ಸಕಲೇಶಪುರ: ಸಹೋದರರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ

ಸುನೀಲ್ ಮಂತೇರಾ
ಸಕಲೇಶಪುರ,ಜು.11: ತಾಲ್ಲೂಕಿನ ಹಾರ್ಲೆಕೂಡಿಗೆ ಬಳಿ ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತನನ್ನು ಜೋಸೆಫ್ ಮಂತೇರಾ (36) ಎಂದು ಗುರುತಿಸಲಾಗಿದೆ. ಆರೋಪಿ ಸುನೀಲ್ ಮಂತೇರಾ (38)ನನ್ನು ಪತ್ತೆ ಹಚ್ಚಿದ್ದಾರೆ.
ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಆರಂಭವಾದ ಜಗಳ ತೀವ್ರಗೊಂಡು, ಸುನೀಲ್ ಚಾಕುವಿನಿಂದ ತಮ್ಮ ಜೋಸೆಫ್ನ ತಲೆಗೆ ಇರಿದು ಕೊಲೆಮಾಡಿದ ಎನ್ನಲಾಗಿದೆ. ಜೋಸೆಫ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಸುನೀಲ್ ಘಟನಾ ಸ್ಥಳದಲ್ಲೇ ಕುಳಿತಿದ್ದ ಎಂದು ತಿಳಿದು ಬಂದಿದೆ.
ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Next Story





