ರಾಣೆಬೆನ್ನೂರು: ಕ್ಷುಲ್ಲಕ ವಿಚಾರಕ್ಕೆ ಜಗಳ; ಪ್ರಕರಣ ದಾಖಲು

ರಾಣೆಬೆನ್ನೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಯುವಕರ ನಡುವಿನ ಜಗಳ ಬಳಿಕ ರಸ್ತೆಯಲ್ಲಿ ಹೊಡೆದಾಟಕ್ಕೆ ತಿರುಗಿದ್ದು, ಕೊನೆಗೆ ಪ್ರಕರಣ ದಾಖಲಾಗಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಗ್ರಾಮದ ಅಂಗಡಿಯೊಂದರಲ್ಲಿ ಕುರ್ಚಿ ವಿಚಾರವಾಗಿ ಯುವಕರ ನಡುವೆ ಆರಂಭವಾದ ವಾಗ್ವಾದ, ಅಂಗಡಿಯಿಂದ ಹೊರಬಂದ ಬಳಿಕವೂ ಮುಂದುವರಿದಿದ್ದು, ಈ ವೇಳೆ ಮಾರ್ಗಮಧ್ಯೆ ಬೈಕ್ ನಿಲ್ಲಿಸಿದ್ದ ಮಂಜುನಾಥ್ ಎಂಬ ಯುವಕನೊಂದಿಗೆ ಮತ್ತೆ ಜಗಳ ನಡೆದಿದೆ ಎನ್ನಲಾಗಿದೆ. ಮಂಜುನಾಥ್ ಗುರಾಯಿಸಿದ ಎಂಬ ಆರೋಪದ ಹಿನ್ನೆಲೆಯಲ್ಲಿ ಗಣೇಶ್ ಎಂಬಾತ ಕಿರಿಕ್ ಆರಂಭಿಸಿದ್ದಾನೆ ಎನ್ನಲಾಗಿದ್ದು, ಮಾತಿಗೆ ಮಾತು ಬೆಳೆದು ಯುವಕರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂಜು ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಹಲ್ಲೆ ಪ್ರಕರಣದಲ್ಲಿ ಗಣೇಶ್ ಹಾಗೂ ಮುತ್ತಪ್ಪ ಎಂಬುವವರ ವಿರುದ್ಧ ಆರೋಪ ಕೇಳಿಬಂದಿದೆ.ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





