Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹಲಸಿನ ವಿವಿಧ ಖಾದ್ಯ ಉಣಬಡಿಸುವ...

ಹಲಸಿನ ವಿವಿಧ ಖಾದ್ಯ ಉಣಬಡಿಸುವ ʼಹಳ್ಳಿಸಿರಿʼ

ರಂಗರಾಜು, ತುಮಕೂರುರಂಗರಾಜು, ತುಮಕೂರು5 Feb 2024 1:05 PM IST
share
  • ಹಲಸಿನ ವಿವಿಧ ಖಾದ್ಯ ಉಣಬಡಿಸುವ ʼಹಳ್ಳಿಸಿರಿʼ
  • ಹಲಸಿನ ವಿವಿಧ ಖಾದ್ಯ ಉಣಬಡಿಸುವ ʼಹಳ್ಳಿಸಿರಿʼ
  • ಹಲಸಿನ ವಿವಿಧ ಖಾದ್ಯ ಉಣಬಡಿಸುವ ʼಹಳ್ಳಿಸಿರಿʼ

ತುಮಕೂರು: ತುಮಕೂರು ಜಿಲ್ಲೆಯ ಸಿದ್ದುಹಲಸು ದೇಶಾದ್ಯಂತ ಹೆಸರುವಾಸಿಯಾಗಿತ್ತು. ಇದೀಗ ಹಲಸಿನ ಬಿರಿಯಾನಿ, ಕಬಾಬ್ ಸಹಿತ ಹಲವಾರು ಖಾದ್ಯಗಳ ಮೂಲಕ ಮತ್ತೊಮ್ಮೆ ತುಮಕೂರು ಜಿಲ್ಲೆಯ ಹೆಸರು ಮುನ್ನೆಲೆಗೆ ಬಂದಿದೆ.

ಹಲಸು ಕಾಯಿ ಆಗಿದ್ದಾಗ ಕೆತ್ತಳಸಿನಕಾಯಿ ಸಾಂಬಾರ್, ಪಲ್ಯ, ಜೊತೆಗೆ ಹಣ್ಣಾದ ನಂತರ ಸಂಡಿಗೆ, ಬೀಜವನ್ನು ಬೇಯಿಸಿ ತಿನ್ನುವುದು ಪ್ರಚಲಿತ. ಆದರೆ, ತೋವಿನಕೆರೆಯ ‘ಹಳ್ಳಿ ಸಿರಿ’ ಸಂಘದ ಸದಸ್ಯರು ವಿವಿಧ ರೀತಿಯ ಹಲಸನ್ನು ಬಳಸಿ, ರುಚಿಕರ ಮತ್ತು ಆರೋಗ್ಯಕರ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಹಲಸು ಮತ್ತು ಸಿರಿಧಾನ್ಯಗಳ ವಿವಿಧ ಪದಾರ್ಥಗಳನ್ನು ತಯಾರಿಸಿ, ಮಾರಾಟ ಮಾಡಿ, ಹಲಸು ಬಾಯಿಗಷ್ಟೇ ಅಲ್ಲ, ಬದುಕಿಗೂ ಸಿಹಿ ತರಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

‘ಹಳ್ಳಿಸಿರಿ’ ಹತ್ತು ಮಂದಿ ಮಹಿಳೆಯರು ಸೇರಿ ನಿರ್ಮಿಸಿಕೊಂಡಿರುವ ಒಂದು ಸಂಘ. ಇದರ ಅಧ್ಯಕ್ಷೆ ಮಂಜಮ್ಮ, ಉಪಾಧ್ಯಕ್ಷೆ ಸುನೀತಾ. ತೋವಿನಕೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಹಲಸಿನ ಮೇಳದ ವೇಳೆ ‘ಹಳ್ಳಿಸಿರಿ’ ಸಂಸ್ಥೆಯಿಂದ ತಯಾರಿಸಲ್ಪಟ್ಟ ಖಾದ್ಯ ಪದಾರ್ಥಗಳ ಅಂಗಡಿ ತೆರೆದು ಪ್ರದರ್ಶನದ ವೇಳೆ, ತೋವಿನಕೆರೆ ಸುತ್ತಮುತ್ತ ಹೇರಳವಾಗಿ ದೊರೆಯುವ ಹಲಸಿನ ಹಣ್ಣು, ಕಾಯಿ, ಬೀಜದಿಂದ ರುಚಿಕರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿ ಹಲಸು ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಲಸಿನ ಚಿಪ್ಸ್, ಹಲಸಿನ ಮಂಜೂರಿ, ಹಲಸಿನ ಬಿರಿಯಾನಿ, ಕಬಾಬ್, ಹಲಸಿನ ಹಪ್ಪಳ, ಸಂಡಿಗೆ, ಹಲಸಿನ ಹಣ್ಣಿನಿಂದ ತಯಾರಿಸಿದ ಹಲ್ವಾ, ಪಾಯಸ, ಮಿಲ್ಕ್‌ಶೇಕ್, ಸೂಪ್, ಹಲಸಿನ ಬೀಜದ ಒಬ್ಬಟ್ಟು, ಹಲಸಿನ ಶಾವಿಗೆ, ಹಲಸಿನ ಕಾಯಿ ವಡೆ, ಹಲಸಿನ ಕಾಯಿ ಬೊಂಡ ಸೇರಿದಂತೆ ಹಲವಾರು ಖಾದ್ಯಗಳಿವೆ. ಅಲ್ಲದೆ ಸಿರಿಧಾನ್ಯ ಬಳಸಿಯೂ ಹಲವಾರು ಖಾದ್ಯಗಳನ್ನು ತಯಾರಿಸುತ್ತಿದ್ದು, ಸಿರಿಧಾನ್ಯ, ತರಕಾರಿ ಸೇರಿದ ಮಸಾಲೆ ರೊಟ್ಟಿ, ರಾಗಿ ಕಾರಶ್ಯಾವಿಗೆ ಹಾಗೂ ರಾಗಿ ಲಡ್ಡುಗೆ ಎಲ್ಲಿಲ್ಲದ ಬೇಡಿಕೆ ಇದೆ. ಪ್ರಸ್ತುತ ಪ್ರಧಾನ ಮಂತ್ರಿಗಳ ಪಿ.ಎಂ.ಶ್ರೀ(ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಇರುವ ಯೋಜನೆ)ಯೋಜನೆ ಅಡಿಯಲ್ಲಿ ಸುಮಾರು ತೋವಿನಕೆರೆ ಹಾಗೂ ಬುಡುವನಹಳ್ಳಿಯ ಸರಕಾರಿ ಶಾಲೆಗಳ ಸುಮಾರು 600 ಮಕ್ಕಳಿಗೆ ವಾರಕ್ಕೆ ಎರಡು ದಿನ ಸಿರಿಧಾನ್ಯ ಮತ್ತು ತರಕಾರಿ ಮಿಶ್ರಿತ ಮಸಾಲೆ ರೊಟ್ಟಿ ತಯಾರಿಸಿ ಸರಬರಾಜು ಮಾಡುತ್ತಿದ್ದು, ಒಂದು ರೊಟ್ಟಿಯನ್ನು 10 ರೂ.ಗೆ ನೀಡುತ್ತಿದ್ದಾರೆ. ಇದಲ್ಲದೆ ಗ್ರಾಮಪಂಚಾಯತ್ ಸಭೆಗಳು, ತಾಪಂ ಸಭೆಗಳು, ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ಸಿರಿಧಾನ್ಯದ ಊಟ ತಯಾರಿಸಿ, ತಮ್ಮ ಬಹುದಿನದ ಬಯಕೆಯಾದ ಉದ್ಯಮದ ಟಚ್ ನೀಡುವತ್ತ ಹೆಜ್ಜೆ ಇಟ್ಟಿದ್ದಾರೆ.

ಹಳ್ಳಿಸಿರಿ ಸಂಘದ ಸದಸ್ಯೆಯರು ಕರ್ನಾಟಕ ಮಾತ್ರವಲ್ಲದೆ, ಕೇರಳ ಮತ್ತಿತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ನಡೆಯುವ ಹಲಸಿನ ಮೇಳಗಳಲ್ಲಿ ಪಾಲ್ಗೊಂಡು ಹಲಸಿನ ವಿವಿಧ ಖಾದ್ಯಗಳ ರುಚಿಯನ್ನು ಆಹಾರ ಪ್ರಿಯರಿಗೆ ಉಣಬಡಿಸಿದ್ದಾರೆ. ಅವರು ತಾವು ತಯಾರಿಸುವ ಸಿರಿಧಾನ್ಯ ಆಹಾರಗಳಿಗೆ ಬಳಸುವ ಬಹುತೇಕ ವಸ್ತುಗಳು ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರಿಂದ ಲಭ್ಯವಿರುವ ಸಿರಿ ಆಹಾರ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದು, ಹಲಸಿನ ಖಾದ್ಯಗಳಿಗೆ ಮಾತ್ರ ಸ್ಥಳೀಯವಾಗಿಯೇ ಸಿಗುವ ಹಲಸಿನ ಕಾಯಿ, ಹಣ್ಣು ಮತ್ತು ಬೀಜಗಳನ್ನು ಬಳಕೆ ಮಾಡುತ್ತಾರೆ. ಹಾಗಾಗಿ ಇವರು ಮಾಡುವ ಅಡುಗೆಗಳು ರುಚಿ ಮತ್ತು ಶುಚಿ ಎರಡರಲ್ಲಿಯೂ ಸೈ ಎನಿಸಿಕೊಂಡಿವೆ. ಸಿರಿಧಾನ್ಯ, ಹಲಸಿನ ಖಾದ್ಯಗಳು ಬೇಕೆನಿಸಿದವರು ಮಂಜಮ್ಮ ಅವರ ದೂ.ಸಂಖ್ಯೆ 9380071965ಗೆ ಕರೆ ಮಾಡಿ ಆರ್ಡರ್ ಮಾಡಬಹುದು.

ಇವರ ಈ ಕಾರ್ಯವೈಖರಿಯನ್ನು ಗಮನಿಸಿದ ತೋವಿನಕೆರೆಯ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ನಲ್ಮ್ ಯೋಜನೆಯಡಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಶೇ.50 ಸಬ್ಸಿಡಿಯಲ್ಲಿ 5 ಲಕ್ಷ ರೂ. ಸಾಲ ಒದಗಿಸಲು ಮುಂದೆ ಬಂದಿದೆ.

share
ರಂಗರಾಜು, ತುಮಕೂರು
ರಂಗರಾಜು, ತುಮಕೂರು
Next Story
X