Sakleshpura | ವಿದ್ಯುತ್ ಲೈನ್ ದುರಸ್ತಿ ಮುಗಿಸಿ ವಾಪಸಾಗುತ್ತಿದ್ದ ಚೆಸ್ಕಾಂ ಸಿಬ್ಬಂದಿ ವಾಹನದ ಮೇಲೆ ಒಂಟಿ ಸಲಗ ದಾಳಿ; ಅಪಾಯದಿಂದ ಪಾರು

ಸಕಲೇಶಪುರ : ವಿದ್ಯುತ್ ಲೈನ್ ದುರಸ್ತಿ ಕಾರ್ಯ ಮುಗಿಸಿ ವಾಪಸಾಗುತ್ತಿದ್ದ ಚೆಸ್ಕಾಂ ಸಿಬ್ಬಂದಿಯ ವಾಹನದ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಘಟನೆ ತಾಲೂಕಿನ ಯಸಳೂರು ಶಾಖೆ ವ್ಯಾಪ್ತಿಯ ಲಕ್ಕುಂದ ಗ್ರಾಮದ ಸಮೀಪ ಬುಧವಾರ ತಡರಾತ್ರಿ ಸಂಭವಿಸಿದೆ.
ಯಸಳೂರು ಶಾಖೆಯ ಶಾಖಾಧಿಕಾರಿ ಮಂಜುನಾಥ್ ಹಾಗೂ ಪವರ್‌ಮ್ಯಾನ್ ರಾತ್ರಿ ಸುಮಾರು 1.30ರ ವೇಳೆಗೆ ವಿದ್ಯುತ್ ಲೈನ್ ಸರಿಪಡಿಸಿ ವಾಹನದಲ್ಲಿ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ಒಂಟಿ ಸಲಗ ರಸ್ತೆಗಿಳಿದು ವಾಹನದತ್ತ ದೌಡಾಯಿಸಿದೆ. ಕ್ಷಣಮಾತ್ರದಲ್ಲಿ ಎಚ್ಚೆತ್ತುಕೊಂಡ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ವಾಹನವನ್ನು ನಿಯಂತ್ರಿಸಿ ಸ್ಥಳದಿಂದ ಸುರಕ್ಷಿತವಾಗಿ ತೆರಳಿದ ಪರಿಣಾಮ ಅನಾಹುತ ತಪ್ಪಿದೆ.
ಘಟನೆಯ ದೃಶ್ಯ ವಾಹನದಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಕಾಡಾನೆಗಳ ಹಾವಳಿಯಿಂದ ಎದುರಾಗುತ್ತಿರುವ ಜೀವಭಯದೊಂದಿಗೆ ಕರ್ತವ್ಯ ನಿರ್ವಹಿಸುವಂತಾಗಿದೆ.
Next Story




