ಪ್ರತಿಜೀವಾಣು ಅಂಶಗಳಿರುವ ಮೊಟ್ಟೆಗಳು ಕ್ಯಾನ್ಸರ್ ತರಬಲ್ಲವೆ?; ಸತ್ಯಾಂಶವೇನು?

Photo Credit : freepik
ಮೊಟ್ಟೆಗಳು ಆರೋಗ್ಯಕಾರಿ. ಅವುಗಳಲ್ಲಿ ನೈಟ್ರೊಫ್ಯುರಾನ್ ಎನ್ನುವ ಪ್ರತಿಜೀವಾಣುವಿನ ಅಂಶಗಳು ಇರಬಹುದಾದರೂ, ನಗಣ್ಯವಾಗಿರುತ್ತವೆ. ಪ್ರತಿಜೀವಾಣು ಇರುವ ಯಾವುದೇ ಮೊಟ್ಟೆ ಕ್ಯಾನ್ಸರ್ ತರಬಹುದು ಎನ್ನುವ ವಾದ ಸುಳ್ಳು.
ಮೊಟ್ಟೆಗಳಲ್ಲಿರುವ ಪ್ರತಿಜೀವಾಣು ನೈಟ್ರೋಫ್ಯುರಾನ್ ನ ಶೇಷಗಳಿಂದ ಕ್ಯಾನ್ಸರ್ ಬರಬಹುದು ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹೀಗಾಗಿ ಮೊಟ್ಟೆ ಸೇವನೆಯ ಬಗ್ಗೆ ಭಯ ಹುಟ್ಟಿಸಲಾಗುತ್ತಿದೆ. ಆದರೆ ಇದನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬೇಕೇ ವಿನಾ ಭಯಪಡುವ ಅಗತ್ಯವಿಲ್ಲ.
ನೈಟ್ರೋಫ್ಯೂರಾನ್ ಗಳು ಎಂದರೇನು?
ವಿದೇಶದಲ್ಲಿ ನಿಷೇಧಿತ ಯಾವುದೇ ಸಂಯುಕ್ತವು ಗ್ರಾಹಕರಲ್ಲಿ ಆತಂಕ ಸೃಷ್ಟಿಸುವುದು ಸಹಜವೇ ಆಗಿದೆ. ನೈಟ್ರೋಫ್ಯುರಾನ್ ಗಳು ಆಂಟಿಮೈಕ್ರೋಬಿಯಲ್ ಔಷಧಿ. ಇದನ್ನು ಕೋಳಿ ಮತ್ತು ಜಾನುವಾರುಗಳಿಗೆ ಬಳಸಲಾಗುತ್ತಿದೆ. ಪ್ರಯೋಗಾಲಯಗಳಲ್ಲಿ ಪ್ರಾಣಿಗಳಿಗೆ ಇವುಗಳ ಅತಿಯಾದ ಡೋಸ್ ಗಳನ್ನು ಕೊಡುತ್ತಿದ್ದ ಕಾರಣದಿಂದ ಭಾರತ ಮತ್ತು ಅನೇಕ ದೇಶಗಳಲ್ಲಿ ಇದನ್ನು ಬಳಕೆಗೆ ನಿಷೇಧಿಸಲಾಗಿದೆ. ಹೀಗೆ ಅತಿ ಡೋಸ್ ನಲ್ಲಿ ಬಳಸಿದರೆ ಕಾರ್ಸಿನೊಜೆನಿಕ್ ಸಮಸ್ಯೆಯ ಸಾಧ್ಯತೆಯಿರುತ್ತದೆ.
ನಿರ್ದಿಷ್ಟ ಬ್ರಾಂಡ್ ನ ಮೊಟ್ಟೆಗಳಲ್ಲಿ ನೈಟ್ರೋಫ್ಯುರಾನ್ ಕಿಲೋಗ್ರಾಂಗೆ 0.74 ಮೈಕ್ರೋಗ್ರಾಂಗಳಷ್ಟು ಮಾತ್ರ ಪತ್ತೆಯಾಗಿದೆ. ಭಾರತದಲ್ಲಿ ಅವಕಾಶ ನೀಡಲಾಗಿರುವ ಪ್ರತಿ ಕಿಲೋಗ್ರಾಂಗೆ 1 ಮೈಕ್ರೋಗ್ರಾಂಗಿಂತಲೂ ಇದು ಕಡಿಮೆ ಪ್ರಮಾಣವಾಗಿದೆ.
ಇಂದಿನ ಮೊಟ್ಟೆಗಳಲ್ಲಿ ನಿಜಕ್ಕೂ ನೈಟ್ರೊಫ್ಯುರಾನ್ ಗಳು ಇವೆಯೆ?
ಸಣ್ಣ ಪ್ರಮಾಣದಲ್ಲಿ ನೈಟ್ರೊಫ್ಯುರಾನ್ ಇರುವ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತಿರುತ್ತವೆ. ಮುಖ್ಯವಾಗಿ ಸಣ್ಣ ಮತ್ತು ನಿಯಂತ್ರಣಕ್ಕೆ ಸಿಗದೆ ಇರುವ ಕೋಳಿ ಸಾಕಾಣೆ ಕೇಂದ್ರಗಳಲ್ಲಿ ಇದರ ಬಳಕೆಯಾಗುತ್ತದೆ. ಎಫ್ಎಸ್ಎಸ್ಎಐ ನಿಯಮಿತವಾಗಿ ಮಾರುಕಟ್ಟೆ ಮಾದರಿಗಳನ್ನು ಪರೀಕ್ಷಿಸುತ್ತಿದ್ದು, ಬಹುತೇಕರು ನಿಯಮವನ್ನು ಅನುಸರಿಸುತ್ತಿದ್ದಾರೆ. 2023ರ ಐಸಿಎಆರ್ ವರದಿಯಂತೆ ಶೇ 98ಕ್ಕೂ ಹೆಚ್ಚು ಮಾದರಿಗಳಲ್ಲಿ ಹಾನಿಕರವಲ್ಲದ ಪ್ರಮಾಣದಲ್ಲಿ ಇದು ಕಂಡುಬಂದಿದೆ.
ಎಷ್ಟು ಡೋಸ್ ಇದ್ದರೆ ಮೊಟ್ಟೆ ವಿಷಕಾರಿ?
ಕ್ಯಾನ್ಸರ್ ಜೊತೆಗೆ ತಳಕು ಹಾಕಿಕೊಂಡಿರುವ ನೈಟ್ರೊಫ್ಯುರಾನ್ ಗಳಿಗೆ ಸಂಬಂಧಿಸಿದ ಬಹುತೇಕ ಅಧ್ಯಯನಗಳಲ್ಲಿ ಆಹಾರದಲ್ಲಿ ಕಂಡು ಬರುವ ಶೇಷಕ್ಕಿಂತ ನೂರಾರು ಪಟ್ಟು ಹೆಚ್ಚು ಡೋಸ್ ಗಳನ್ನು ಬಳಸಲಾಗುತ್ತದೆ. ಆದರೆ ಅಲಕ್ಷಿಸಬಹುದಾದ ಪ್ರಮಾಣದಲ್ಲಿ ನೈಟ್ರೊಫ್ಯುರಾನ್ ಗಳು ಇರುವ ಮೊಟ್ಟೆಗಳನ್ನು ಸೇವಿಸುವುದೆಂದರೆ ಕಾರ್ಸಿನೊಜೆನಿಕ್ ಡೋಸ್ಗಳನ್ನು ಸೇವಿಸುವುದು ಎಂದರ್ಥವಲ್ಲ.
ಅಧ್ಯಯನಗಳಲ್ಲಿ ಇಲಿಗಳಲ್ಲಿ ಅತಿ ಹೆಚ್ಚು ಪ್ರಮಾಣದ ಕ್ಯಾನ್ಸರ್ಜನಕವಾಗಿರುವ ಸಾಕ್ಷ್ಯಗಳು ಕಂಡುಬಂದಿಲ್ಲ. ಇಲಿಗಳಲ್ಲಿ ಅಂಡಾಶಯದ ಗೆಡ್ಡೆಗಳು ಅಥವಾ ಗಂಡು ಇಲಿಗಳಲ್ಲಿ ಮೂತ್ರಪಿಂಡದ ಗೆಡ್ಡೆಗಳ ಹೆಚ್ಚಳಗಳು ಸೀಮಿತವಾಗಿವೆ. ಮಾನವರಿಗೆ ಈ ಸಂಶೋಧನೆಗಳ ಪ್ರಸ್ತುತತೆ ಇನ್ನೂ ಅನಿಶ್ಚಿತವಾಗಿದೆ. ಗರ್ಭಾವಸ್ಥೆಯಲ್ಲೂ ಸೇರಿದಂತೆ ಮಾನವರಲ್ಲಿ ಮೂತ್ರನಾಳದ ಸೋಂಕುಗಳಿಗೆ ನೈಟ್ರೊಫ್ಯುರಾಂಟೊಯಿನ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಕ್ಯಾನ್ಸರ್ಗೆ ಕಾರಣವಾಗಿರುವುದು ಕಂಡುಬಂದಿಲ್ಲ.
ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳಲ್ಲಿ ತಪ್ಪುದಾರಿಗೆ ಎಳೆದಿರುವುದೇನು?
ವೈರಲ್ ಪೋಸ್ಟ್ ಗಳಲ್ಲಿ ಪ್ರಯೋಗಾಲಯದ ವಿಷಕಾರಿ ದತ್ತಾಂಶವನ್ನು ನೈಜ ಜಗತ್ತಿನ ಆಹಾರದ ಬಳಕೆಗೆ ತಳಕು ಹಾಕಲಾಗಿದೆ. ಇದರಿಂದ ತಪ್ಪು ಮಾಹಿತಿಯನ್ನು ರೂಪಿಸಲಾಗಿದೆ. ಅಪರೂಪದಲ್ಲಿ ಅಲ್ಪ ಪ್ರಮಾಣದಲ್ಲಿ ಕಂಡುಬರುವುದರಿಂದ ಕ್ಯಾನ್ಸರ್ ಗೆ ಸಮನಾಗದು.
ನೈಟ್ರೊಫ್ಯುರಾನ್ ಗಳನ್ನು ಆಹಾರ ಉತ್ಪಾದಿಸುವ ಪ್ರಾಣಿಗಳಲ್ಲಿ ದೀರ್ಘಕಾಲ ಬಳಸಿದಲ್ಲಿ ಕ್ಯಾನ್ಸರ್ ಜನಕವಾಗಬಹುದು. ಆದರೆ ಮೊಟ್ಟೆಗಳಲ್ಲಿ ಅಂತಹ ಪರಿಣಾಮವಾಗದು. “ಪ್ರತಿಜೀವಾಣು ಇರುವ ಯಾವುದೇ ಮೊಟ್ಟೆ ಕ್ಯಾನ್ಸರ್ ತರಬಹುದು” ಎನ್ನುವ ವಾದ ಸುಳ್ಳು. ಕ್ಯಾನ್ಸರ್ ಅಪಾಯವು ಬಹುಕ್ರಿಯಾತ್ಮಕವಾಗಿದೆ ಮತ್ತು ಒಂದು ಬಾರಿ ಒಡ್ಡಿಕೊಳ್ಳುವುದರಿಂದ ರೋಗ ಬರುವುದು ಅಪರೂಪ.
ಮೊಟ್ಟೆಗಳು ಆರೋಗ್ಯಕರ ಆಹಾರ:
ಮೊಟ್ಟೆಯಲ್ಲಿ ಪೌಷ್ಠಿಕಾಂಶ ಹೆಚ್ಚು ಇರುತ್ತದೆ. ಅತ್ಯಧಿಕ ಪ್ರೊಟೀನ್ ಇರುತ್ತದೆ. ವಿಟಮಿನ್ ಬಿ12 ಮತ್ತು ಒಮೆಗಾ- 3ಗಳಿರುತ್ತವೆ. ರಕ್ಷಣಾತ್ಮಕ ಕ್ರಮವಾಗಿ ಯಾವುದೇ ಸರ್ಕಾರ ಮೊಟ್ಟೆ ತಿನ್ನಬಾರದು ಎಂದು ಹೇಳಿಲ್ಲ. ಆದರೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಂದಿ ಬಹಳ ಕಠಿಣ ನೈರ್ಮಲ್ಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅವರು ಪೂರ್ಣವಾಗಿ ಬೇಯಿಸಿದ ಮೊಟ್ಟೆ ಸೇವಿಸಬೇಕು ಅಥವಾ ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಬೇಕು. ಮೊಟ್ಟೆಗಳನ್ನು ತೊಳೆಯುವುದರಿಂದ ಪ್ರತಿಜೀವಾಣು ಚಹರೆಗಳನ್ನು ತೊಡೆಯಲು ಸಾಧ್ಯವಿಲ್ಲ.
ಪ್ರಮಾಣಿತ ಕೋಳಿ ಸಾಕಣೆ ಕೇಂದ್ರಗಳು ಅಥವಾ ಎಫ್ಎಸ್ಎಸ್ಎಐ ಗುಣಮಟ್ಟ ಅನುಸರಣೆ ಮಾಡುವ ವ್ಯಾಪಾರಿಗಳಿಂದ ಮೊಟ್ಟೆಗಳನ್ನು ಖರೀದಿಸುವುದು ಉತ್ತಮ.
ಕೃಪೆ: indianexpress.com







