ಕೇಂದ್ರ ಸಚಿವ ವಿ.ಸೋಮಣ್ಣ ಕಾಲಿಗೆ ಬಿದ್ದ ಹಾಸನ ಜಿಲ್ಲಾಧಿಕಾರಿ

ಹಾಸನ : ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿದ ವೇಳೆ ಹಾಸನದ ನೂತನ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅವರು, ಸೋಮಣ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಸೋಮಣ್ಣ ಅವರು ಶ್ರೀಗಳ ದರ್ಶನಕ್ಕಿಂತ ಮೊದಲು ಡಿಸಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಇದು ಸರಕಾರದ ಶಿಷ್ಟಾಚಾರದ ಕುರಿತಂತೆ ಚರ್ಚೆಗೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಹುದ್ದೆ ಗೌರವಪೂರ್ಣವಾದದ್ದು ಮತ್ತು ಸಾರ್ವಜನಿಕ ಸೇವೆಯ ಮಾನದಂಡಗಳನ್ನು ಪಾಲಿಸುವುದು ಅತ್ಯಗತ್ಯ. ಕೇಂದ್ರ ಸಚಿವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವುದು ಖಾಸಗಿ ಕಾರ್ಯಕ್ರಮವಲ್ಲ, ಸರಕಾರದ ಅಧಿಕೃತ ಕಾರ್ಯಕ್ರಮವಾಗಿರುವುದರಿಂದ, ಇದು ಶಿಷ್ಟಾಚಾರಕ್ಕೆ ವಿರೋಧವೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
Next Story





