ಸೌದಿ ಅರೇಬಿಯಾ ವಿರುದ್ಧ ಕಡಲ ದಿಗ್ಬಂಧನ: ಹೌದಿ ಘೋಷಣೆ

Photo Credit: arabnews
ಸನಾ, ಜು.20: ಕಳೆದ ವಾರ ಪರಸ್ಪರ ಗುಂಡಿನ ಚಕಮಕಿ ನಡೆಸಿದ ಬೆನ್ನಲ್ಲೇ, ಯೆಮನ್ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ತಮ್ಮ ಶತ್ರು ದೇಶವಾದ ಸೌದಿ ಅರೇಬಿಯಾದ ವಿರುದ್ಧ ಕಡಲ ದಿಗ್ಬಂಧನವನ್ನು ಸೋಮವಾರ ಘೋಷಿಸಿದ್ದಾರೆ.
`ಕಣ್ಣಿಗೆ ಕಣ್ಣು' ಎಂಬ ಸಿದ್ಧಾಂತದ ಆಧಾರದ ಮೇಲೆ, ಅಪರಾಧಿ ಸೌದಿ ಶತ್ರುವಿನ ವಿರುದ್ಧ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾವು ಕಡಲ ದಿಗ್ಬಂಧನವನ್ನು ಘೋಷಿಸುತ್ತಿದ್ದೇವೆ' ಎಂದು ಹೌದಿ ಮಿಲಿಟರಿ ವಕ್ತಾರ ಯಾಹ್ಯಾ ಸಾರೀ ಹೇಳಿದ್ದಾರೆ.
Next Story




