ಮಿಲ್ಕ್ ಚಾಕಲೇಟುಗಳಿಗಿಂತ ಡಾರ್ಕ್ ಚಾಕಲೇಟು ಆರೋಗ್ಯಕರವೆ?; ಇಲ್ಲಿದೆ ಮಾಹಿತಿ...

ಸಾಂದರ್ಭಿಕ ಚಿತ್ರ | Photo Credit : freepik
ಮಿಲ್ಕ್ ಚಾಕಲೇಟುಗಳು ಸಾಮಾನ್ಯವಾಗಿ ಶೇ 20-30 ರಷ್ಟು ಕೋಕಾ ಸಾಲಿಡ್ಗಳನ್ನು ಹೊಂದಿರುತ್ತದೆ. ಬಹುಪಾಲನ್ನು ಹಾಲಿನ ಅಂಶಗಳು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ.
ಈಸ್ಟರ್ ಚಾಕಲೇಟುಗಳು ಮಾರುಕಟ್ಟೆಗಳಲ್ಲಿ ರಾಶಿ ಬಿದ್ದಿವೆ. ಕೆಲವರು ಅಗ್ಗದ ಬೆಲೆಯಲ್ಲಿ ಮಿಲ್ಕ್ ಚಾಕಲೇಟುಗಳನ್ನು ಕೊಂಡರೆ, ಇನ್ನು ಕೆಲವರು ಆರೋಗ್ಯಕರ ಆಯ್ಕೆಯೆಂದು ದುಬಾರಿ ಡಾರ್ಕ್ ಚಾಕಲೇಟ್ ಗಳನ್ನು ಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಡಾರ್ಕ್ ಚಾಕಲೇಟು ಆರೋಗ್ಯಕರವೆ?
ಹೋಲಿಕೆ ಮಾಡುವುದು ಹೇಗೆ?
ಎಲ್ಲಾ ಚಾಕಲೇಟು ತಯಾರಿಕೆಯ ಹಿಂದೆ ಕೋಕಾ ಬೀನ್ ಇರುತ್ತದೆ. ಕೋಕಾ ಬೀನ್ಗಳು ಥಿಯಿಬ್ರೋಮಾ ಕಕಾವೊ ಮರದ ಬೀಜಗಳು. ಈ ಮರಗಳು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತವೆ. ಬೀನ್ ಸಂಸ್ಕರಿಸುವ ಮೂಲಕ ಕೋಕಾ ಸಾಲಿಡ್ಗಳು (ಕಹಿ ಭಾಗ) ಮತ್ತು ಕೋಕಾ ಬಟರ್ (ಮೃದು ಭಾಗದ ರಚನೆ) ಸಿಗುತ್ತವೆ. ಚಾಕಲೇಟುಗಳನ್ನು ಕೋಕಾ ಸಾಲಿಡ್ಗಳು, ಕೋಕಾ ಬಟರ್ ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಮಿಲ್ಕ್ ಚಾಕಲೇಟ್ಗಳಲ್ಲಿ ಮಿಲ್ಕ್ ಪೌಡರ್ ಮತ್ತು ಕಂಡೆನ್ಸ್ಡ್ ಮಿಲ್ಕ್ ಇರುತ್ತದೆ. ಡಾರ್ಕ್ ಚಾಕಲೇಟುಗಳು ಇನ್ನಷ್ಟು ಅಧಿಕ ಪ್ರಮಾಣದ ಕೋಕಾ ಸಾಲಿಡ್ಗಳನ್ನು ಅಂದರೆ ಶೇ 50-90 ರಷ್ಟು ಹೊಂದಿರುತ್ತವೆ. ಮಿಲ್ಕ್ ಚಾಕಲೇಟುಗಳು ಸಾಮಾನ್ಯವಾಗಿ ಶೇ 20-30 ರಷ್ಟು ಕೋಕಾ ಸಾಲಿಡ್ಗಳನ್ನು ಹೊಂದಿರುತ್ತದೆ. ಬಹುಪಾಲನ್ನು ಹಾಲಿನ ಅಂಶಗಳನ್ನು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ.
ಪೌಷ್ಠಿಕಾಂಶದ ಲಾಭಗಳೇನು?
ಡಾರ್ಕ್ ಚಾಕಲೇಟುಗಳಲ್ಲಿ ಮಿಲ್ಕ್ ಚಾಕಲೇಟುಗಳಿಗಿಂತ ಹೆಚ್ಚು ಕೋಕಾ ಸಾಲಿಡ್ಗಳಿರುತ್ತವೆ. ಹೀಗಾಗಿ ನಿರ್ದಿಷ್ಟ ಖನಿಜಗಳನ್ನು ಹೆಚ್ಚು ಕೊಡುತ್ತದೆ. ಪ್ರತಿ 20 ಗ್ರಾಂಗಳಲ್ಲಿ ಮಿಲ್ಕ್ ಚಾಕಲೇಟ್ಗಳು ಶೇ 30ರಷ್ಟು ಕೋಕಾ ಮತ್ತು ಡಾರ್ಕ್ ಚಾಕಲೇಟು ಶೇ 60ರಷ್ಟು ಕೋಕಾ ಹೊಂದಿರುತ್ತವೆ. ಹೀಗಾಗಿ ಡಾರ್ಕ್ ಚಾಕಲೇಟ್ಗಳು ಮೆಗ್ನೇಸಿಯಂ, ಕಬ್ಬಿಣ ಮತ್ತು ಸತುವನ್ನು ಹೊಂದಿರುತ್ತದೆ. ಅದರಲ್ಲಿ ಕೆಫೀನ್ ಕೂಡ ಹೆಚ್ಚಿರುತ್ತದೆ.
ಮಿಲ್ಕ್ ಚಾಕಲೇಟುಗಳಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ ಮತ್ತು ಸಕ್ಕರೆ ಪ್ರಮಾಣ ಸೇರಿಸಲಾಗಿರುತ್ತದೆ. ಕೋಕಾ ಸಸ್ಯ ಸಂಯುಕ್ತಗಳಾದ ಪಾಲಿಫೀನಾಲ್ಸ್ನಿಂದ ಸಮೃದ್ಧವಾಗಿರುತ್ತದೆ. ಇವು ದೇಹದಲ್ಲಿ ಆ್ಯಂಟಿ ಆಕ್ಸಿಡಂಟ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಜೀವಕೋಶಗಳ ನಷ್ಟದಿಂದ ಕಾಪಾಡುತ್ತವೆ.
ಡಾರ್ಕ್ ಚಾಕಲೇಟುಗಳಲ್ಲಿ ಹೆಚ್ಚು ಕೋಕಾ ಇರುವುದರಿಂದ ಮಿಲ್ಕ್ ಚಾಕಲೇಟಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚು ಫ್ಲಾವನಾಲ್ಗಳನ್ನು ಹೊಂದಿರುತ್ತದೆ.
ಡಾರ್ಕ್ ಚಾಕಲೇಟ್ ಆರೋಗ್ಯಕರವೆ?
ಹೃದಯದ ಆರೋಗ್ಯದ ಬಗ್ಗೆ ಸಂಶೋಧನೆಗಳ ಪ್ರಕಾರ ಕೋಕಾ ಫ್ಲಾವನಾಲ್ಗಳು ರಕ್ತನಾಳಗಳನ್ನು ಆರಾಮವಾಗಿಡಲು ಮತ್ತು ರಕ್ತದ ಹರಿವು ಚೆನ್ನಾಗಿರಲು ಬೆಂಬಲಿಸುತ್ತವೆ. ಚಿಕಿತ್ಸಾತ್ಮಕ ಅಧ್ಯಯನದಲ್ಲಿ ಡಾರ್ಕ್ ಚಾಕಲೇಟುಗಳು ರಕ್ತದಲ್ಲಿನ ಒತ್ತಡದ ಪ್ರಮಾಣವನ್ನು ಕಡಿಮೆ ಮಾಡಿರುವುದು ಸಾಬೀತಾಗಿದೆ. ಆದರೆ ಈ ಬಹುತೇಕ ಅಧ್ಯಯನಗಳಲ್ಲಿ ಅಧಿಕ ಪ್ರಮಾಣದ ಫ್ಲಾವನಾಲ್ಗಳಿರುವ ಕೋಕಾ ಸಾರಗಳನ್ನು ಬಳಸಲಾಗಿದೆ. ಇತರ ಅಧ್ಯಯನಗಳು ವಿಶೇಷ ಚಾಕಲೇಟುಗಳನ್ನು ಬಳಸಿವೆಯೇ ವಿನಾ ಸೂಪರ್ ಮಾರ್ಕೆಟ್ನಲ್ಲಿ ದೊರೆಯುವ ಈಸ್ಟರ್ ಹಬ್ಬದ ಚಾಕಲೇಟುಗಳಲ್ಲ.
ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಅಧ್ಯಯನಗಳ ಅಧ್ಯಯನವು ಡಾರ್ಕ್ ಚಾಕಲೇಟುಗಳಿಂದ ಹೃದಯದ ರೋಗಗಳು ಕಡಿಮೆಯಾಗಿರುವುದು, ಪಾರ್ಶ್ವವಾಯು ಮತ್ತು ಮಧುಮೇಹಿಗಳಿಗೆ ಉತ್ತಮ ಎಂದು ಕಂಡುಬಂದಿದೆ.
ಡಾರ್ಕ್ ಚಾಕಲೇಟಿನಲ್ಲಿ ಕಡಿಮೆ ಸಕ್ಕರೆ ಇದೆಯೆ?
ಡಾರ್ಕ್ ಚಾಕಲೇಟು ಆರೋಗ್ಯಕರ ಎನ್ನುವುದು ಸಂಪೂರ್ಣ ಸರಿಯಲ್ಲ. ಕೆಲವು ಡಾರ್ಕ್ ಚಾಕಲೇಟುಗಳಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇರುತ್ತದೆ. ಈಸ್ಟರ್ ಹಬ್ಬದ 150 ಗ್ರಾಂ ಡಾರ್ಕ್ ಚಾಕಲೇಟ್ನಲ್ಲಿ ಶೇ 50ರಷ್ಟು ಸಕ್ಕರೆ ಇರುತ್ತದೆ. 90 ಚಮಚಗಳಷ್ಟು ಸಕ್ಕರೆ ಸೇರಿಸಿರಬಹುದು. ಈಸ್ಟರ್ ಮೊಟ್ಟೆಗಳಿಗೂ ಇದು ಅನ್ವಯಿಸುತ್ತದೆ. ಸೂಪರ್ ಮಾರ್ಕೆಟ್ಗಳಲ್ಲಿ ಕೆಲವು ಡಾರ್ಕ್ ಚಾಕಲೇಟ್ ಈಸ್ಟರ್ ಮೊಟ್ಟೆಗಳು ಹೆಚ್ಚು ಸಕ್ಕರೆ ಅಂಶದೊಂದಿಗೆ ಮಾರಾಟವಾಗುತ್ತವೆ.
ಈಸ್ಟರ್ ಹಬ್ಬಕ್ಕೆ ಏನನ್ನು ಆಯ್ಕೆ ಮಾಡಬೇಕು?
ಡಾರ್ಕ್ ಚಾಕಲೇಟುಗಳಲ್ಲಿ ಮಿಲ್ಕ್ ಚಾಕಲೇಟುಗಳಿಗಿಂತ ಹೆಚ್ಚು ಉತ್ತಮ ಪೌಷ್ಠಿಕಾಂಶಗಳಿವೆ. ಆದರೆ ಕೋಕಾ ಪ್ರಮಾಣವನ್ನು ಅನುಸರಿಸಿದೆ. ಶೇ 70ರಷ್ಟು ಅಥವಾ ಹೆಚ್ಚು ಕೋಕಾ ಇದ್ದರೆ ಉತ್ತಮ ಗುಣಮಟ್ಟದ ಡಾರ್ಕ್ ಚಾಕಲೇಟು ಆಗಿರುತ್ತದೆ. ಉತ್ತಮ ಗುಣಮಟ್ಟದ ಡಾರ್ಕ್ ಚಾಕಲೇಟುಗಳಲ್ಲಿ ಕೋಕಾ ಮಾಸ್, ಕೋಕಾ ಪೌಡರ್, ಕೋಕಾ ಬಟರ್, ಸಕ್ಕರೆ, ವೆನಿಲ್ಲಾ ಪ್ರಮಾಣ ಹೆಚ್ಚಿರುತ್ತದೆ.
ಕಡಿಮೆ ಗುಣಮಟ್ಟದ ಡಾರ್ಕ್ ಚಾಕಲೇಟುಗಳಲ್ಲಿ ಸಕ್ಕರೆ, ಕೋಕಾ ಮಾಸ್, ಕೋಕಾ ಬಟರ್, ಎಮಲ್ಸಿಫೈಯರ್, ಫ್ಲೇವರ್ ಮತ್ತು ಮಿಲ್ಕ್ ಸಾಲಿಡ್ಗಳಿರುತ್ತವೆ.
ಕೃಪೆ: indianexpress.com






