Haveri | ಟ್ರಾಕ್ಟರ್-ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಹಾವೇರಿ : ಟ್ರಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ರಾಣಿಬೆನ್ನೂರು-ಹಂಸಭಾವಿ ಮಾರ್ಗ ಮದ್ಯದಲ್ಲಿ ಇಂದು ನಡೆದಿದೆ.
ಮೃತಪಟ್ಟ ಬೈಕ್ ಸವಾರ ವೀರಾಪಾಕ್ಷಪ್ಪ ಕರೇಗೌಡ್ರು (60) ಹಿರೇಕೆರೂರ ತಾಲೂಕಿನ ಸುತ್ತಕೋಟೆ ಗ್ರಾಮದವರು.
ರಾಣಿಬೆನ್ನೂರ ಕಡೆಗೆ ಹೊರಟಿದ್ದ ಕಬ್ಬಿನ ಖಾಲಿ ಟ್ರಾಕ್ಟರ್, ಓವರ್ ಟೇಕ್ ಮಾಡುವಾಗ ಪಕ್ಕದ ಬೈಕ್ ನಿಂದ ತಪ್ಪಿಸಿಕೊಳ್ಳಲು ಹೋಗಿ ಟ್ರಾಕ್ಟರ್ ಹಿಂಭಾಗದ ಟೇಲರ್ ಗಾಲಿಗೆ ಸಿಕ್ಕು ಬೈಕ್ ಸವಾರ ಮೃತಪಟ್ಟಿದ್ದಾನೆ.
ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story




