ಹಾಸನ | ಬೈಕ್‌ಗಳಿಗೆ ಕಾರು ಢಿಕ್ಕಿ: ಇಬ್ಬರ ಮೃತ್ಯು

ಹಾಸನ : ಹಾಸನಾಂಬೆ ದೇವಿ ದರ್ಶನ ಪಡೆದು ವಾಪಸ್ ಹೋಗುವಾಗ ಎರಡು ಬೈಕ್‌ಗಳಿಗೆೆ ಕಾರು ಢಿಕ್ಕಿಯಾಗಿ ಯುವಕ ಮತ್ತು ಯುವತಿ ಬಲಿಯಾಗಿದ್ದಾರೆ. ಓರ್ವ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿ ಕಾವಲು ಫಾರೆಸ್ಟ್ ಬಳಿ ರವಿವಾರ ಸಂಜೆ ಈ ದುರಂತ ನಡೆದಿದೆ. ಹಾಸನಾಂಬೆ ದೇವಿ ದರ್ಶನ ಮುಗಿಸಿ ಸ್ನೇಹಿತನ ಜೊತೆ ಯಲ್ಲಿ ಬೆಂಗಳೂರಿನಿಂದ ಒಂದೇ ಬೈಕ್‌ನಲ್ಲಿ ಬಸವರಾಜು (19), ಅನುಶ್ರೀ (19) ಮತ್ತು ಛಾಯಾ (20) ಎಂಬ ವರು ತೆರಳುತ್ತಿದ್ದರು. ಚನ್ನರಾಯಪಟ್ಟಣ ಕಡೆ ಯಿಂದ ಬರುತ್ತಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. ಹೌಸಿಂಗ್ ಬೋರ್ಡ್ ಬಳಿ ವೇಗವಾಗಿ ಬಂದು ಮೊದಲು ಇನ್ನೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ನಂತರ ಮೂವರಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅರಣ್ಯಕ್ಕೆ ಕಾರು ನುಗ್ಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬಸವರಾಜು ಹಾಗೂ ಅನುಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಛಾಯಾ ಎಂಬವರ ಸ್ಥಿತಿ ಚಿಂತಾಜನಕವಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಬೈಕ್ ಸವಾರ ಮುಹಮ್ಮದ್ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.





