ಬಾಯಿ ಚಪ್ಪರಿಸಿ ಸೇವಿಸುವ ಈ ಐದು ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೇ?!

ಸಾಂದರ್ಭಿಕ ಚಿತ್ರ | Photo Credit ; PTI
ಇತ್ತೀಚೆಗೆ ಪೌಷ್ಠಿಕ ತಜ್ಞರೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ವಿವರಿಸಿರುವ ಪ್ರಕಾರ ಎನರ್ಜಿ ಡ್ರಿಂಕ್ಗಳು, ಡಿಟಾಕ್ಸ್ ಪಾನೀಯಗಳು ಆರೋಗ್ಯಕರವಲ್ಲ. ಇವುಗಳನ್ನು ತ್ಯಜಿಸುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ!
ಪೌಷ್ಠಿಕ ತಜ್ಞೆ ಮತ್ತು ಲೇಖಕಿಯಾಗಿರುವ ಅಮಿತಾ ಗಾಡ್ರೆ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಾವು ತ್ಯಜಿಸಿರುವ ಐದು ಆಹಾರಗಳ ಬಗ್ಗೆ ವಿವರ ನೀಡಿದ್ದಾರೆ.
ಅವರು ಹೇಳುವ ಪ್ರಕಾರ,
ಮೊದಲನೆಯದಾಗಿ ಎನರ್ಜಿ ಡ್ರಿಂಕ್ಗಳನ್ನು ಸೇವಿಸುವುದಿಲ್ಲ. ಏಕೆಂದರೆ ಅದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೆಫೈನ್ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ಕೆಫೈನ್ ಸೇವನೆ ಆರೋಗ್ಯಕ್ಕೆ ಒಳಿತಲ್ಲ.
ಎರಡನೆಯದಾಗಿ, “ಡಿಟಾಕ್ಸ್ ಜ್ಯೂಸ್ಗಳು ಅಥವಾ ತರಕಾರಿ ಜ್ಯೂಸ್ಗಳು ಅಥವಾ ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದಿಲ್ಲ. ಏಕೆಂದರೆ ನನಗೆ ನನ್ನ ಕಿಡ್ನಿಗಳು (ಮೂತ್ರಪಿಂಡಗಳು) ಇಷ್ಟ. ನನ್ನ ಕಿಡ್ನಿಗಳ ಮೇಲೆ ಹೆಚ್ಚುವರಿ ಆಕ್ಸಲೇಟ್ ಲೊಡ್ಗಳನ್ನು ಹೇರಲು ಬಯಸುವುದಿಲ್ಲ. ಅದೇ ಕಾರಣಕ್ಕಾಗಿ ನಾನು ಡಿಟಾಕ್ಸ್ ಪಾನೀಯಗಳು ಮತ್ತು ತರಕಾರಿ ಪಾನೀಯಗಳನ್ನು ಕೂಡ ಸೇವಿಸುವುದಿಲ್ಲ. ಮತ್ತು ನಾನು ಹಣ್ಣಿನ ರಸಗಳನ್ನೂ ಸೇವಿಸುವುದಿಲ್ಲ. ಬೇಕೆಂದರೆ ಹಣ್ಣನ್ನೇ ತಿನ್ನುತ್ತೇನೆ” ಎನ್ನುತ್ತಾರೆ ಅಮಿತಾ.
ಮೂರನೆಯದಾಗಿ, “ಕೆಂಪು ಬಣ್ಣ ಇರುವ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹಸಿರು ತರಕಾರಿಗಳಿಗೆ ಕೆಂಪು ಬಣ್ಣವಿದ್ದರೂ ಸಹ ತ್ಯಜಿಸುತ್ತೇನೆ. ಅವುಗಳೆಲ್ಲವೂ ಬಣ್ಣ ಬೆರೆಸಿರುವುದಾಗಿರುತ್ತದೆ. ಕೇಕ್ಗಳು ಮತ್ತು ಆಹಾರಗಳ ಮೇಲೂ ಕೆಂಪು ಬಣ್ಣ ಇರುತ್ತದೆ. ಚಿಕನ್ ಲಾಲಿಪಪ್ಗಳ ಮೇಲೂ ಬಣ್ಣವಿರುತ್ತವೆ. ಹೀಗೆ ಬಣ್ಣ ಬೆರೆಸಿದ ಆಹಾರವನ್ನು ನಾನು ಎಂದಿಗೂ ಸೇವಿಸುವುದಿಲ್ಲ.”
ನಾಲ್ಕನೆಯದಾಗಿ, “ಕುರುಕುರುಲು ತಿನಿಸುಗಳನ್ನು ಸೇವಿಸುವುದಿಲ್ಲ. ಮಿಕ್ಸ್ಚರ್ಗಳು, ಸೋಂಟೆಗಳು, ಚಕ್ಕುಲಿಗಳು ಅಥವಾ ಮುರುಕುಗಳು, ಬುಜಿಯಾಗಳು ಇರಬಹುದು, ಅವುಗಳನ್ನು ತ್ಯಜಿಸುತ್ತೇನೆ. ಏಕೆಂದರೆ, ಇವುಗಳಲ್ಲಿ ಹೆಚ್ಚು ಟ್ರಾನ್ಸ್ ಕೊಬ್ಬುಗಳು ಇಲ್ಲ ಎಂದು ಕಂಡುಬಂದರೂ ಈ ಉತ್ಪನ್ನಗಳು ಹೃದಯದ ಮೇಲೆ ಹೆಚ್ಚಿನ ಹೊರೆ ನೀಡುತ್ತದೆ. ನನಗೆ ನನ್ನ ಹೃದಯ ಎಂದರೆ ಇಷ್ಟ, ನನ್ನ ಹೃದಯದ ರಕ್ತ ನಾಳಗಳ ಮೇಲೆ ಹೆಚ್ಚುವರಿ ಪದರಗಳು ರೂಪುಗೊಳ್ಳುವುದು ನನಗೆ ಬೇಕಾಗಿಲ್ಲ” ಎನ್ನುತ್ತಾರೆ.
ಐದನೆಯದಾಗಿ, “ನಾನು ತಾಜಾ ಕ್ರೀಮ್ಗಳು ಅಥವಾ ವಿಪ್ಡ್ ಕ್ರೀಮ್ಗಳನ್ನು (ಹಾಲಿನ ಕೆನೆ) ಹೊಂದಿರುವ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹೈನುಗಾರಿಕಾ ಉತ್ಪನ್ನಗಳಲ್ಲಿರುವ ಕ್ರೀಮ್ಗಳು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ವಿಪ್ಡ್ ಟಾಪಿಂಗ್ ಕ್ರೀಮ್ಗಳಲ್ಲಿ ವ್ಯತ್ಯಾಸವಿದೆ. ಜೊತೆಗೆ ಯಾವುದೇ ಕೋಲ್ಡ್ ಕಾಫಿಗಳು ಅಥವಾ ಐಸ್ ಕ್ರೀಮ್ಗಳು ಅಥವಾ ಪೇಸ್ಟ್ರಿಗಳು ಮತ್ತು ಡೆಸರ್ಟ್ಗಳನ್ನು ಸೇವಿಸುವುದಿಲ್ಲ. ಏಕೆಂದರೆ ಅವುಗಳ ಮೇಲಿರುವ ವಿಪ್ಡ್ ಕ್ರೀಮ್ಗಳು ತಾಳೆ ಎಣ್ಣೆಯಿಂದ ತಯಾರಾಗುತ್ತವೆ. ಹೀಗಾಗಿ ಅವುಗಳನ್ನು ಸೇವಿಸುವುದಿಲ್ಲ” ಎನ್ನುತ್ತಾರೆ ಅಮಿತಾ.







