ಹಾವೇರಿ: ಪ್ರಥಮ ದರ್ಜೆ ಗುತ್ತಿಗೆದಾರನ ಭೀಕರ ಹತ್ಯೆ

ಶಿವಾನಂದ ಕುನ್ನೂರು
ಹಾವೇರಿ: ಪ್ರಥಮ ದರ್ಜೆಯ ಗುತ್ತಿಗೆದಾರರೊಬ್ಬರನ್ನು ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಭೀಕರವಾಗಿ ಹತ್ಯೆಗೈಯಲಾಗಿದೆ. ಪ್ರಥಮ ದರ್ಜೆಯ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಕೊಲೆಯಾದವರು.
ಶಿವಾನಂದ ಅವರು ಹೊಟೇಲ್ನಲ್ಲಿ ಊಟ ಮಾಡಿ ನಂತರ ಕಾರಿನಲ್ಲಿ ತೆರಳುವ ವೇಳೆ 6 ರಿಂದ 7 ಜನರ ತಂಡ ಕಬ್ಬಿಣದ ರಾಡ್ ಮತ್ತು ತಲಾವಾರ್ ನಿಂದು ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ ಹಾವೇರಿ ಎಸ್ಪಿ ಅಂಶುಕುಮಾರ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ತಿ ವ್ಯಾಜ್ಯದಿಂದ ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ.
ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Next Story