ಮೊಡವೆಯಿಂದ ಪ್ರಾರಂಭಿಸಿ ನಿದ್ರೆಯವರೆಗೆ ಕರುಳಿನ ಆರೋಗ್ಯದ 7 ಚಿಹ್ನೆಗಳನ್ನು ಕಡೆಗಣಿಸಬೇಡಿ…

ಸಾಂದರ್ಭಿಕ ಚಿತ್ರ | Photo Credit : freepik
ಡಿಕೋಡ್ ಏಜ್ನ ವೈದ್ಯಕೀಯ ಸಲಹೆಗಾರರಾಗಿರುವ ಡಾ ಆರ್ಜೂ ಪಂಜ್ವಾನಿ ಅವರ ಪ್ರಕಾರ ಕರುಳಿನ ಅಪಾಯದ ಕೆಲವು ಪ್ರಮುಖ ಚಿಹ್ನೆಗಳು ಕಂಡುಬಂದಲ್ಲಿ ನೀವು ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.
ಕರುಳಿನ ಆರೋಗ್ಯವು ಒಟ್ಟು ಯೋಗಕ್ಷೇಮದ ಅಡಿಪಾಯದ ಪ್ರಮುಖ ಸ್ತಂಭವಾಗಿದೆ. ಬಹುತೇಕ ಎಲ್ಲಾ ಆರೋಗ್ಯ ಚರ್ಚೆಗಳಲ್ಲೂ ಕರುಳಿನ ಆರೋಗ್ಯ ಉಲ್ಲೇಖವಾಗುತ್ತದೆ. ಕರುಳಿನಿಂದ ಮೆದುಳಿಗೆ, ಕರುಳಿನಿಂದ ರೋಗನಿರೋಧಕ ವ್ಯವಸ್ಥೆಗೆ, ಕರುಳಿನಿಂದ ಚರ್ಮದ ಅಕ್ಷದವರೆಗೆ ಇತರ ಶಾರೀರಿಕ ಮತ್ತು ಮಾನಸಿಕ ಕೆಲಸಗಳ ಜೊತೆಗೆ ಅದು ಎಷ್ಟು ಪರಸ್ಪರ ಸಂಬಂಧ ಹೊಂದಿದೆ ಎಂಬ ಕಾರಣದಿಂದ ಪ್ರಮುಖವಾಗಿ ಉಲ್ಲೇಖವಾಗುತ್ತದೆ. ಕರುಳಿನ ಅಪಾಯದ ಚಿಹ್ನೆಗಳು ಯಾವಾಗಲೂ ಆಮ್ಲೀಯತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿರುವುದಿಲ್ಲ.
ಡಿಕೋಡ್ ಏಜ್ನ ವೈದ್ಯಕೀಯ ಸಲಹೆಗಾರರಾಗಿರುವ ಡಾ. ಆರ್ಜೂ ಪಂಜ್ವಾನಿ ಅವರ ಪ್ರಕಾರ ಕರುಳಿನ ಅಪಾಯದ ಕೆಲವು ಪ್ರಮುಖ ಚಿಹ್ನೆಗಳು ಕಂಡುಬಂದಲ್ಲಿ ನೀವು ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ಪರಿಗಣಿಸಬೇಕಾದ ಕೆಲವು ಚಿಹ್ನೆಗಳನ್ನು ಗಮನಿಸಬೇಕು.
1. ನಿರಂತರ ಜೀರ್ಣವ್ಯವಸ್ಥೆಯ ಅಸ್ವಸ್ಥತೆ: ಹೊಟ್ಟೆ ಉಬ್ಬರಿಸುವುದು, ಹಿಮ್ಮುಖ ಹರಿವು (reflux), ಮಲಬದ್ಧತೆ ಅಥವಾ ಅತಿಸಾರದಂತಹ ಚಿಹ್ನೆಗಳು. ಇವು ಕಂಡುಬಂದಲ್ಲಿ ಸೂಕ್ಷ್ಮಜೀವಿಯ ಅಸಮತೋಲನ ಅಥವಾ ಕರುಳಿನ ತಡೆಗೋಡೆ ಕಾರ್ಯ ದುರ್ಬಲಗೊಂಡಿದೆ ಎಂದು ತಿಳಿದುಕೊಳ್ಳಬೇಕು.
2. ಆಗಾಗ್ಗೆ ಆಯಾಸ: ಸೂಕ್ಷ್ಮಜೀವಿಯು (ಮೈಕ್ರೋಬಿಯೋಮ್) ಪೋಷಕಾಂಶಗಳ ಹೀರುವಿಕೆ ಮತ್ತು ಚಯಾಪಚಯ ಕಾರ್ಯಕ್ಷಮತೆಗೆ ಬೆಂಬಲಿಸುವುದು ಕಷ್ಟವಾದಾಗ ಮೆದುಳಿಗೆ ಹೋಗುವ ಮಾಹಿತಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಯಾಸ ಉಂಟಾಗುತ್ತದೆ.
3. ಮನೋಸ್ಥಿತಿಯ ಬದಲಾವಣೆ: ಕರುಳು ಚಾಲಿತ ಉರಿಯೂತವು ಕರುಳಿನ-ಮೆದುಳಿನ ಅಕ್ಷದ ಮೂಲಕ ಮೆದುಳಿಗೆ ಹೋಗುವ ಮಾಹಿತಿಯ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಮಾನಸಿಕ ಸ್ಪಷ್ಟತೆ ಕಡಿಮೆಯಾಗುತ್ತದೆ.
4. ನಿದ್ರೆಯ ಕೊರತೆ: ಮೈಕ್ರೋಬಿಯಲ್ನ ಸಂಯೋಜನೆಗೆ ಸಂಬಂಧಿಸಿದೆ. ಇದು ಸರ್ಕಾರ್ಡಿಯನ್ ರಿದಂ ನಿಯಂತ್ರಣದ ಮೇಲೆ ಪರಿಣಾಮ ಬೀರಬಹುದು.
5. ಚರ್ಮದಲ್ಲಿ ಊತ: ಮೊಡವೆ, ಇಸಬು ಅಥವಾ ಸೊರಿಯಾಸಿಸ್ ಮೊದಲಾದ ಚಿಹ್ನೆಗಳು ಕಂಡುಬರಬಹುದು. ಕರುಳಿನ ಅಸಮತೋಲನದಲ್ಲಿ ಬೇರೂರಿದ ವ್ಯವಸ್ಥಿತ ಉರಿಯೂತವನ್ನು ಪ್ರತಿಫಲಿಸಬಹುದು.
6. ಆಹಾರ ಸೂಕ್ಷ್ಮತೆ: ಆಹಾರ ಸೂಕ್ಷ್ಮತೆ ಎಂದರೆ ಕೆಲವು ಆಹಾರಗಳಿಗೆ ಹೆಚ್ಚಿನ ಅಲರ್ಜಿಯಂತಹ ಪ್ರತಿಕ್ರಿಯೆ. ಕರುಳಿನ ಒಳಪದರವು ದುರ್ಬಲಗೊಂಡಾಗ ಮತ್ತು ರೋಗನಿರೋಧಕ ಪ್ರತಿಕ್ರಿಯೆಗಳು ತೀಕ್ಷ್ಣಗೊಂಡಾಗ ಸೂಕ್ಷ್ಮತೆ ಸಂಭವಿಸುತ್ತದೆ.
7. ದೀರ್ಘಕಾಲೀನ ಉರಿಯೂತ: ಉರಿಯೂತಕ್ಕೆ ಮುಖ್ಯವಾಗಿ ಗಟ್ ಡಿಸ್ಬಯೋಸಿಸ್ (ವ್ಯಕ್ತಿಯ ಸ್ವಾಭಾವಿಕ ಮೈಕ್ರೋಫ್ಲೋರಾದಲ್ಲಿ ವಿಶೇಷವಾಗಿ ಕರುಳಿನಲ್ಲಿರುವ ಜೀವಿಗಳ ನಡುವಿನ ಅಸಮತೋಲನವು ಅನೇಕ ಅನಾರೋಗ್ಯ ಕಾಡುತ್ತದೆ) ಕಾರಣವಾಗಿರಬಹುದು. ವಿಶೇಷವಾಗಿ ಕರುಳಿನಲ್ಲಿರುವ ಮೈಕ್ರೋಬಯೋಮ್ ರೋಗನಿರೋಧಕ ವ್ಯವಸ್ಥೆಯ ನಿಯಂತ್ರಣ ಮತ್ತು ಸಹಿಷ್ಣುತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕರುಳಿನ ಆರೋಗ್ಯವನ್ನು ಸುಧಾರಿಸುವುದು ಹೇಗೆ?
ವೈದ್ಯರ ಪ್ರಕಾರ ಕರುಳಿನ ಆರೋಗ್ಯ ಕಾಪಾಡುವುದು ಎಂದರೆ ಈಗಾಗಲೇ ಕರುಳಿನಲ್ಲಿರುವ ಮೈಕ್ರೋಬ್ಗಳನ್ನು ಬೆಂಬಲಿಸುವುದು. ಅಂದರೆ ತಿನ್ನುವುದರ ಬಗ್ಗೆ ಜಾಗರೂಕವಾಗಿರಬೇಕು. ಪೌಷ್ಠಿಕಾಂಶದ ಮೌಲ್ಯವನ್ನು ಗಮನಿಸಬೇಕು. ವೈವಿಧ್ಯಮಯ, ಫೈಬರ್ ಭರಿತ ಆಹಾರವು ಸೂಕ್ಷ್ಮಜೀವಿಯ ಬೆಳವಣಿಗೆಗೆ ಅತ್ಯಗತ್ಯವಾಗಿರುತ್ತದೆ.
ಬೆಳ್ಳುಳ್ಳಿ, ಈರುಳ್ಳಿ, ಬಾಳೆಹಣ್ಣು ಮತ್ತು ಅಸ್ಪರಾಗಸ್ಗಳಲ್ಲಿರುವ ಇನ್ಸುಲಿನ್, ಫ್ರಕ್ಟೊ-ಅಲಿಗೋಸ್ಯಾಚರೈಡ್ಗಳು ಮತ್ತು ಗ್ಯಾಲಕ್ಟೊ ಅಲಿಗೋಸ್ಯಾಚರೈಡ್ಗಳಂತಹ ಪ್ರಿಬಯಾಟಿಕ್ಗಳು ಉಪಯುಕ್ತ ಬ್ಯಾಕ್ಟೀರಿಯಗಳಿಗೆ ಶಕ್ತಿಯನ್ನು ಒದಗಿಸುತ್ತವೆ. ಹುದುಗಿಸಿದ ಆಹಾರ, ಕೆಫಿರ್, ಕಿಮ್ಚಿ, ಸಾರ್ಕ್ರಾಟ್, ಮನೆಯಲ್ಲಿ ಮಾಡಿದ ಉಪ್ಪಿನಕಾಯಿಗಳು, ಮಿಸೊ ಮೊದಲಾದುವುಗಳು ಮೈಕ್ರೋಬ್ಗಳಿಗೆ ಬೆಂಬಲ ನೀಡುತ್ತವೆ. ಹೀಗಾಗಿ ಎಷ್ಟೇ ಪೂರಕ ಔಷಧಿಗಳನ್ನು ಸೇವಿಸಿದರೂ ಕರುಳು ಸ್ನೇಹಿ ಆಹಾರಗಳನ್ನು ಸೇವಿಸದೆ ಇದ್ದರೆ ನಿಮ್ಮ ಕರುಳಿನ ಆರೋಗ್ಯ ಸುಧಾರಿಸುವುದಿಲ್ಲ.
ಕೃಪೆ: ಹಿಂದೂಸ್ತಾನ್ ಟೈಮ್ಸ್







