ಶ್ರವಣಬೆಳಗೊಳ: ಹಿರಿಯ ಪತ್ರಕರ್ತ ಅಶೋಕ್ ಕುಮಾರ್ ನಿಧನ

ಹಾಸನ: ಹಿರಿಯ ಪತ್ರಕರ್ತ, ಗೊಮ್ಮಟವಾಣಿ ಸಂಪಾದಕ ಶ್ರವಣಬೆಳಗೊಳದ ಎಸ್.ಎನ್.ಅಶೋಕ್‌ಕುಮಾರ್ (80) ಅವರು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಮೃತರು ಪತ್ನಿ, ಡಾ.ನಿತಿನ್ ಮತ್ತು ಸಚ್ಚಿನ್ ಸೇರಿದಂತೆ ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಆಸ್ಪತ್ರೆಯಲ್ಲಿ ಇಡಲಾಗಿದೆ. ಮಧ್ಯಾಹ್ನ ಶ್ರವಣಬೆಳಗೊಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಕೆಯುಡಬ್ಲ್ಯೂಜೆ ಸಂತಾಪ:
ಹಿರಿಯ ಪತ್ರಕರ್ತ ಮತ್ತು ಸಂಘಟಕ ಎಸ್.ಎನ್.ಅಶೋಕ್‌ಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂತಾಪ ವ್ಯಕ್ತಪಡಿಸಿದೆ.
ಅಶೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಶ್ರವಣಬೆಳಗೊಳದಲ್ಲಿ ಜಿಲ್ಲಾ ಸಮ್ಮೇಳನ, ರಾಜ್ಯ ಪತ್ರಕರ್ತರ ಸಮ್ಮೇಳನ ಮತ್ತು ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ ನಡೆಸಿದ್ದು ಇನ್ನೂ ಸವಿನೆನಪಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದಾರೆ.
Next Story





