ಬೇಲೂರು | ಬೈಕ್ ತೆಗೆಯಲು ಆಟೊವನ್ನು ನ್ಯೂಟ್ರಲ್ ಮಾಡಿದ ಯುವಕ : ಆರೋಪ
ಹಿಮ್ಮುಖವಾಗಿ ಚಲಿಸಿದ ಆಟೊ : ಕೂದಲೆಳೆ ಅಂತರದಲ್ಲಿ ಪಾರಾದ ಮಕ್ಕಳು

ಬೇಲೂರು : ಬೈಕ್ ತೆಗೆಯಲು ಅಡ್ಡಿಯಾಗಿದ್ದ ಆಟೊವನ್ನು ಕಿಡಿಗೇಡಿ ಯುವಕನೋರ್ವ ನ್ಯೂಟ್ರಲ್ ಮಾಡಿದ್ದರಿಂದ ಆಟೊ ಹಿಮ್ಮುಖವಾಗಿ ಚಲಿಸಿ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ಬೇಲೂರು ಪಟ್ಟಣದ ನೆಹರೂ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಐರವಳ್ಳಿ ಗ್ರಾಮದ ಯುವಕನೋರ್ವ ತನ್ನ ಬೈಕ್ ಓಡಿಸಲು ಅಡ್ಡಿಯಾಗಿ ನಿಂತಿದ್ದ ಆಟೊವನ್ನು ನ್ಯೂಟ್ರಲ್ ಮಾಡಿ ಅಲ್ಲಿಂದ ಹೋಗಿದ್ದಾನೆ. ಈ ವೇಳೆ ಆಟೊ ಹಿಮ್ಮುಖವಾಗಿ ಚಲಿಸಲು ಆರಂಭಿಸಿದ್ದು, ಸ್ಥಳದಲ್ಲಿದ್ದ ಆಟೊ ಚಾಲಕ ಮತ್ತು ಇನ್ನಿಬ್ಬರು ತಕ್ಷಣ ಓಡಿ ಹೋಗಿ ಅನಾಹುತ ತಪ್ಪಿಸಿದ್ದರಿಂದ ಕೂದಲೆಳೆ ಅಂತರದಲ್ಲಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Next Story