Hassan | ಚಲಿಸುತ್ತಿದ್ದ ಬಸ್ಗೆ ಹತ್ತಲು ಹೋಗಿ, ಬಿದ್ದು ವ್ಯಕ್ತಿ ಮೃತ್ಯು

ಆಲೂರು : ಪಟ್ಟಣದ ನಿಲ್ದಾಣದಲ್ಲಿ ಬೆಂಗಳೂರಿನಿಂದ ಸಕಲೇಶಪುರಕ್ಕೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸು ಚಲಿಸುತ್ತಿದ್ದ ವೇಳೆ ಹತ್ತಲು ಹೋಗಿ ಆಯತಪ್ಪಿ ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಮೃತ ಪಟ್ಟ ವ್ಯಕ್ತಿಯು ತಾಲೂಕಿನ ಪಾಳ್ಯ ಹೋಬಳಿ ಹೊನ್ನವಳ್ಳಿ ಗ್ರಾಮದ ಪುಟ್ಟರಾಜು (40) ಎಂದು ಗುರುತಿಸಲಾಗಿದೆ. ವ್ಯಕ್ತಿಯು ಆಲೂರು ನಿಲ್ದಾಣದಿಂದ ಪಾಳ್ಯ ಹೋಬಳಿಯ ಹೊನ್ನವಳ್ಳಿ ಗ್ರಾಮಕ್ಕೆ ಪ್ರಯಾಣಿಸಲು ಬಸ್ಸನ್ನು ಹತ್ತುವ ವೇಳೆ ಘಟನೆ ನಡೆದಿದೆ. ನಿಲ್ದಾಣದಿಂದ ಬಸ್ಸು ಪ್ರಯಾಣಿಕರನ್ನು ಹತ್ತಿಸಿಕೊಂಡು ಸ್ವಲ್ಪ ದೂರ ಮುಂದೆ ಸಾಗುತ್ತಿದ್ದ ವೇಳೆ ವ್ಯಕ್ತಿಯು ಚಲಿಸುತ್ತಿದ್ದ ಬಸ್ಸನ್ನು ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಕೂಡಲೇ ಆಲೂರು ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




