ಹಾಸನ | ಮುಖ್ಯ ರಸ್ತೆ ಬಳಿಯಿದ್ದ ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು!

ಹಾಸನ : ಮುಖ್ಯ ರಸ್ತೆ ಬಳಿಯಿದ್ದ ಎಟಿಎಂ ಯಂತ್ರವನ್ನೇ ಹೊತ್ತೊಯ್ದಿರುವ ಘಟನೆ ಹಾಸನ ಜಿಲ್ಲೆಯ ಹನಮಂತಪುರ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಗೊರೂರು ಮುಖ್ಯ ರಸ್ತೆ ಮೀಪದಲ್ಲೇ ಇರುವ ಇಂಡಿಯಾ ಒನ್ ಎಟಿಎಂ ಯಂತ್ರಕ್ಕೆ ಕನ್ನ ಹಾಕಿರುವ ಕಳ್ಳರು, ನಿನ್ನೆ ಮಧ್ಯರಾತ್ರಿ ಎಟಿಎಂ ಯಂತ್ರವನ್ನೇ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕಳ್ಳತನಕ್ಕಿಳಿಯುವ ಮುನ್ನ ದುಷ್ಕರ್ಮಿಗಳು, ಎಟಿಎಂ ಪಕ್ಕದಲ್ಲಿರುವ ಮನೆಗಳ ಚಿಲಕಕ್ಕೆ ಕಡ್ಡಿ ಸಿಕ್ಕಿಸಿದ್ದು, ನಂತರ ಎಟಿಎಂ ಬೂತ್‌ಗೆ ನುಗ್ಗಿದ್ದಾರೆ. ನಂತರ ಹಣದ ಸಮೇತ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಾರೆ.
ವಿಷಯ ತಿಳಿದು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ಸೇರಿ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





