ಶರಣ್ ಪಂಪವೆಲ್, ಪುನೀತ್ ಕೆರೆಹಳ್ಳಿಗೆ ಹಾಸನ ಜಿಲ್ಲಾ ಪ್ರವೇಶಕ್ಕೆ ನಿಷೇಧ: ಜಿಲ್ಲಾಧಿಕಾರಿ ಆದೇಶ

ಶರಣ್ ಪಂಪ್ ವೆಲ್
ಹಾಸನ: ಸಕಲೇಶಪುರ ಪಟ್ಟಣದಲ್ಲಿ ಸಂಘ ಪರಿವಾರ ಇಂದು(ಆ.14) ಸಂಜೆ ಆಯೋಜಿಸಿರುವ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಹಿಂದುತ್ವ ಸಂಘಟನೆಯ ಮುಖಂಡರಾದ ಶರಣ್ ಪಂಪವೆಲ್ ಹಾಗೂ ಪುನೀತ್ ಕೆರೆಹಳ್ಳಿಗೆ ಹಾಸನ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಆ.15ರ ಬೆಳಗ್ಗೆ 8ರವರೆಗೆ ಈ ಇಬ್ಬರಿಗೆ ಹಾಸನ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ವತಿಯಿಂದ ಇಂದು ಸಂಜೆ ಸಕಲೇಶಪುರ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ.
ಶರಣ್ ಪಂಪವೆಲ್ ಹಾಗೂ ಪುನೀತ್ ಕೆರೆಹಳ್ಳಿ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆಯ ಹಿನ್ನಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇವರಿಬ್ಬರ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಹಮ್ಮದ್ ಸುಜೀತಾ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದರು.
Next Story





