ಹಾಸನ | ಕೆರೆಗೆ ಬಿದ್ದು ಸಹೋದರರ ಮೃತ್ಯು

ಸಾಂದರ್ಭಿಕ ಚಿತ್ರ
ಹಾಸನ : ದನ ಮೇಯಿಸಲು ತೆರಳಿದ ಸಹೋದರರಿಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ದುದ್ದ ಹೋಬಳಿಯ ವಳಗೇರಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಗ್ರಾಮದ ಅರ್ಚಕ ರಾಮಚಂದ್ರ ಮತ್ತು ರತ್ನ ದಂಪತಿಯ ಪುತ್ರರಾದ ದರ್ಶನ್ (17) ಮತ್ತು ಲಕ್ಷ್ಮೀಕಾಂತ (5) ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ದನ ಮೇಯಿಸಲು ತೆರಳಿದ ಸಹೋದರರು ಮನೆಗೆ ವಾಪಾಸಾಗದ ಹಿನ್ನೆಲೆ ಪೋಷಕರು ರಾತ್ರಿ ದುದ್ದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ಗುರುವಾರ ಬೆಳಗ್ಗೆ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಗ್ರಾಮದಲ್ಲಿನ ಕೆರೆಯಲ್ಲಿ ಶೋಧ ಕಾರ್ಯ ಕೈಗೊಂಡ ವೇಳೆ ಸಹೋದರರ ಮೃತದೇಹಗಳು ಪತ್ತೆಯಾಗಿವೆ.ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮುಂದಿನ ಕ್ರಮವಹಿಸಿದ್ದಾರೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





