ಯುಪಿಎಸ್‌ಸಿ ಫಲಿತಾಂಶ | ಸಕಲೇಶಪುರದ ಧನ್ಯಾಗೆ 982ನೇ ರ‍್ಯಾಂಕ್

ಸಕಲೇಶಪುರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನ ನಗರದ ನಿವಾಸಿ ಕೆ.ಎಸ್.ಧನ್ಯಾ 982ನೇ ಬ್ಯಾಂಕ್ ಪಡೆದಿದ್ದಾರೆ.
ಧನ್ಯಾ ಸಂಬಾರು ಮಂಡಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಟಿ.ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ಹಿರಿಯ ಸಿವಿಲ್ ಕೋರ್ಟ್‌ನಲ್ಲಿ ಹಿರಿಯ ಶಿರಸ್ತೇದಾರರಾಗಿರುವ ಪಿ.ವಿಜಯಕುಮಾರಿ ದಂಪತಿಯ ಪುತ್ರಿಯಾಗಿದ್ದಾರೆ. ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಮೊದಲ ಎರಡು ಬಾರಿ ಪ್ರಿಲಿಮ್ಸ್ ಆಗಿರಲಿಲ್ಲ. ಮೂರನೇ ಪರೀಕ್ಷೆಯಲ್ಲಿ ಪ್ರಿಲಿಮ್ಸ್, ಮೈನ್ಸ್ ಹಾಗೂ ಸಂದರ್ಶನದಲ್ಲಿ ಉತೀರ್ಣರಾಗಿದ್ದಾರೆ.
ನಿಟ್ಟೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಇ ಆ್ಯಂಡ್ ವೈ ಕಂಪೆನಿಯಲ್ಲಿ ಧನ್ಯಾ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಯುಪಿಎಸ್‌ಸಿ ತಯಾರಿ ನಡೆಸಿದ್ದರು. ಗ್ರಂಥಾಲಯಗಳ ಪುಸ್ತಕಗಳನ್ನು ಅಧ್ಯಯನ ಮಾಡಿಯೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು ಎಂದು ಪೋಷಕರು ಹೇಳಿದ್ದಾರೆ.
Next Story





