ಈ ಐದು ಆಹಾರಗಳನ್ನು ಬೆಕ್ಕುಗಳಿಗೆ ನೀಡಲೇಬಾರದು!

ಸಾಂದರ್ಭಿಕ ಚಿತ್ರ | Photo Credit : freepik.com
ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳಿರುವ ಆಹಾರ ಬೆಕ್ಕುಗಳಿಗೆ ಗರಿಷ್ಠ ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಆಹಾರದಲ್ಲಿ ಬಳಸಲೇಬಾರದ ವಸ್ತುಗಳು ಯಾವುವು?
ಬೆಕ್ಕುಗಳು ಮಾಂಸಾಹಾರಿಗಳು. ಬೆಕ್ಕುಗಳಿಗೆ ಹೃದಯಾಘಾತ ಅಥವಾ ಕಣ್ಣು ಕುರುಡಾಗುವ ರೋಗಗಳು ಬಾರದಂತೆ ತಡೆಯಲು ಅಮಿನೋ ಆಮ್ಲಗಳು ಮತ್ತು ಟೌರೀನ್ನಂತಹ ಪೋಷಕಾಂಶಗಳ ಅಗತ್ಯವಿದೆ. ಮಾಂಸ, ಮೀನು ಮತ್ತು ಹೈನುಗಾರಿಕಾ ಉತ್ಪನ್ನಗಳಿರುವ ಆಹಾರ ಗರಿಷ್ಠ ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಆಹಾರದಲ್ಲಿ ಬಳಸಲೇಬಾರದ ವಸ್ತುಗಳು ಯಾವುವು? ಸಾಕುಪ್ರಾಣಿಗಳ ತಜ್ಞರು ಹೇಳುವ ಪ್ರಕಾರ ಆರೋಗ್ಯ ಮತ್ತು ದೀರ್ಘಕಾಲ ಬದುಕುವ ಉದ್ದೇಶಕ್ಕಾಗಿ ಐದು ವಸ್ತುಗಳನ್ನು ಬೆಕ್ಕಿಗೆ ನೀಡಲೇಬಾರದು.
ಚಾಕಲೇಟು
ವಿಗಲ್ಸ್ನಲ್ಲಿ ವೆಟರ್ನರಿ ಸರ್ವಿಸ್ ನಿರ್ದೇಶಕರಾಗಿರುವ ಡಾ ದಿಲಿಪ್ ಸೊನ್ಯುನ್ ಹೇಳುವ ಪ್ರಕಾರ ಚಾಕಲೇಟು ಬೆಕ್ಕಿಗೆ ಅತಿ ವಿಷಕಾರಿ ಆಹಾರ. ಚಾಕಲೇಟು ಹೊರತುಪಡಿಸಿ ಕಾಫಿ ಮತ್ತು ಕೆಫೈನ್ ಹೊಂದಿರುವ ವಸ್ತುಗಳನ್ನು ನೀಡಲೇಬಾರದು. ಮೀಥೈಲ್ಕ್ಸನ್ಥೈನ್ ಹೊಂದಿರುವ ವಸ್ತುಗಳನ್ನು ಬೆಕ್ಕಿಗೆ ನೀಡಬಾರದು. ಮೀಥೈಲ್ಕ್ಸನ್ಥೈನ್ ಸೇವನೆಯಿಂದ ಬೆಕ್ಕಿಗೆ ಬೇಧಿ, ವಾಕರಿಕೆ, ಉಸಿರುಗಟ್ಟಬಹುದು. ಮಾತ್ರವಲ್ಲದೆ, ಅತಿಯಾದ ಮೂತ್ರ ವಿಸರ್ಜನೆಯಾಗಬಹುದು ಅಥವಾ ಹಸಿವೆ, ಅತಿಯಾದ ಚಟುವಟಿಕೆ, ಕಂಪನ, ಪಾರ್ಶ್ವವಾಯು ಮೊದಲಾದುವು ಕಾಣಿಸಿಕೊಳ್ಳಬಹುದು. ಹೃದಯದಲ್ಲಿ ಅಸಹಜ ಲಯ ಮತ್ತು ಕೆಲವೊಮ್ಮೆ ಮರಣವೂ ಸಂಭವಿಸಬಹುದು. ಚಾಕಲೇಟು ಕಡುವಾದಷ್ಟು ಹೆಚ್ಚು ಅಪಾಯಕಾರಿಯಾಗಿರುತ್ತದೆ.
ದ್ರಾಕ್ಷಿಗಳು ಮತ್ತು ಒಣ ದ್ರಾಕ್ಷಿಗಳು
ದ್ರಾಕ್ಷಿಗಳು ಮತ್ತು ಒಣ ದ್ರಾಕ್ಷಿಗಳು ಬೆಕ್ಕುಗಳಿಗೆ ತೀವ್ರ ವಿಷಕಾರಿ. ಇದರಿಂದ ಕಿಡ್ನಿ ವೈಫಲ್ಯ ಸಂಭವಿಸಬಹುದು. ಸಣ್ಣ ಪ್ರಮಾಣದಲ್ಲಿ ನೀಡಿದರೂ ಮಾರಕವಾಗಿ ಪರಿಣಮಿಸಬಹುದು.
ಕಡಲೆಗಳು
ಬಾದಾಮಿಗಳು, ವಾಲ್ನಟ್ಗಳು ಮತ್ತು ಪೀಕನ್ ಮರದ ಕಾಯಿಗಳು ಅತಿಯಾದ ಕೊಬ್ಬು ಮತ್ತು ಎಣ್ಣೆಮಯವಾಗಿರುತ್ತವೆ. ಈ ಅತಿಯಾದ ಕೊಬ್ಬುಗಳು ಬೆಕ್ಕುಗಳಲ್ಲಿ ಅತಿಸಾರ, ವಾಕರಿಕೆಗೆ ಕಾರಣವಾಗಬಹುದು. ಅಲ್ಲದೆ, ಮೇದೋಜೀರಕ ಗ್ರಂಥಿಯ ಉರಿಯೂತವೂ ಸಂಭವಿಸಬಹುದು.
ಈರುಳ್ಳಿಗಳು ಮತ್ತು ಬೆಳ್ಳುಳ್ಳಿಗಳು
ಈರುಳ್ಳಿಗಳು ಮತ್ತು ಬೆಳ್ಳುಳ್ಳಿಗಳ ಸೇವನೆಯಿಂದ ಜಠರಗರುಳಿನ ಸಮಸ್ಯೆ ಕಂಡುಬರಬಹುದು. ಅನೀಮಿಯ ಮತ್ತು ಕೆಂಪು ರಕ್ತ ಕಣದ ಹಾನಿಗೂ ಕಾರಣವಾಗಬಹುದು. ಬೆಕ್ಕುಗಳು ನಾಯಿಗಳಿಗಿಂತ ಹೆಚ್ಚು ಸುಲಭವಾಗಿ ರೋಗಕ್ಕೆ ತುತ್ತಾಗುತ್ತವೆ. ನಾಯಿಗಳೂ ಅತಿಯಾದ ಪ್ರಮಾಣದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಅಥವಾ ಚೀವ್ ತರಕಾರಿ ಸೇವಿಸಿದರೆ ಅನಾರೋಗ್ಯಕ್ಕೆ ಈಡಾಗಬಹುದು.
ಸಕ್ಕರೆ
ಸಕ್ಕರೆ ಮತ್ತು ಕ್ಸೈಲಿಟಾಲ್ ಬೆಕ್ಕುಗಳಿಗೆ ಹಾನಿಕರವಾಗಬಹುದು. ಕ್ಯಾಂಡಿ, ಚ್ಯೂಯಿಂಗ್ ಗಮ್, ಟೂತ್ಪೇಸ್ಟ್, ಕೇಕ್, ಕುಕೀಸ್ ಮತ್ತು ಬೇಕ್ ಮಾಡಿದ ಸರಕುಗಳಲ್ಲಿ ಕ್ಸೈಲಿಟಾಲ್ ಅನ್ನು ಸ್ವೀಟ್ನರ್ ಆಗಿ ಬಳಸಲಾಗುತ್ತದೆ. ಸಕ್ಕರೆ ಅಥವಾ ಕ್ಸೈಲಿಟಾಲ್ ಸೇವನೆಯಿಂದ ಇನ್ಸುಲಿನ್ ಬಿಡುಗಡೆಯಾಗುತ್ತದೆ. ಇದರಿಂದ ಲಿವರ್ (ಯಕೃತ್ತು) ವೈಫಲ್ಯವಾಗುವ ಸಾಧ್ಯತೆಯಿರುತ್ತದೆ. ಇನ್ಸುಲಿನ್ ಹೆಚ್ಚಾದಾಗ ನಿಮ್ಮ ಸಾಕುಪ್ರಾಣಿಯ ಸಕ್ಕರೆಯ ಪ್ರಮಾಣದಲ್ಲಿ ಕುಸಿತ ಸಂಭವಿಸಬಹುದು. ಅದನ್ನು ಹೈಪೊಗ್ಲೈಸೆಮಿಯ ಎಂದು ಹೇಳಲಾಗುತ್ತದೆ. ಕ್ಸೈಲಿಟಾಲ್ ವಿಷ ಸೇವನೆಯಾಗಿರುವ ಆರಂಭಿಕ ಚಿಹ್ನೆಗಳಲ್ಲಿ ವಾಂತಿ, ಸಮನ್ವಯದ ಕೊರತೆ ಮತ್ತು ಆಲಸ್ಯ ಕಂಡುಬರಬಹುದು. ಅವುಗಳು ನಂತರ ಕಂಪನ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು.
ಕೃಪೆ: indianexpress.com







