ಋತುಬಂಧದ ತೂಕ ಏರಿಕೆಯಾಗದಂತೆ ದೇಹದ ಹಾರ್ಮೋನ್ ಬದಲಾವಣೆಗೆ ಮೊದಲೇ ಎಚ್ಚರವಾಗಿರಿ!

ಸಾಂದರ್ಭಿಕ ಚಿತ್ರ | Photo Credit : freepik
ಋತುಬಂಧಕ್ಕೆ ಬಹು ಹಂತದ ಪರಿವರ್ತನೆಯಾಗುವ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳು ಹೆಚ್ಚು ಸಮರ್ಥವಾಗಿ ಪ್ರಕ್ರಿಯೆಗೊಳಿಸುವುದಿಲ್ಲ. ಇದರಿಂದಲೇ ಮಹಿಳೆಯರ ದೈನಂದಿನ ಜೀವನದಲ್ಲಿ ಹೆಚ್ಚು ಬದಲಾವಣೆಯಾಗದೆ ಇದ್ದರೂ ತೂಕ ಏರಿಕೆಯಾಗುತ್ತದೆ.
ನೀವು 45ರ ಆಸುಮಾಸಿನಲ್ಲಿದ್ದೀರಿ ಮತ್ತು ಆರೋಗ್ಯಕರ ಆಹಾರ ಸೇವಿಸುತ್ತೀರಿ. ನಿಯಮಿತವಾಗಿ ವ್ಯಾಯಾಮವೂ ಮಾಡುತ್ತೀರಿ. ವರ್ಷಗಳಿಂದ ನೀವು ಇದೇ ದೈನಂದಿನ ಜೀವನದ ಅಭ್ಯಾಸ ಹೊಂದಿದ್ದೀರಿ. ಆದರೆ ಋತುಬಂಧದಲ್ಲಿ ತೂಕ ಏರುವ ಬಗ್ಗೆ ನಿಮ್ಮ ತಾಯಿ ಹೇಳಿರುವುದು ನೆನಪಿರಬಹುದು. ಮಹಿಳೆಯರ ಸರಿಯಾದ ಆರೋಗ್ಯ ಹಠಾತ್ ಆಗಿ ಬದಲಾಗುತ್ತದೆ. ದೇಹ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಜೀವನಶೈಲಿ ಆಯ್ಕೆಗಳು ಅಗತ್ಯವಾಗಿದ್ದರೂ, ಹಠಾತ್ ಬದಲಾವಣೆಗೆ ಕಾರಣ ಇಚ್ಛಾಶಕ್ತಿಯಲ್ಲ. ಶರೀರ ಶಾಸ್ತ್ರ.
►ಋತುಬಂಧವಾದ ನಂತರ ತೂಕ ಸಮಸ್ಯೆ
ಋತುಬಂಧವಾದ ನಂತರ ತೂಕ ಏರಿಕೆಯ ಸಮಸ್ಯೆ ಬರುತ್ತದೆ ಎಂದು ಬಹಳಷ್ಟು ಮಹಿಳೆಯರು ಅಂದಾಜಿಸುತ್ತಾರೆ. ಆದರೆ ಸಂಶೋಧನೆಗಳು ಹೇಳಿರುವ ಪ್ರಕಾರ ನಿಜವಾದ ಚಯಾಪಚಯ ಸಮಸ್ಯೆಗಳು ಮೊದಲೇ ಆರಂಭವಾಗುತ್ತವೆ. ಋತುಬಂಧಕ್ಕೆ ಬಹು ಹಂತದ ಪರಿವರ್ತನೆಯಾಗುವ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳು ಹೆಚ್ಚು ಸಮರ್ಥವಾಗಿ ಪ್ರಕ್ರಿಯೆಗೊಳಿಸುವುದಿಲ್ಲ. ವಿರಾಮದ ಸ್ಥಿತಿಯಲ್ಲಿದ್ದಾಗ ಚಯಾಪಚಯ ನಿಧಾನವಾಗುತ್ತದೆ. ಇದರಿಂದಲೇ ಮಹಿಳೆಯರ ದೈನಂದಿನ ಜೀವನದಲ್ಲಿ ಹೆಚ್ಚು ಬದಲಾವಣೆಯಾಗದೆ ಇದ್ದರೂ ತೂಕ ಏರಿಕೆಯಾಗುತ್ತದೆ.
ಋತುಬಂಧಕ್ಕೆ ಮೊದಲೇ ಶರೀರ ಅದಕ್ಕಾಗಿ ಶಾರೀರಿಕ ಪ್ರಕ್ರಿಯೆ ಆರಂಭಿಸುತ್ತದೆ. ಆದರೆ ತೂಕ ಏರಿಕೆ ಅಗತ್ಯವೇನೂ ಅಲ್ಲ. ನಿಮ್ಮ ದೇಹ ಹೊಂದಿಕೆಗೆ ಸಿದ್ಧವಾಗಿರುವಾಗಲೇ ಬದಲಾವಣೆ ತರುವುದು ಒಳಿತು.
►ಋತುಬಂಧಕ್ಕೆ ಮೊದಲು ಮೌನವಾದ ಬದಲಾವಣೆ
ಋತುಬಂಧವನ್ನು ಅಧಿಕೃತವಾಗಿ ಅವಧಿಯಿಲ್ಲದ 12 ತಿಂಗಳುಗಳು ಎಂದು ವ್ಯಾಖ್ಯಾನಿಸಲಾಗಿದೆ. ದೇಹದ ಹಾರ್ಮೋನಿನ ಪರಿವರ್ತನೆ ಮೆದುಳು ಮತ್ತು ಅಂಡಗಳ ನಡುವಿನ ಸಂಕೇತದ ಬದಲಾವಣೆಯಿಂದ ಆಗುತ್ತದೆ. ಈ ಹಂತದಲ್ಲಿ ಈಸ್ಟ್ರೊಜನ್ ಮತ್ತು ಪ್ರೊಜೆಸ್ಟರೋನ್ ಅನಿರೀಕ್ಷಿತವಾಗಿ ಏರಿಳಿತ ಕಾಣುತ್ತವೆ.
ಆ ಹಾರ್ಮೋನಲ್ ಬದಲಾವಣೆಗಳು ಪ್ರತಿ ಚಯಾಪಚಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಈಸ್ಟ್ರೋಜನ್ ಕೊಬ್ಬಿನ ಹಂಚಿಕೆಗೆ, ಸ್ನಾಯು ರಿಪೇರಿ ಮತ್ತು ಇನ್ಸುಲಿನ್ ಸಂವೇದನಾಶೀಲತೆಗೆ ಕಾರಣವಾಗುತ್ತದೆ. ಇವುಗಳ ಮಟ್ಟಗಳು ವ್ಯಾಪಕವಾಗಿ ಬದಲಾದಾಗ ದೇಹದಲ್ಲಿ ಕೊಬ್ಬಿನಂಶ ಶೇಖರಣೆಯ ವಿಧ ಬದಲಾಗುತ್ತದೆ. ಕೊಬ್ಬನ್ನು ನಿತಂಬ, ತೊಡೆಗಳಿಂದ ಹೊಟ್ಟೆಯ ಕಡೆಗೆ ಚಲಿಸುವಂತೆ ಮಾಡುತ್ತದೆ. ಸ್ನಾಯುಗಳ ಪ್ರೊಟೀನ್ ಸಂಶ್ಲೇಷಣೆಯೂ ನಿಧಾನವಾಗುತ್ತವೆ. ಫಲಿತಾಂಶವಾಗಿ ಹವ್ಯಾಸಗಳು ಬದಲಾಗದೆ ಇದ್ದರೂ ನಿಧಾನವಾಗಿ ಸ್ನಾಯು ನಷ್ಟ ಮತ್ತು ಇನ್ಸುಲಿನ್ ಪ್ರತಿರೋಧತೆ ಏರಿಕೆಯಾಗುತ್ತದೆ.
ಈ ಹಾರ್ಮೋನಲ್ ಬದಲಾವಣೆಗಳು ನಿದ್ದೆಯ ಮೇಲೆ ಪರಿಣಾಮ ಬೀರುತ್ತವೆ. ಕಾರ್ಟಿಸೊಲ್ ಮಟ್ಟಗಳ ಮೇಲೆ ಪ್ರಭಾವ ಬೀರುತ್ತದೆ. ಹೊಟ್ಟೆಯ ಸಂವೇದನೆಯನ್ನು ಬದಲಿಸುತ್ತದೆ. ಹೀಗೆ ಆರೋಗ್ಯದ ಕಡೆಗೆ ಗಮನ ನೀಡುವಾಗ ವ್ಯಾಯಾಮ, ನಿದ್ದೆ ಮತ್ತು ಇತರ ಸ್ವಯಂ ಆರೈಕೆಗೆ ಸಮಯ ಕಡಿಮೆಯಾಗುತ್ತದೆ. ತೂಕ ಬದಲಾಗದೆ ದೇಹದ ಸಂಯೋಜನೆಯಲ್ಲಿ ಬದಲಾವಣೆ ಎನ್ನಬಹುದು. ತೂಕ ಹಾಗೇ ಉಳಿದಲ್ಲಿ ಹೊಟ್ಟೆಯ ಸುತ್ತ ಕೊಬ್ಬು ತುಂಬಬಹುದು. ಪ್ರಮುಖ ಅಂಗಗಳಲ್ಲಿ ಕೊಬ್ಬು ಶೇಖರಣೆಯಾಗಿ ವಿಧ 2 ಮಧುಮೇಹ, ಹೃದಯ ರೋಗ, ಲಿವರ್ ರೋಗ ಮತ್ತು ನಿದ್ರಾ ರಾಹಿತ್ಯದ ಸಮಸ್ಯೆ ಕಂಡುಬರಬಹುದು.
►ಋತುಬಂಧದ ಮೊದಲಿನ ಅವಧಿ ಏಕೆ ಮುಖ್ಯ?
ಅಮೆರಿಕದಲ್ಲಿ 1994ರಿಂದ ಮಧ್ಯವಯಸ್ಕ ಮಹಿಳೆಯರನ್ನು ಅಧ್ಯಯನ ಮಾಡಲಾಗಿದೆ. ಕಂಡುಬಂದ ಒಂದು ಪ್ರಮುಖವಾದ ವಿವರವೆಂದರೆ ಕೊಬ್ಬು ತುಂಬಿಕೊಳ್ಳಲು ಆರಂಭವಾಗುವುದು ಮತ್ತು ಸ್ನಾಯು ನಷ್ಟ. ಅದೂ ಋತುಬಂಧದ ಅವಧಿಗೆ ಬಹಳ ಮೊದಲೇ ಆಗುತ್ತದೆ. ಒಮ್ಮೆ ಋತುಬಂಧದ ಮೊದಲಿನ ಅವಧಿಯ ಬದಲಾವಣೆ ಕಂಡುಬಂದರೆ ಅದನ್ನು ಸರಿಪಡಿಸುವುದು ಕಷ್ಟ. ಋತುಬಂಧದ ಮೊದಲಿನ ಸಮಯದಲ್ಲಿ ದೇಹ ಇನ್ನೂ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಉನ್ನತ ಪೋಷಕಾಂಶದ ಆಹಾರ ಮತ್ತು ನಿದ್ದೆಯ ಅವಧಿಯನ್ನು ಉತ್ತಮಗೊಳಿಸುವ ಮೂಲಕ ಆರೋಗ್ಯಕರ ಬದಲಾವಣೆ ತರಬಹುದು. ಆದರೆ ಬಹಳಷ್ಟು ಮಂದಿ ಋತುಬಂಧಕ್ಕೆ ಪ್ರತಿಕ್ರಿಯಾತ್ಮಕವಾದ ಚಿಕಿತ್ಸೆ ನೀಡುತ್ತಾರೆ. ರೋಗ ಚಿಹ್ನೆಗಳು ಕಂಡು ಬಂದಾಗ ಅದಕ್ಕೆ ಪ್ರತಿಕ್ರಿಯೆ ನೀಡಲಾಗಿರುತ್ತದೆ.
►ಮಹಿಳೆಯರು ತಿಳಿದುಕೊಳ್ಳಬೇಕಾಗಿರುವುದೇನು?
40ರ ನಂತರ ಕಡಿಮೆ ತಿಂದು ಹೆಚ್ಚು ಚಲಿಸಬೇಕು. ಇದರಿಂದ ಜೈವಿಕ ಆರೋಗ್ಯ ಸರಳವಾಗುತ್ತದೆ ಮತ್ತು ಹಾರ್ಮೋನಲ್ ಸ್ಥಿತಿಯನ್ನು ಅಲಕ್ಷಿಸಬಹುದು. ಉದಾಹರಣೆಗೆ ಸ್ನಾಯು ಉಳಿಸಿಕೊಳ್ಳಲು ಮತ್ತು ಇನ್ಸುಲಿನ್ ಸೆನ್ಸಿಟಿವಿಟಿ ನಿರ್ವಹಿಸಲು ತರಬೇತಿ ಅಗತ್ಯ. ಸಾಕಷ್ಟು ಪ್ರೊಟೀನ್ ಸೇವನೆ ಅಗತ್ಯ. ನಿದ್ದೆ ಮತ್ತು ಒತ್ತಡ ನಿಯಂತ್ರಣ ಅತ್ಯಗತ್ಯ. ಬೆಳಗಿನ ಸೂರ್ಯನ ಬೆಳಕಿನಲ್ಲಿ ಅಡ್ಡಾಡುವುದು, ಉತ್ತಮ ನಿದ್ದೆ, ತಡರಾತ್ರಿ ತಿನ್ನುವುದನ್ನು ತಪ್ಪಿಸುವುದು ಮತ್ತು ವ್ಯಾಯಾಮದಿಂದ ಹಾರ್ಮೋನಲ್ ಬದಲಾವಣೆಯನ್ನು ನಿಯಂತ್ರಿಸಬಹುದು.
►ಆರಂಭದಲ್ಲೇ ಹೇಗೆ ಕ್ರಮ ಕೈಗೊಳ್ಳಬಹುದು?
30 ಮತ್ತು 40ರ ವಯಸ್ಸಿನಲ್ಲಿ ಕುಸಿತದ ಕಡೆಗೆ ಲೆಕ್ಕಾಚಾರವಾಗಿರಬಾರದು. ಚಯಾಪಚಯ ಸಹಿಷ್ಣುತೆ ಬೆಳೆಸಿಕೊಳ್ಳಲು ಅವಕಾಶವಾಗಿರಬೇಕು. ಜಾಗೃತಿ, ರೋಗಪರಿಶೀಲನೆ- ಆಧರಿತ ಕಾರ್ಯತಂತ್ರಗಳ ಮೂಲಕ ಮಹಿಳೆಯರು ಋತುಬಂಧದ ಮೊದಲಿನ ಅವಧಿಯಲ್ಲಿ ಆತ್ಮವಿಶ್ವಾಸದಿಂದ ಮುಂದೆ ಸಾಗಬಹುದು.
ತೂಕ ಎತ್ತಿರಿ. ಸ್ನಾಯು ಸಂರಕ್ಷಣೆ ಮತ್ತು ಚಯಾಪಚಯ ವೃದ್ಧಿಗೆ ವಾರಕ್ಕೊಮ್ಮೆ ಸ್ಟ್ರೆನ್ತ್ ತರಬೇತಿ ಪಡೆಯುವುದು ಮುಖ್ಯ. ಪ್ರೊಟೀನ್ ಸೇವನೆ ಉತ್ತಮಗೊಳಿಸಿ. ಆಹಾರದಲ್ಲಿ ಸ್ನಾಯುವಿಗೆ ಬಲ ನೀಡುವ ಪ್ರೊಟೀನ್ ಸೇರಿಸಿ. ವಯಸ್ಸು ಆಧಾರಿತ ಸ್ನಾಯು ನಷ್ಟವನ್ನು ತಪ್ಪಿಸಲು ಸಾಕಷ್ಟು ಪ್ರೊಟೀನ್ ಸೇವನೆ ಮುಖ್ಯವಾಗುತ್ತದೆ.
ನಿದ್ದೆಯೂ ಮುಖ್ಯವಾಗುತ್ತದೆ. ನೈರ್ಮಲ್ಯಯುತವಾಗಿ ನಿದ್ದೆ ಮಾಡಿ ಮತ್ತು ಒತ್ತಡ ನಿವಾರಿಸಿ. ಇದರಿಂದ ಕಾರ್ಟಿಸೋಲ್ ನಿಯಂತ್ರಣ ಮತ್ತು ಹೊಟ್ಟೆಯ ಹಸಿವಿನ ಹಾರ್ಮೋನ್ಗಳನ್ನು ನಿರ್ವಹಿಸಬಹುದು. ಏಳರಿಂದ ಎಂಟು ಗಂಟೆಯ ನಿದ್ದೆ ಅಗತ್ಯ.
ಚಯಾಪಚಯ ಕ್ರಿಯೆ ಹಾಳಾಗಿಲ್ಲ. ಅದು ಜೀವನದ ಹೊಸ ಸ್ಥಿತಿಗೆ ಹೊಂದಿಕೊಳ್ಳುತ್ತಿದೆ. ಹೀಗಾಗಿ ಅದನ್ನು ಅರ್ಥಮಾಡಿಕೊಳ್ಳಿ ಮತ್ತು ದೇಹದ ಜೊತೆಗೂಡಿ ಕೆಲಸ ಮಾಡಿ, ಅದರ ವಿರುದ್ಧವಲ್ಲ.
ಹಕ್ಕು ನಿರಾಕರಣೆ: ಈ ಲೇಖನವನ್ನು ಸಾರ್ವಜನಿಕ ವಲಯದ ಮಾಹಿತಿಯಿಂದ ತಯಾರಿಸಲಾಗಿದೆ. ನಿಮ್ಮ ದಿನಚರಿಯನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ಸೂಕ್ತ ವೈದ್ಯರನ್ನು ಸಂಪರ್ಕಿಸಿ.







