Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. UAEಯಲ್ಲಿ ಗಲ್ಫ್ ಮೆಡಿಕಲ್...

UAEಯಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಯು.ಟಿ. ಇಫ್ತಿಕಾರ್ ಫರೀದ್‌ ಗೆ ‘ಸ್ಟಾರ್ ಆಫ್ ದಿ ಇಯರ್–2026’ ಪ್ರಶಸ್ತಿ

ದುಬೈ, ಉಮ್ಮ್ ಅಲ್ ಖುವೈನ್, ಫುಜೈರಾದಲ್ಲಿ ಹೊಸ ರಿಹ್ಯಾಬಿಲಿಟೇಶನ್ ಕೇಂದ್ರಗಳ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ26 Oct 2026 8:19 PM IST
share
UAEಯಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಯು.ಟಿ. ಇಫ್ತಿಕಾರ್ ಫರೀದ್‌ ಗೆ ‘ಸ್ಟಾರ್ ಆಫ್ ದಿ ಇಯರ್–2026’ ಪ್ರಶಸ್ತಿ

ಅಜ್ಮಾನ್: ಗಲ್ಫ್ ಮೆಡಿಕಲ್ ಯುನಿವರ್ಸಿಟಿ (GMU) ವತಿಯಿಂದ ಕರ್ನಾಟಕದ ರಾಷ್ಟ್ರೀಯ ಅಲೈಡ್ ಆ್ಯಂಡ್ ಹೆಲ್ತ್‌ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಪ್ರೊ. ಯು.ಟಿ. ಇಫ್ತಿಕಾರ್ ಫರೀದ್ ಅವರಿಗೆ 2026ರ ‘ಸ್ಟಾರ್ ಆಫ್ ದಿ ಇಯರ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಜ್ಮಾನ್‌ ನ ಅಲ್ ಜರ್ಫ್‌ ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿ ರಿಹ್ಯಾಬಿಲಿಟೇಶನ್ ಚಿಕಿತ್ಸಾ ಪದ್ಧತಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳ ಕುರಿತು ನಡೆದ 6ನೇ ಅಂತರರಾಷ್ಟ್ರೀಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಮ್ಮೇಳನದಲ್ಲಿ ಈ ಗೌರವ ನೀಡಲಾಯಿತು. ಆರೋಗ್ಯ ಸೇವೆ ಮತ್ತು ರಿಹ್ಯಾಬಿಲಿಟೇಶನ್ ಶಿಕ್ಷಣದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 26 ಸಾಧಕರು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದುಬೈ ಕ್ಲಬ್ ಫಾರ್ ಪೀಪಲ್ ಆಫ್ ಡಿಟರ್ಮಿನೇಶನ್‌ ನ ಕಾರ್ಯನಿರ್ವಾಹಕ ನಿರ್ದೇಶಕ ಮಜೀದ್ ಅಲ್ ಉಸೈಮಿ, ಎಮಿರೇಟ್ಸ್ ಫಿಸಿಯೋಥೆರಪಿ ಅಸೋಸಿಯೇಶನ್‌ ನ ಅಧ್ಯಕ್ಷೆ ನಯಿಮಾ ಸಲೇಹ್, ಓಮನ್ ಫಿಸಿಕಲ್ ಥೆರಪಿ ಅಸೋಸಿಯೇಶನ್‌ನ ಸಹಾಯಕ ಡೀನ್ ಡಾ. ಅಹ್ಮದ್ ಅಲ್ ಖರುಸಿ, ರಶೀದ್ ಆಸ್ಪತ್ರೆಯ ಡಾ. ಯೂಸೆಫ್ ಅಬ್ದುಲ್‌ಖಲೇಖ್ ಧುಹೈರ್ ಹಾಗೂ ರಾಸ್ ಅಲ್ ಖೈಮಾದ ಶೇಖ್ ಖಲೀಫಾ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಹ್ಯುಂಗ್ ಸಿಯೋಕ್ ನಾಮ್ ಪ್ರಶಸ್ತಿ ಪಡೆದವರಲ್ಲಿ ಸೇರಿದ್ದಾರೆ.

ಹುಮೈದ್ ಬಿನ್ ರಶೀದ್ ಫೌಂಡೇಶನ್, ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಅಬುಧಾಬಿ, ಅಲ್ ಖಾಸಿಮಿ ಆಸ್ಪತ್ರೆ, ಅಜ್ಮಾನ್ ವಿಶ್ವವಿದ್ಯಾಲಯ, ಶಾರ್ಜಾ ವಿಶ್ವವಿದ್ಯಾಲಯ, ಕಲಾಸಲಿಂಗಂ ವಿಶ್ವವಿದ್ಯಾಲಯ ಮತ್ತು ತುಂಬೆ ಹೆಲ್ತ್‌ಕೇರ್ ಸೇರಿದಂತೆ ಹಲವು ಸಂಸ್ಥೆಗಳಿಗೂ ಗೌರವ ನೀಡಲಾಯಿತು.

ಹೊಸ ರಿಹ್ಯಾಬಿಲಿಟೇಶನ್ ಕೇಂದ್ರಗಳ ಘೋಷಣೆ

ತುಂಬೆ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ದುಬೈ, ಉಮ್ಮ್ ಅಲ್ ಖುವೈನ್ ಮತ್ತು ಫುಜೈರಾದಲ್ಲಿ ಹೊಸ ರಿಹ್ಯಾಬಿಲಿಟೇಶನ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು.

ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಆಸ್ಪತ್ರೆ (TPTRH)ಯ ಚಿಕಿತ್ಸಾ ಸಾಮರ್ಥ್ಯವನ್ನು ಶೇ. 30ರಷ್ಟು ಹೆಚ್ಚಿಸುವ ಯೋಜನೆಯನ್ನೂ ಪ್ರಕಟಿಸಲಾಯಿತು. ಇದರ ಭಾಗವಾಗಿ ಚಿಕಿತ್ಸಾ ವಿಭಾಗಗಳ ಸಂಖ್ಯೆಯನ್ನು 27ರಿಂದ 39ಕ್ಕೆ ಮತ್ತು ಹಾಸಿಗೆಗಳ ಸಂಖ್ಯೆಯನ್ನು 36ರಿಂದ 48ಕ್ಕೆ ಹೆಚ್ಚಿಸಲಾಗುತ್ತದೆ. ಆರು ಹೊಸ ಹೊರಾಂಗಣ ಚಿಕಿತ್ಸಾ ಪ್ರದೇಶಗಳನ್ನು ರೂಪಿಸಲಾಗುತ್ತದೆ. ಅಲ್ಲದೆ, ಐದು ಮೀಸಲಾದ ಚಿಕಿತ್ಸಾ ವಲಯಗಳು ಮತ್ತು ಏಳು ವಿಶೇಷ ಚಿಕಿತ್ಸಾ ವಿಭಾಗಗಳನ್ನು ವಿಸ್ತರಿಸಲಾಗುತ್ತದೆ.

ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಚಿಕಿತ್ಸಾ ವಿಧಾನಗಳನ್ನೂ ಅಳವಡಿಸಲಾಗುತ್ತಿದೆ. GPARM/MOTUS ಗೈಟ್ ಟ್ರೈನರ್ ಮೂಲಕ ರೋಗಿಗಳ ನಡಿಗೆಯ ಸಾಮರ್ಥ್ಯವನ್ನು ಸುಧಾರಿಸುವ ತರಬೇತಿ ನೀಡಲಾಗುತ್ತದೆ. MLS ರೊಬೊಟಿಕ್ ಲೇಸರ್ ಥೆರಪಿ, ರೊಬೊಟಿಕ್ ಮೊಕ್ಸಿಬಷನ್, 3D ನಾಸೊಮೆಟ್ರಿ ಹಾಗೂ ಮಕ್ಕಳ ನಡಿಗೆ ತರಬೇತಿಯಲ್ಲಿ AR/VR ತಂತ್ರಜ್ಞಾನವನ್ನು ಬಳಸುವ ಯೋಜನೆಗಳೂ ಇದರಲ್ಲಿ ಸೇರಿವೆ. ಕಾಲುಗಳ ಊತ ಕಡಿಮೆ ಮಾಡುವ ಚಿಕಿತ್ಸಾ ವಿಧಾನಗಳೂ ಸೇರಿದಂತೆ ವಿವಿಧ ರಿಹ್ಯಾಬಿಲಿಟೇಶನ್ ಸೇವೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಅಂತರರಾಷ್ಟ್ರೀಯ ಸಮ್ಮೇಳನ

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕಾಲೇಜ್ ಆಫ್ ಹೆಲ್ತ್ ಸೈನ್ಸಸ್ ಮತ್ತು ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಆಸ್ಪತ್ರೆ ಜಂಟಿಯಾಗಿ ಸಮ್ಮೇಳನ ಆಯೋಜಿಸಿದ್ದವು. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಸಮ್ಮೇಳನಕ್ಕೆ ಎಂಟು ಗಂಟೆಗಳ CME ಮಾನ್ಯತೆ ನೀಡಲಾಗಿತ್ತು.

ಯುಎಇ, ಗಲ್ಫ್ ಸಹಕಾರ ಮಂಡಳಿ (GCC) ವ್ಯಾಪ್ತಿಯ ದೇಶಗಳು ಹಾಗೂ ಇತರ ಪ್ರದೇಶಗಳ ಫಿಸಿಯೋಥೆರಪಿಸ್ಟ್‌ ಗಳು, ಮೂಳೆ ಚಿಕಿತ್ಸಾ ತಜ್ಞರು, ನರವಿಜ್ಞಾನ ತಜ್ಞರು, ಆಕ್ಯುಪೇಷನಲ್ ಥೆರಪಿಸ್ಟ್‌ಗಳು, ವಾಕ್ ಮತ್ತು ಭಾಷಾ ಚಿಕಿತ್ಸಾ ತಜ್ಞರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ತುಂಬೆ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಜ್ಮಾನ್‌ ನಶೇಖ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುಐಮಿ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿ ಸಿದ್ದರು. ತುಂಬೆ ಗ್ರೂಪ್‌ ನ ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ ಉಪಸ್ಥಿತರಿದ್ದರು.

ಸಮ್ಮೇಳನಕ್ಕೆ ಎಕ್ಸೋ ಬಯೋನಿಕ್ಸ್, ಹಪೋಟೆಕ್ ಮೆಡಿಕಲ್, ಎಂ.ಎ.ಎಸ್. ಮೆಡಿಕಲ್ ಸರ್ಜಿಕಲ್ ಆರ್ಟಿಕಲ್ಸ್ ಆ್ಯಂಡ್ ರಿಕ್ವಿಸೈಟ್ಸ್ ಟ್ರೇಡಿಂಗ್, ಬಾಯರ್‌ ಫೈಂಡ್ ಮಿಡಲ್ ಈಸ್ಟ್ ಆ್ಯಂಡ್ ಆಫ್ರಿಕಾ, ಮೊಡಾವಿನಾ ಮೆಡಿಕಲ್, ಫೂರಿಯರ್ ಇಂಟೆಲಿಜೆನ್ಸ್, ಆಲ್ಫಾ ಮೆಡಿಕಲ್ ಆ್ಯಂಡ್ ಡೆಂಟಲ್ ಸರ್ವಿಸಸ್ ಸೇರಿದಂತೆ ಹಲವು ಸಂಸ್ಥೆಗಳು ಪ್ರಾಯೋಜಕತ್ವ ನೀಡಿದ್ದವು.








Tags

UT Ifthikar FareedreceiveStar of the Year AwardGMU in UAE
share
ವಾರ್ತಾಭಾರತಿ
ವಾರ್ತಾಭಾರತಿ
Next Story
X