ರಿಯಾ ಸುರೇಶ್ ಭಟ್ (ಪ್ರಧಾನ ಕಾರ್ಯದರ್ಶಿ), ಮಹಾಲಕ್ಷ್ಮಿ ವಿಠಲ್ (ಸಾಂಸ್ಕೃತಿಕ ಕಾರ್ಯದರ್ಶಿ), ಸಂಜಯ್ ಜತನ್ (ಜೊತೆ ಕಾರ್ಯದರ್ಶಿ), ಮಂಜಪ್ಪ ಕೃಷ್ಣಪ್ಪ ಕರಿಗಾರ್ (ಖಜಾಂಜಿ ಮತ್ತು ಮಾಧ್ಯಮ), ಶೌಕತ್ ಅಲಿ (ಕ್ರೀಡಾ ಕಾರ್ಯದರ್ಶಿ), ಸುಮಂತ್ ಶೆಟ್ಟಿ (ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ), ರೋಸ್ಟನ್ ಡಿಸೋಜಾ (ಕ್ರೀಡಾ ಜೊತೆ ಕಾರ್ಯದರ್ಶಿ), ಲೋಕೇಶ್ ವಿಶ್ವನಾಥ ಅಮೀನ್ (ಸದಸ್ಯತ್ವ ಕಾರ್ಯದರ್ಶಿ), ಹಾಗೂ ರಾಘವೇಂದ್ರ ಅಂಚನ್ (ವ್ಯವಸ್ಥಾಪನಾ ಕಾರ್ಯದರ್ಶಿ) ಅವರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.

ಸಲಹಾ ಸಮಿತಿ ಅಧ್ಯಕ್ಷರು: ಸಂದೇಶ್ ಆನಂದ್

ಸಲಹಾ ಸಮಿತಿ ಸದಸ್ಯರು: ಮೂಡಂಬೈಲು ರವಿ ಶೆಟ್ಟಿ, ರಾಮಚಂದ್ರ ಶೆಟ್ಟಿ, ಅಸ್ಮತ್ ಅಲಿ, ಚೈತಾಲಿ ಉದಯ ಶೆಟ್ಟಿ, ಕಿರಣ್ ಆನಂದ್

ನೂತನ ಅಧ್ಯಕ್ಷರಾದ ವಿಜಯ್ ಕುಂಬ್ರ ಅವರು ಮಾತನಾಡಿ, ಸದಸ್ಯರ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ದೊಂದಿಗೆ ತುಳುಕೂಟ ಖತರ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥಾಪಕ ಸದಸ್ಯರಾದ ಕೃಷ್ಣ ಶೆಟ್ಟಿ, ಹಿರಿಯ ಸದಸ್ಯರು ಹಾಗೂ ಪ್ರಾಯೋಜಕರಾದ ಎಂ. ಪಲ್ಲೋಂಜಿ ಗ್ರೂಪ್‌ನ ಚಿದಾನಂದ ನಾಯ್ಕ, ಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯೆ ಮಿಲನ್ ಅರುಣ್, ಹಿರಿಯ ಸದಸ್ಯರು ಹಾಗೂ ICBFನ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಸಕ್ರಿಯ ಸದಸ್ಯರು ಹಾಗೂ ಬಿಲ್ಲವಾಸ್ ಖತರ್ ಅಧ್ಯಕ್ಷೆ ಅಪರ್ಣಾ ಶರತ್, ಸಲಹಾ ಸಮಿತಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳಾದ ಕಿರಣ್ ಆನಂದ್, ಅಸ್ಮತ್ ಅಲಿ ಮತ್ತು ಚೈತಾಲಿ ಉದಯ್ ಶೆಟ್ಟಿ, ಹಿರಿಯ ಸದಸ್ಯರುಗಳಾದ ಅಬ್ದುಲ್ಲಾ ಮೋನು, ರೋಶನ್ ಶೆಟ್ಟಿ, ಪದ್ಮಶ್ರೀ ಶೆಟ್ಟಿ, ಶ್ರೀಧರ್ ನಾಯಕ್, ಮನೋಜ್ ಶೆಟ್ಟಿ, ಸುನಿಲ್ ಭಂಡಾರಿ, ಅನಿಲ್ ಶೆಟ್ಟಿ, ಧನಂಜಯ ರೈ, ಚಂದ್ರಶೇಖರ್ ಶೆಟ್ಟಿ ಪೇಜಾವರ, ಸತೀಶ್ ಅಮಿನ್, ಚೈತಾಲಿ ಸುಹಾಸ್ ಶೆಟ್ಟಿ, ಸಾಗರ್ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಹಾಗೂ ಅನೇಕ ಮಂದಿ ಸದಸ್ಯರು ಉಪಸ್ಥಿತರಿದ್ದರು.

ಉಮೇಶ್ ಆಚಾರ್ಯ ಹಾಗೂ ಮನೋಜ್ ಆಚಾರ್ಯ ಅವರು ಛಾಯಾಗ್ರಹಣ ಹಾಗೂ ವೀಡಿಯೊ ಚಿತ್ರೀಕರಣದಲ್ಲಿ ಸಹಕರಿಸಿದರು. ಕಾರ್ಯಕ್ರಮವನ್ನು ಪ್ರವೀಣ ಪ್ರಕಾಶ್ ಶೆಟ್ಟಿ ಅವರು ನಿರೂಪಿಸಿದರೆ, ಸೌರಭ್ ಶೆಟ್ಟಿ ಅವರು ವಂದನಾರ್ಪಣೆ ಸಲ್ಲಿಸಿದರು.

Tags

TulukootaQatarAnnualGeneralMeetingVijay KumbraelectunopposePresident
share
ವಾರ್ತಾಭಾರತಿ
ವಾರ್ತಾಭಾರತಿ
Next Story
X