Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈನಲ್ಲಿ ಅದ್ದೂರಿಯಾಗಿ ನಡೆದ ಯುಎಇ...

ದುಬೈನಲ್ಲಿ ಅದ್ದೂರಿಯಾಗಿ ನಡೆದ ಯುಎಇ ‘ಸಾಹೇಬಾನ್’ನ ‘ಕುಟುಂಬ ಸ್ನೇಹಕೂಟ'

ಎಂ.ಇಕ್ಬಾಲ್ ಉಚ್ಚಿಲ, ದುಬೈಎಂ.ಇಕ್ಬಾಲ್ ಉಚ್ಚಿಲ, ದುಬೈ11 Jan 2026 12:48 AM IST
share
ದುಬೈನಲ್ಲಿ ಅದ್ದೂರಿಯಾಗಿ ನಡೆದ ಯುಎಇ ‘ಸಾಹೇಬಾನ್’ನ ‘ಕುಟುಂಬ ಸ್ನೇಹಕೂಟ
ಡಾ.ಸಫ್ವಾನ್, ಮಥೀನ್ ಅಹಮದ್ ಚಿಲ್ಮಿ, ಶಫಿ ಶಾಬಾನ್, ಇಕ್ಬಾಲ್ ಮನ್ನಾರಿಗೆ 'ಸಾಹೇಬಾನ್ ಎಕ್ಸೆಲೆನ್ಸ್ ಅವಾರ್ಡ್' ಪ್ರದಾನ

ದುಬೈ : ಯುಎಇ ‘ಸಾಹೇಬಾನ್’ನಿಂದ ಶನಿವಾರ ದುಬೈಯ ಅಲ್ ಖಿಸೆಸ್ ಅಮಿಟಿ ಸ್ಕೂಲಿನಲ್ಲಿ ಅದ್ದೂರಿಯಾಗಿ ‘ಕುಟುಂಬ ಸ್ನೇಹಕೂಟ' ಆಯೋಜಿಸಲಾಗಿತ್ತು.

ಬೆಳಗ್ಗೆ 10ರಿಂದ ರಾತ್ರಿ 9ರವರಗೆ ನಡೆದ ‘ಕುಟುಂಬ ಸ್ನೇಹಕೂಟ'ದಲ್ಲಿ ದಿನವಿಡೀ ಹತ್ತಲವು ಸ್ಪರ್ಧೆ, ಮನೋರಂಜನಾ, ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ದಕ್ಷಿಣ ಕನ್ನಡ ಮತ್ತು ಉಡುಪಿಯ ಉರ್ದು ಮಾತನಾಡುವ ಮುಸ್ಲಿಂ ಸಮುದಾಯವಾಗಿರುವ ಯುಎಇ ‘ಸಾಹೇಬಾನ್’, ಪ್ರತಿ ವರ್ಷ ‘ಕುಟುಂಬ ಸ್ನೇಹಕೂಟ' ವನ್ನು ದುಬೈಯಲ್ಲಿ ಅದ್ದೂರಿ, ಸಂಭ್ರಮದಿಂದ ಆಯೋಜಿಸುತ್ತಾ ಬಂದಿದೆ. ಈ ಸ್ನೇಹಕೂಟದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮಕ್ಕಳು ಕುಟುಂಬ ಸಮೇತರಾಗಿ ಉತ್ಸಾಹ, ಸಂತಸದಿಂದ ಪಾಲ್ಗೊಳ್ಳುವ ಮೂಲಕ ಈ ಬಾರಿ ಬಹಳ ವಿಶೇಷವಾಗಿ ಆಚರಿಸಲಾಯಿತು.


'ಸಾಹೇಬಾನ್ ಎಕ್ಸೆಲೆನ್ಸ್ ಅವಾರ್ಡ್' ಪ್ರದಾನ

'ಸಾಹೇಬಾನ್'ನಿಂದ ಪ್ರತಿ ವರ್ಷ ವಿವಿಧ ಸಾಧಕರನ್ನು ಗುರುತಿಸಿ ಕೊಡಲಾಗುವ 'ಸಾಹೇಬಾನ್ ಎಕ್ಸೆಲೆನ್ಸ್ ಅವಾರ್ಡ್'ನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ‘ಸಾಹೇಬಾನ್’ ಪೋಷಕರಾದ ಖ್ಯಾತ ಅನಿವಾಸಿ ಉದ್ಯಮಿ, ಸಮಾಜ ಸೇವಕ, ದುಬೈನ Nash ಎಂಜಿನಿಯರಿಂಗ್ ಕಂಪನಿಯ ಮಾಲಿಕ ಕೆ.ಎಸ್.ನಿಸಾರ್ ಅಹ್ಮದ್, ‘ಸಾಹೇಬಾನ್’ ಯುಎಇಯ ಸಂಚಾಲಕ H.M.ಆಫ್ರೋಝ್ ಅಸ್ಸಾದಿ, ವಿಶೇಷ ಅಥಿತಿ KMES ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್‌ ಅಹ್ಮದ್ ಕಾರ್ಕಳ ಅವರು ಪ್ರದಾನ ಮಾಡಿದರು.


'ಸಾಹೇಬಾನ್ ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್ (Sahebaan Academic Excellence Award)'ನ್ನು ಖತರ್ (ದೋಹಾ)ನಲ್ಲಿರುವ ನ್ಯೂರಾಲಜಿಸ್ಟ್ ಡಾ.ಸಫ್ವಾನ್ ಅಹ್ಮದ್ ಅವರಿಗೆ, ‘ಸಾಹೇಬಾನ್ ಬಿಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ (Sahebaan Business Excellence Award)’ನ್ನು ದುಬೈಯ ಪೆಟ್ರೋಸೊಲ್ಯೂಷನ್ಸ್ ನ ಆಡಳಿತ ನಿರ್ದೇಶಕ ಮಥೀನ್ ಅಹಮದ್ ಚಿಲ್ಮಿ ಅವರಿಗೆ, ಸಾಹೇಬಾನ್ ಸ್ಪೋರ್ಟ್ಸ್ ಎಕ್ಸೆಲೆನ್ಸ್ ಅವಾರ್ಡ್ (Sahebaan Sports Excellence Award)'ನ್ನು ಕ್ರೀಡೆಗಳ ಉತ್ತೇಜನಕ್ಕಾಗಿ ಮೊಹಮ್ಮದ್ ಶಫಿ ಶಾಬಾನ್ ಅವರಿಗೆ ಹಾಗು ಸಾಹೇಬಾನ್ ಕಮ್ಯೂನಿಟಿ ಸರ್ವಿಸ್ ಅವಾರ್ಡ್ (Sahebaan Community Service Award)ನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಕ್ಬಾಲ್ ಮನ್ನಾರಿಗೆ ನೀಡಿ ಗೌರವಿಸಲಾಯಿತು.




ಇದೇ ವೇಳೆ ಕೆ.ಎಸ್.ನಿಸಾರ್ ಅಹ್ಮದ್, H.M.ಆಫ್ರೋಝ್ ಅಸ್ಸಾದಿ, ಕೆ.ಎಸ್.ಇಮ್ತಿಯಾಝ್‌ ಅಹ್ಮದ್ ಕಾರ್ಕಳ ಅವರನ್ನು ಗೌರವಿಸಲಾಯಿತು. ಈ ವೇಳೆ ದುಬೈಯ ಪೆಟ್ರೋ ಗ್ಯಾಸ್ ಪೈಪಿಂಗ್ ನ ಅಧ್ಯಕ್ಷ ನಝೀಮುದ್ದೀನ್ (ನಾಝಿಮ್) ಮೊಹಮ್ಮದ್, ವಾರ್ತಾ ಭಾರತಿ ಪತ್ರಿಕೆಯ ಸ್ಥಾಪಕ ನಿರ್ದೇಶಕ ಯಾಸೀನ್ ಮಲ್ಪೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಶೇಖ್ ವಾಹಿದ್ ದಾವೂದ್, ಜಮೀಯ್ಯತುಲ್ ಫಲಾಹ್ ನ ಮಾಜಿ ಅಧ್ಯಕ್ಷ ಅಬ್ದುಲ್ ಲತೀಫ್ ಸಾಹೇಬ್, ಖತರ್ ನ ಮಮ್ತಾಝ್ ಹುಸೈನ್, ಖತರ್ ನ ಅಷ್ಫಾಕ್ ಅಹಮದ್, ಅಬ್ದುಲ್ ಅಝೀಝ್ ಉದ್ಯಾವರ ಅವರನ್ನೂ ಗೌರವಿಸಲಾಯಿತು.


ಸಾಧಕ ವಿದ್ಯಾರ್ಥಿಗಳಿಗೆ ಅಕಾಡೆಮಿಕ್ ಎಕ್ಸೆಲೆನ್ಸ್ ಅವಾರ್ಡ್(Academic Excellence) ಪ್ರದಾನ

ವಿದ್ಯಾಭ್ಯಾಸದಲ್ಲಿ ಶ್ರೇಷ್ಠ ಸಾಧನೆ ಹಾಗು ಕ್ರೀಡೆಯಲ್ಲಿ ಸಾಧನೆ ಮಾಡಿದ ಯುಎಇಯಲ್ಲಿ ನೆಲೆಸಿರುವ ಸಾಹೇಬಾನ್ ಸಮುದಾಯದ ಸಾಧಕ ಮಕ್ಕಳನ್ನು ಗುರುತಿಸಿ ಗುರುತಿಸಿ 'ಅಕಾಡೆಮಿಕ್ ಎಕ್ಸೆಲೆನ್ಸ್ ಅವಾರ್ಡ್'ನ್ನು ನೀಡಿ ಗೌರವಿಸಲಾಯಿತು. H.M.ಆಫ್ರೋಝ್ ಅಸ್ಸಾದಿ, ಕಾರ್ಯಕ್ರಮದ ಮಹಿಳಾ ಸಂಘಟಕಿಯರಾದ ಫರ್ವೀನ್ ಅಸ್ಸಾದಿ, ರೀನಾ ಅಲ್ತಾಫ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.


10ನೇ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿಟ್ಲ ಮೂಲದ ಅಬುಧಾಬಿಯ ಮಯೂರ್ ಪ್ರೈವೆಟ್ ಸ್ಕೂಲಿನ ರಝೀನ್ ಬೇಗ್ (91% ಅಂಕ), ಮಂಗಳೂರು ಮೂಲದ ಶಾರ್ಜಾದ ಅವರ್ ಓನ್ ಇಂಗ್ಲಿಷ್ ಹೈಸ್ಕೂಲಿನ ಆನಂ ಅಸ್ಲಾಂ (95.30% ಅಂಕ), ಉಡುಪಿ ಮೂಲದ ಶಾರ್ಜಾದ GEMS ಅವರ್ ಓನ್ ಇಂಗ್ಲಿಷ್ ಹೈಸ್ಕೂಲಿನ ಮೊಹಮ್ಮದ್ ಇಬ್ರಾಹಿಂ (90.50% ಅಂಕ), ಗಂಗೊಳ್ಳಿ ಮೂಲದ ದುಬೈನ ದಿ ಸೆಂಟ್ರಲ್ ಸ್ಕೂಲಿನ ಅಮೀರಹ್ ಕಾಝಿ ಅಬ್ದುಲ್ ಖಾದರ್ ಕಾಝಿ (96.60% ಅಂಕ), ಮಂಗಳೂರು ಮೂಲದ ಅಜ್ಮಾನ್ ನ ಅಲ್ ಅಮೀರ್ ಇಂಗ್ಲಿಷ್ ಸ್ಕೂಲಿನ ಸಿಮ್ರಾಹ್ ಖಾನ್ ನದೀಮ್ (91.20% ಅಂಕ), ಮಂಗಳೂರು ಮೂಲದ ರಾಸ್ ಅಲ್ ಖೈಮ ಮೆಡಿಕಲ್ & ಹೆಲ್ತ್ ಸೈನ್ಸ್ ಯೂನಿವರ್ಸಿಟಿಯ ನೂಹ ರಿಯಾಝ್ ಖಲೀಫೆ ಅವರಿಗೆ 'ಅಕಾಡೆಮಿಕ್ ಎಕ್ಸೆಲೆನ್ಸ್ ಅವಾರ್ಡ್'ನ್ನು ಹಾಗು ಮಂಗಳೂರು ಮೂಲದ ದುಬೈನ ಜೆಮ್ಸ್(GEMS) ಲೆಗೆಸ್ಸಿ ಸ್ಕೂಲಿನ ಫುಟ್ಬಾಲ್ ಆಟಗಾರ ಮುಹಮ್ಮದ್ ಐಝ್ ಅವರಿಗೆ 'ಸ್ಪೋರ್ಟ್ಸ್ ಎಕ್ಸೆಲೆನ್ಸ್ ಅವಾರ್ಡ್'ನ್ನು ಸಮಾರಂಭದಲ್ಲಿದ್ದ ಗಣ್ಯರು ನೀಡಿ ಅಭಿನಂದಿಸಿದರು.


ಆರ್ಥಿಕ ನೆರವಿನ ಘೋಷಣೆ ಮಾಡಿದ ಕೆ.ಎಸ್.ನಿಸಾರ್ ಅಹ್ಮದ್

ಪಿಯುಸಿ ನಂತರದ ವಿದ್ಯಾಭ್ಯಾಸವನ್ನು ಆರ್ಥಿಕ ಹಿನ್ನೆಲೆಯಲ್ಲಿ ಮುಂದುವರಿಸಲು ಸಾಧ್ಯವಾಗದ ಸಾಹೇಬಾನ್ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಹಣಕಾಸಿನ ನೆರವು ಹಾಗು ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವಿನ ಸಹಾಯಹಸ್ತವನ್ನು ನೀಡುವುದಾಗಿ ಕೆ.ಎಸ್.ನಿಸಾರ್ ಅಹ್ಮದ್ ಅವರು ಘೋಷಿಸಿರುವುದಾಗಿ ಈ ಸಂದರ್ಭದಲ್ಲಿ ವೇಳೆ ಸಾಹೇಬಾನ್ ಸಮುದಾಯದ ಅಲ್ತಾಫ್ M.S. ಅವರು ಹೇಳಿದರು.


ದಿನವಿಡೀ ನಡೆದ ಆಟೋಟ ಸ್ಪರ್ಧೆಗಳು

ಬೆಳಗ್ಗಿನಿಂದ ಸಂಜೆಯ ವರಗೆ ಹಿರಿಯರು, ಕಿರಿಯರಿಗೆ, ಮಹಿಳಾ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ಗಳನ್ನು ಸಾಹೇಬಾನ್ ಸಮುದಾಯದವರಿಗಾಗಿ ಆಯೋಜಿಸಲಾಗಿತ್ತು. ಜನ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸಂತಸವನ್ನು ಹಂಚಿಕೊಂಡರು.


ಅಡುಗೆ ಸ್ಪರ್ಧೆ, ಮಕ್ಕಳಿಂದ ಹಿಡಿದು ಹಿರಿಯರ ವರಗೆ ನಾನಾ ರೀತಿಯ ಮೋಜು ಮಸ್ತಿಯ ಆಟಗಳು, ಮನರಂಜಿಸುವಂತ ಸ್ಪರ್ಧೆಗಳು, ಕ್ವಿಝ್ ಸೇರಿದಂತೆ ವಿವಿಧ ಆಟಗಳು, ಸ್ಪರ್ಧೆಗಳು ಜರಗಿದವು. ಇದರಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಎಲ್ಲರ ಗಮನ ಸೆಳೆದರು.

ಸಂಜೆ ನಡೆದ ಸಮಾರಂಭವು ಹಾರೂನ್ ನವೀದ್ ಅವರ ಕಿರಾತ್ ಪಠಣದೊಂದಿಗೆ ಆರಂಭಗೊಂಡಿತು. 22 ಮಕ್ಕಳು ಸೇರಿ ಇಸ್ಲಾಮಿಕ್ ಗೀತೆ (Nasheed)ಯನ್ನು ಹಾಡಿದರು. 16 ಮಂದಿ ಪುಟಾಣಿ ಮಕ್ಕಳಿಂದ ವೇದಿಕೆ ಮೇಲೆ ನಡೆದ 'Teddy & Me' ಕಾರ್ಯಕ್ರಮವು ಸೇರಿದ ಜನರಿಗೆ ಮುದ ನೀಡಿತು. ಮಕ್ಕಳ ಕವ್ವಾಲಿಯಂತೂ ನೆರೆದವರನ್ನು ಮನತಣಿಸುವಂತೆ ಮಾಡಿತು. ಜೊತೆ ರಾಷ್ಟ್ರಗೀತೆ, ಮಕ್ಕಳಿಂದ ನಡೆದ ಸ್ಕಿಟ್(ಛದ್ಮ ವೇಷ) ನೋಡಿ ಜನ ಆನಂದಪಟ್ಟರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ 'ಸಾಹೇಬಾನ್' ಸಂಘಟನೆ ಬಗ್ಗೆ, ಕೆ.ಎಸ್.ನಿಸಾರ್ ಅಹ್ಮದ್, ಖ್ಯಾತ ಉದ್ಯಮಿ, ಹಿದಾಯತ್ ಗ್ರೂಪ್‌ನ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, H.M.ಆಫ್ರೋಝ್ ಅಸ್ಸಾದಿ ಅವರ ಸಾಧನೆಯ ಬಗ್ಗೆಗಿನ ಮಾಹಿತಿ ನೀಡುವ ವೀಡಿಯೊ ತುಣುಕನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಉಡುಗೊರೆಗಳನ್ನು, ರಾಫಲ್ ಡ್ರಾ ಮೂಲಕ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು.

ಸಂಘಟಕರಾದ ಅಲ್ತಾಫ್ M.S., ಅಕ್ರಮ್, ಅಜ್ಮಲ್ ಮೊಹಮ್ಮದ್, ಅಲ್ತಾಫ್ ಖಲೀಫೆ, ಮೊಹಮ್ಮದ್ ಸಮೀಉಲ್ಲಾ, ಸುಹೈಲ್ ಕುದ್ರೋಳಿ, ಮೊಹಮ್ಮದ್ ಆಸೀಫ್, ನಯೀಮ್ ಖಾನ್ ಹಾಗು ಮಹಿಳಾ ಸಂಘಟಕಿಯರಾದ ಫರ್ವೀನ್ ಅಸ್ಸಾದಿ, ರೀನಾ ಅಲ್ತಾಫ್ ಹಾಗು ಸಹರ ಆಸೀಫ್ ಅವರು ಸಹಕರಿಸಿದರು.


ಅಲ್ತಾಫ್ M.S ಸ್ವಾಗತಿಸಿದರು. ಅಜ್ಮಲ್ ಮೊಹಮ್ಮದ್ ವಂದಿಸಿದರು. ದಿನವಿಡೀ ನಡೆದ ಕಾರ್ಯಕ್ರಮವನ್ನು ಮಂಗಳೂರಿನಿಂದ ಬಂದಿದ್ದ ಹಿಸ್ರಾರ್ ತಲ್ಲನಿ ಹಾಗು ಆಲಿಯ ಇಮ್ತಿಯಾಝ್ ಖಾನ್ ಅಚ್ಚುಕಟ್ಟಾಗಿ ನಿರೂಪಿಸಿದರು.












































Tags

UAESahebanFamily Gathering
share
ಎಂ.ಇಕ್ಬಾಲ್ ಉಚ್ಚಿಲ, ದುಬೈ
ಎಂ.ಇಕ್ಬಾಲ್ ಉಚ್ಚಿಲ, ದುಬೈ
Next Story
X