ಹಾಸನ | ಡಿವೈಡರ್‌ಗೆ ಬೈಕ್ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ್ಯು

ಹಾಸನ : ಡಿವೈಡರ್‌ಗೆ ಬೈಕ್ ಢಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮೊಸಳೆಗಡಿ ಬಳಿ ಸಂಭವಿಸಿದೆ.
ಹುಸೈಫ್ (23), ಸಮೀರ್ (21) ಮೃತ ಯುವಕರು. ಇನ್ನೋರ್ವ ಮುಹಮ್ಮದ್ ಸೂಫಿಯಾನ್ (15) ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಹುಸೈಫ್ ಹಾಸನ ನಗರದ ಪೆನ್‌ಷನ್ ಮೊಹಲ್ಲಾದ ನಿವಾಸಿ. ಸಮೀರ್ ಹೊಳೆನರಸೀಪುರ ಪಟ್ಟಣದ ಗಾಂಧಿನಗರದ ನಿವಾಸಿ. ತೀವ್ರವಾಗಿ ಗಾಯಗೊಂಡಿರುವ ಅಪ್ರಾಪ್ತ ಮುಹಮ್ಮದ್ ಸೂಫಿಯಾನ್ ಕೂಡ ಪೆನ್‌ಷನ್ ಮೊಹಲ್ಲಾ ನಿವಾಸಿ.
ಮೂವರು ಒಂದೇ ಬೈಕ್‌ನಲ್ಲಿ ಹೊಳೆನರಸೀಪುರದಿಂದ ಹಾಸನದ ಕಡೆಗೆ ಬರುತ್ತಿದ್ದ ವೇಳೆ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
Next Story