ಸಕಲೇಶಪುರ | ಭಾರೀ ಮಳೆಯಿಂದ ಹಳಿ ಮೇಲೆ ಮಣ್ಣು ಕುಸಿತ; ರೈಲ್ವೇ ಸಂಚಾರ ತಾತ್ಕಾಲಿಕ ಸ್ಥಗಿತ

ಸಕಲೇಶಪುರ : ತಾಲ್ಲೂಕಿನ ಎಡಕುಮೇರಿ ಬಳಿ ಭಾರೀ ಮಳೆಯಿಂದ ರೈಲ್ವೇ ಹಳಿ ಮೇಲೆ ಮಣ್ಣು ಹಾಗೂ ಗಿಡಗಳು ಕುಸಿದ ಪರಿಣಾಮ, ಬೆಂಗಳೂರು–ಮಂಗಳೂರು ರೈಲ್ವೇ ಮಾರ್ಗದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಮಂಗಳೂರು–ಬೆಂಗಳೂರು ರೈಲ್ವೆ ಮಾರ್ಗದ ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲಾ ಪ್ರಯಾಣಿಕ ಹಾಗೂ ಸರಕು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸ್ಥಳಕ್ಕೆ ರೈಲ್ವೇ ಇಲಾಖೆಯ ಸಿಬ್ಬಂದಿ ದೌಡಾಯಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾರ್ಯಾರಂಭ ಮಾಡಿದ್ದಾರೆ.
Next Story





