ಹಾಸನ | ಹೃದಯಾಘಾತದಿಂದ ಯುವಕ ಮೃತ್ಯು

ಚೇತನ್ (35)
ಹಾಸನ : ನಗರದ ಸತ್ಯಮಂಗಲ ಬಡಾವಣೆಯಲ್ಲಿ ಹೃದಯಾಘಾತದಿಂದ 35 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಚೇತನ್ (35) ಎಂದು ಗುರುತಿಸಲಾಗಿದೆ. ಮೂಲತಃ ಮಂಡ್ಯದ ಕಿಕ್ಕೇರಿ ಮೂಲದ ಚೇತನ್, ಹಾಸನ ನಗರದ ಹಳೇ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದರು.
ಶನಿವಾರ ಮಧ್ಯಾಹ್ನದ ವೇಳೆಗೆ ಚೇತನ್ ಊಟಕ್ಕೆ ಕುಳಿತುಕೊಳ್ಳುವಾಗ ದಿಢೀರ್ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. "ಎದೆ ನೋಯುತ್ತಿದೆ" ಎಂದು ಪತ್ನಿಗೆ ತಿಳಿಸಿ ತಕ್ಷಣವೇ ಎದ್ದು ನಿಂತು ಕುಸಿದು ಬಿದ್ದಾರೆ. ಪತ್ನಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಚೇತನ್ ಮೃತಪಟ್ಟಿದ್ದರು.
Next Story





