Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಆರೋಗ್ಯ ವಲಯ : ಕಳೆದುಕೊಂಡದ್ದು,...

ಆರೋಗ್ಯ ವಲಯ : ಕಳೆದುಕೊಂಡದ್ದು, ಪಡೆದುಕೊಳ್ಳಲಿರುವುದು...

ಡಾ. ಶ್ರೀನಿವಾಸ ಕಕ್ಕಿಲ್ಲಾಯಡಾ. ಶ್ರೀನಿವಾಸ ಕಕ್ಕಿಲ್ಲಾಯ1 Jan 2026 12:45 PM IST
share
ಆರೋಗ್ಯ ವಲಯ : ಕಳೆದುಕೊಂಡದ್ದು, ಪಡೆದುಕೊಳ್ಳಲಿರುವುದು...
2025 ಹಿನ್ನೋಟ - 2026 ಮುನ್ನೋಟ

ಮೂಲ ಸೌಕರ್ಯ ವಿಸ್ತರಣೆಯ ಗತಿಯೂ ಭಿನ್ನವಾಗಿಲ್ಲ. ಸ್ಥಳೀಯ ಮಟ್ಟದಲ್ಲೇ ಕ್ಯಾನ್ಸರ್ ಚಿಕಿತ್ಸೆಗೆ 439 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಇವುಗಳಲ್ಲಿ ಹೆಚ್ಚಿನ ಕಡೆ ಕ್ಯಾನ್ಸರ್ ಚಿಕಿತ್ಸಾ ತಜ್ಞರಾಗಲಿ, ನುರಿತ ದಾದಿಯರಾಗಲಿ ಲಭ್ಯವಿಲ್ಲ. ಇವನ್ನು ಸುದ್ದಿ ಮಾಡುವಾಗ ಸಾರ್ವಜನಿಕ ಆರೋಗ್ಯ ಸೇವೆಗಳ ದುಸ್ಥಿತಿಯ ಬಗ್ಗೆ ಹೇಳುವವರು ಕೇಳುವವರು ಇಲ್ಲವೆಂಬಂತಾಗಿದೆ. ಸುಮಾರು 2,500 (ಶೇ.8) ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರೇ ಒಬ್ಬ ಎಂಬಿಬಿಎಸ್ ವೈದ್ಯರಿಲ್ಲ, ಶೇ.60ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 20-30 ಸಾವಿರ ಜನರಿಗೆ ಒಬ್ಬರೇ ಎಂಬಿಬಿಎಸ್ ವೈದ್ಯರು ಲಭ್ಯರಿದ್ದು, ಅವರೇನಾದರೂ ರಜೆಗೆ, ಸಭೆಗೆಂದು ಹೋದರೆ ಅಲ್ಲೂ ಯಾರೂ ಇರುವುದಿಲ್ಲ.

ಈ ಕಳೆದ ವರ್ಷದಲ್ಲಿ ದೇಶದ ಆರೋಗ್ಯ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ಓದಿದ್ದನ್ನು, ನೋಡಿದ್ದನ್ನು ನೆನಪಿಸಿಕೊಂಡು ಬರೆದರೆ ಸರಕಾರ ವಿರೋಧಿ ಪೂರ್ವಗ್ರಹ ಪೀಡಿತನೆಂಬ ಟೀಕೆಗಳು ಬರುವುದು ಖಂಡಿತವಿರುವುದರಿಂದ ಈ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಆದದ್ದೇನು, ಹೋದದ್ದೇನು ಎಂದು ಕೃತಕ ಬುದ್ಧಿಯನ್ನು ಕೇಳಿ ಇದನ್ನು ಬರೆಯಲಾಗಿದೆ. ಈ ಕೃತಕ ಬುದ್ಧಿಗೆ ಕೃತ್ರಿಮ ಬುದ್ಧಿ ಇಲ್ಲದಿರುವುದರಿಂದ ಅವು ಹೇಳಿದ್ದು ಒಪ್ಪಿಗೆಯಾದೀತೇನೋ?

ಈ ಕೃತಕ ಬುದ್ಧಿಯ ಯಂತ್ರಗಳಿಗೆ ಕಂಡ ಒಳಿತುಗಳು, ಅವುಗಳ ಭಾಷೆಯಲ್ಲೇ, ಇವಿಷ್ಟು: ಗಣಕೀಕರಣದ ಕ್ರಾಂತಿ, ಮೂಲ ಸೌಕರ್ಯಗಳ ವಿಸ್ತರಣೆ, ವೈದ್ಯಕೀಯ ಶಿಕ್ಷಣದ ಉತ್ಕರ್ಷ, ಹಿರಿವಯಸ್ಕರಿಗೆ ಸಾರ್ವತ್ರಿಕ ಆರೋಗ್ಯ ಸೇವೆ, ಹೊಸ ಜಿಎಲ್ಪಿ-1 ಔಷಧ ಲಭ್ಯ, 36 ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ, ಆರೋಗ್ಯ ವಿಮೆಗೆ ಜಿಎಸ್ಟಿ ಇಳಿಕೆ. ಕೃತಕ ಬುದ್ಧಿಗೆ ಕಂಡ ಈ ಸಾಧನೆಗಳಲ್ಲಿ ನಮ್ಮ ಜನರಿಗೆ ಸಿಕ್ಕಿದ್ದೆಷ್ಟು ಸಿಕ್ಕದ್ದೆಷ್ಟು ಎಂಬುದನ್ನು ಜನರೇ ಹೇಳಬೇಕು.

ಈ ಕೃತಕ ಬುದ್ಧಿಗೆ ತೋರಿದ್ದನ್ನೇ ನೋಡೋಣ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಅಡಿಯಲ್ಲಿ 79 ಕೋಟಿ ಜನರ ಗಣಕೀಕೃತ ದಾಖಲೆಗಳನ್ನು ಸೃಷ್ಟಿಸಲಾಗಿದೆಯಂತೆ, ಇದರಿಂದ ಆಸ್ಪತ್ರೆಗಳ ನಡುವೆ ಇವರ ಮಾಹಿತಿಯನ್ನು ಯಾವುದೇ ಅಡೆತಡೆಗಳಿಲ್ಲದೆ ಹಂಚಲು ಸಾಧ್ಯವಾಗಲಿದೆಯಂತೆ. ಇದೂ ಒಂದು ಸಾಧನೆ! ಕೊರೋನ ಲಸಿಕೆ ಕೊಟ್ಟಾಗಲೇ ಯಾರ ಅನುಮತಿಯನ್ನೂ ಪಡೆಯದೆಯೇ, ಹೇಳದೆಯೇ ಕೇಳದೆಯೇ ಅನೇಕರಿಗೆ ಆಯುಷ್ಮಾನ್ ಭಾರತ ಆರೋಗ್ಯ ಖಾತೆ (ಎಬಿಎಚ್ಎ) ಎಂಬ ಹೆಲ್ತ್ ಐಡಿ ಸೃಷ್ಟಿಸಲಾಗಿತ್ತು. ಈ ಎಬಿಎಚ್ಎ ಐಚ್ಛಿಕವಾಗಿದೆ (ಕೊರೋನ ಲಸಿಕೆಯೂ ಐಚ್ಛಿಕವೇ ಇತ್ತು!) ಎಂದು ಹೇಳಿಕೊಂಡೇ ಅದನ್ನೀಗ ಬೇರೆ ಬೇರೆ ಉಪಾಯಗಳಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ಹೇರಲಾಗುತ್ತಿದೆ. ಈ ಎಬಿಎಚ್ಎ ದಾಖಲೆಗಳ ನಿರ್ವಹಣೆ ಮತ್ತು ಗೋಪ್ಯತೆಗಳ ರಕ್ಷಣೆಗೆ ಗಣಕೀಕೃತ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ (ಡಿಪಿಡಿಪಿ ಕಾಯಿದೆ) ಮತ್ತು ನಿಯಮಗಳು ಹಾಗೂ ಎಬಿಡಿಎಂ ಆರೋಗ್ಯ ದತ್ತಾಂಶ ನಿರ್ವಹಣಾ ನೀತಿಗಳನ್ನು ತರಲಾಗಿದ್ದರೂ, ಇವನ್ನು ಜನರ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಜಾರಿಗೊಳಿಸುವ ಬಗ್ಗೆ ಸಂದೇಹಗಳೇ ಇವೆ. ಇವಕ್ಕೆ ಸಂಬಂಧಿಸಿದ ಆ್ಯಪ್ಗಳಲ್ಲಿ ದತ್ತಾಂಶಗಳನ್ನು ಪಡೆಯಲು ಬೇರೆ ಬೇರೆ ಉಪಾಯಗಳಿಂದ ಒಪ್ಪಿಗೆ ಪಡೆಯುವುದು, ಸರಕಾರಿ ಮತ್ತು ಖಾಸಗಿ ಆರೋಗ್ಯ ಸೇವೆಗಳಲ್ಲಿ ಎಬಿಎಚ್ಎ ಐಡಿಯನ್ನು ಕಡ್ಡಾಯವಾಗಿ ಪಡೆಯುವಂತೆ ಒತ್ತಡ ಹಾಕುವುದು, ವ್ಯಕ್ತಿಯ ಆರೋಗ್ಯ ಮಾಹಿತಿಯನ್ನು ವಿಮೆ, ಸಾಲ ಮುಂತಾದವನ್ನು ನೀಡಿರುವ ಸಂಸ್ಥೆಗಳು ಪಡೆಯುವ ಅಪಾಯಗಳಿರುವುದು, ಔಷಧ ಕಂಪೆನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಪಡೆದು ಬಳಸುವುದು, ಆ್ಯಪ್ಗಳಲ್ಲಿ ದತ್ತಾಂಶ ಸೋರಿಕೆಯಾಗುವುದು ಇವೇ ಮುಂತಾದ ಸಮಸ್ಯೆಗಳು ಹಾಗೂ ಆತಂಕಗಳು ಇನ್ನೂ ಹಾಗೆಯೇ ಉಳಿದಿವೆ. ಈ ‘ಸಾಧನೆ’ಯಿಂದ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗುವಾಗ ತಮ್ಮ ಕಡತಗಳನ್ನು ಒಯ್ಯುವ ಕೆಲಸ ಇಲ್ಲವಾಗಬಹುದೇನೋ ಎಂಬುದನ್ನು ಬಿಟ್ಟರೆ ಬೇರೇನು ಪಡೆಯಲಿದ್ದಾರೆ ಎಂದು ಹೇಳಲಾಗದು, ಆದರೆ ತಮ್ಮ ಆರೋಗ್ಯದ ಮಾಹಿತಿಯನ್ನು ಕಳೆದುಕೊಂಡು ಬಗೆಬಗೆಯ ಕಷ್ಟಗಳಿಗೂ, ಮುಜುಗರಗಳಿಗೂ ಈಡಾಗಬಹುದೆನ್ನುವುದನ್ನು ಅಲ್ಲಗಳೆಯಲಾಗದು.

ಮೂಲ ಸೌಕರ್ಯ ವಿಸ್ತರಣೆಯ ಗತಿಯೂ ಭಿನ್ನ

ವಾಗಿಲ್ಲ. ಸ್ಥಳೀಯ ಮಟ್ಟದಲ್ಲೇ ಕ್ಯಾನ್ಸರ್ ಚಿಕಿತ್ಸೆಗೆ 439 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಇವುಗಳಲ್ಲಿ ಹೆಚ್ಚಿನ ಕಡೆ ಕ್ಯಾನ್ಸರ್ ಚಿಕಿತ್ಸಾ ತಜ್ಞರಾಗಲಿ, ನುರಿತ ದಾದಿಯರಾಗಲಿ ಲಭ್ಯವಿಲ್ಲ. ಇವನ್ನು ಸುದ್ದಿ ಮಾಡುವಾಗ ಸಾರ್ವಜನಿಕ ಆರೋಗ್ಯ ಸೇವೆಗಳ ದುಸ್ಥಿತಿಯ ಬಗ್ಗೆ ಹೇಳುವವರು ಕೇಳುವವರು ಇಲ್ಲವೆಂಬಂತಾಗಿದೆ. ಸುಮಾರು 2,500 (ಶೇ.8) ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರೇ ಒಬ್ಬ ಎಂಬಿಬಿಎಸ್ ವೈದ್ಯರಿಲ್ಲ, ಶೇ.60ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 20-30 ಸಾವಿರ ಜನರಿಗೆ ಒಬ್ಬರೇ ಎಂಬಿಬಿಎಸ್ ವೈದ್ಯರು ಲಭ್ಯರಿದ್ದು, ಅವರೇನಾದರೂ ರಜೆಗೆ, ಸಭೆಗೆಂದು ಹೋದರೆ ಅಲ್ಲೂ ಯಾರೂ ಇರುವುದಿಲ್ಲ. ಒಟ್ಟಾರೆಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಹುದ್ದೆಗಳಲ್ಲಿ ಶೇ.24ರಷ್ಟು ಖಾಲಿಯಾಗಿಯೇ ಇವೆ, ಅದರಲ್ಲೂ ಛತ್ತೀಸಗಡ (ಶೇ.70), ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಧ್ಯ ಪ್ರದೇಶಗಳಲ್ಲಿ ಈ ಸಮಸ್ಯೆಯು ತೀವ್ರವಾಗಿದ್ದರೆ ಕೇರಳ, ತಮಿಳುನಾಡು, ರಾಜಸ್ಥಾನಗಳಲ್ಲಿ ವೈದ್ಯರ ಕೊರತೆಯು ಶೇ.10ಕ್ಕಿಂತ ಕಡಿಮೆಯಿದೆ. ದೇಶದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸಕರ ಹುದ್ದೆಗಳಲ್ಲಿ ಶೇ.83, ವೈದ್ಯಕೀಯ ತಜ್ಞರಲ್ಲಿ ಶೇ. 82, ಶಿಶು ತಜ್ಞರಲ್ಲಿ ಶೇ. 81, ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞರಲ್ಲಿ ಶೇ. 74ರಷ್ಟು ಕೊರತೆಯಿದೆ. ಕರ್ನಾಟಕದಲ್ಲಿ 1,200 ತಜ್ಞ ವೈದ್ಯರ ಹುದ್ದೆಗಳಲ್ಲಿ 744, ಎಂಬಿಬಿಎಸ್ ವೈದ್ಯರ 2,310 ಹುದ್ದೆಗಳಲ್ಲಿ 200ರಿಂದ 600, ದಾದಿಯರು, ಪ್ರಯೋಗಾಲಯ ಸಿಬ್ಬಂದಿ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ 69,915 ಹುದ್ದೆಗಳಲ್ಲಿ 32,000 ಹುದ್ದೆಗಳು ಖಾಲಿಯಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿಯಿವೆ. ಕರ್ನಾಟಕದ ವರದಿಗಳನುಸಾರ ಈ ಸಾರ್ವಜನಿಕ ಸೇವೆಗಳ ವೈದ್ಯರ ಶೇ.40ರಷ್ಟು ಸಮಯವು ರೋಗಿಗಳ ಆರೈಕೆಯ ಬದಲಿಗೆ ಗಣಕೀಕರಣದ ಎಬಿಎಚ್ಎ ದಾಖಲೆಗಳನ್ನು ಭರ್ತಿ ಮಾಡುವುದಕ್ಕೇ ವಿನಿಯೋಗವಾಗುತ್ತಿದೆ. ನಮ್ಮ ದೇಶದಲ್ಲಿ ತುರ್ತು ಚಿಕಿತ್ಸೆಯ ಸೌಲಭ್ಯಗಳು ಮತ್ತು ಆಂಬುಲೆನ್ಸ್ ಸೇವೆಗಳ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ದಿನಕ್ಕೆ 25,000, ವರ್ಷಕ್ಕೆ 90 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವು ಒಟ್ಟು ಸಾವುಗಳ ಮೂರನೇ ಒಂದರಷ್ಟು ಆಗುತ್ತವೆ. ಇವನ್ನೆಲ್ಲ ನೋಡುವಾಗ ಸರಕಾರದ ಹೇಳಿಕೆಗಳು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಮುಡಿದು ಹತ್ತಿಪ್ಪತ್ತು ಫೋಟೊಗ್ರಾಫರ್ಗಳ ಮುಂದೆ ಪ್ರತಿನಿತ್ಯ ನಿಲ್ಲುವ ನಾಟಕದಂತೆ ಕಾಣುತ್ತವೆ.

ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಹೊಗಳಿಕೊಳ್ಳುತ್ತಿರುವ ಸರಕಾರವು ಅದರಡಿಯಲ್ಲಿ ಚಿಕಿತ್ಸೆ ನೀಡಿರುವ ಆಸ್ಪತ್ರೆಗಳಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಪಾವತಿಸಲು ಬಾಕಿಯಿದೆ, ನಿಯಮಾನುಸಾರ 15 ದಿನಗಳಲ್ಲಿ ಕೊಡಬೇಕಾಗಿರುವುದನ್ನು ಎಂಟೊಂಬತ್ತು ತಿಂಗಳಾದರೂ ಕೊಡದೇ ಬಿಡಲಾಗಿದೆ. ಭಾರತೀಯ ಸೇನೆಯ ಬಗ್ಗೆ ಭಾವನಾತ್ಮಕವಾಗಿ ಉದ್ದುದ್ದ ಮಾತಾಡುತ್ತಲೇ ನಿವೃತ್ತ ಸೈನಿಕರ ಆರೋಗ್ಯ ಸೇವೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಆರು ಸಾವಿರ ಕೋಟಿ ಹಣವನ್ನು ಬಾಕಿಯುಳಿಸಿದೆ. ಕಾರ್ಮಿಕರ ವಿಮಾ ನಿಧಿಯಡಿಯಲ್ಲೂ ಆಸ್ಪತ್ರೆಗಳಿಗೆ ಕೆಲವು ರಾಜ್ಯಗಳಲ್ಲಿ 400ರಿಂದ 500 ಕೋಟಿ ಕೊಡಬೇಕಿದೆ. ಹೀಗೆ ಲಕ್ಷಗಟ್ಟಲೆ ಕೋಟಿ ಬಾಕಿಯಿರುವುದರಿಂದಾಗಿ ಖಾಸಗಿ ಆಸ್ಪತ್ರೆಗಳು ಈ ಯೋಜನೆಗಳ ಫಲಾನುಭವಿಗಳಿಗೆ ಏನೇನೋ ನೆಪವೊಡ್ಡಿ ಚಿಕಿತ್ಸೆ ನೀಡುವುದನ್ನು ನಿರಾಕರಿಸುತ್ತಿವೆ. ಈ ವರ್ಷದ ಬೊಬ್ಬೆಯಾಗಿರುವ ಹಿರಿಯ ನಾಗರಿಕರ ಆರೋಗ್ಯ ಸೇವೆಯ ವಯ್ ವಂದನಾ ಯೋಜನೆಯಡಿಯಲ್ಲಿ 90 ಲಕ್ಷಕ್ಕೂ ಹೆಚ್ಚು ನೋಂದಣಿ ಪತ್ರಗಳನ್ನು ನೀಡಲಾಗಿದ್ದರೂ ಚಿಕಿತ್ಸೆ ದೊರೆಯುವ ಖಾತರಿ

ಇಲ್ಲದಾಗಿದೆ.

ತಾನೇ ಪ್ರಕಟಿಸಿದ ಆರೋಗ್ಯ ನೀತಿಯಲ್ಲಿ 2025ರ ವೇಳೆಗೆ ಆರೋಗ್ಯ ಸೇವೆಗಳಿಗೆ ರಾಷ್ಟ್ರೀಯ ಉತ್ಪನ್ನದ ಶೇ. 2.5ರಷ್ಟು ಅನುದಾನವನ್ನು ಒದಗಿಸುವುದಾಗಿ ಹೇಳಿರುವ ಸರಕಾರವು ಅದನ್ನು ಶೇ.1.9ಕ್ಕಿಂತ ಮೇಲೇರಿಸಲು ವಿಫಲವಾಗಿದೆ. ಜನರು ಆರೋಗ್ಯ ರಕ್ಷಣೆಗೆ ತಮ್ಮ ಕಿಸೆಗಳಿಂದಲೇ ಮಾಡುವ ಖರ್ಚನ್ನು ಶೇ. 40ರಷ್ಟು ಇಳಿಸಲಾಗಿದೆ ಎಂದು ಸರಕಾರವು ಹೇಳಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ ಆರೋಗ್ಯ ವ್ಯಯದ ಶೇ. 70ರಷ್ಟಕ್ಕೆ ಕಾರಣವಾಗುವ ಹೊರರೋಗಿ ಚಿಕಿತ್ಸೆ ಮತ್ತು ಔಷಧಗಳ ವೆಚ್ಚದಲ್ಲಿ ಶೇ.67ರಷ್ಟನ್ನು ಜನರೇ ಭರಿಸುತ್ತಿದ್ದಾರೆ. ಜನೌಷಧಿಯೆಂದು ಫೋಟೋ ಸಹಿತ ಪ್ರಚಾರ ಮಾಡುವಲ್ಲಿ ಸೀಮಿತ ಔಷಧಗಳಷ್ಟೇ ಲಭ್ಯವಿದ್ದು, ವಿಶ್ವಾಸಾರ್ಹತೆಯನ್ನು ಕಾಯುವಲ್ಲೂ ವೈಫಲ್ಯಗಳಿರುವುದರಿಂದ ಜನರ ಕಷ್ಟಗಳೇನೂ ನಿವಾರಣೆಯಾಗಿಲ್ಲ. ಅತ್ತ ಬಡವರಲ್ಲದೆ ಆಯುಷ್ಮಾನ್ ಯೋಜನೆ ಪಡೆಯಲಾಗದ, ಇತ್ತ ಖಾಸಗಿ ಆಸ್ಪತ್ರೆಗಳ ವೆಚ್ಚವನ್ನೂ ಭರಿಸಲಾಗದ ಮಧ್ಯಮ ವರ್ಗದವರು ಹೊರ ಮತ್ತು ಒಳರೋಗಿಗಳಾಗಿ ಆರೋಗ್ಯ ಸೇವೆ ಪಡೆಯಲು ತಮ್ಮ ಕಿಸೆಯಿಂದಲೇ ಭರಿಸುವುದರಿಂದ ವರ್ಷಕ್ಕೆ ಐದೂವರೆ ಕೋಟಿ ಜನರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ.70 ರಷ್ಟು ಆರೋಗ್ಯ ಸೇವೆಗಳು ಖಾಸಗಿ ವಲಯದಲ್ಲೇ ಇದ್ದು, ಕೋವಿಡ್ ನಂತರದ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಖಾಸಗಿ ಆರೋಗ್ಯ ಸೇವೆಗಳ ವೆಚ್ಚವು ಸಾಮಾನ್ಯ ಹಣದುಬ್ಬರದ ಮಿತಿಯನ್ನು ಮೀರಿ ಶೇ.15ರಷ್ಟು ಏರಿಕೆಯಾಗಿದೆ, ಇದು ಏಷ್ಯಾದಲ್ಲೇ ಅತ್ಯಧಿಕವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ 3000 ರೂಪಾಯಿ ವೆಚ್ಚವಾಗುವಲ್ಲಿ ಅದೇ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ 50-75000 ರೂಪಾಯಿ ವೆಚ್ಚವಾಗುತ್ತಿದೆ. ಸಾರ್ವಜನಿಕ ರಂಗದ ಆಸ್ಪತ್ರೆಗಳನ್ನು ಸುಧಾರಿಸದೆ, ಅಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆಯನ್ನು ನೀಗಿಸದೆ, ಆಯುಷ್ಮಾನ್ ಭಾರತ್ ಹೆಸರಲ್ಲಿ ವೈಯಕ್ತಿಕ ಚಿಕಿತ್ಸೆಗಳಿಗೆ ಬೊಕ್ಕಸದ ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ಕೊಡುವ ಯೋಜನೆ ಮಾಡಿ ಆ ಹಣದಲ್ಲೂ ಲಕ್ಷ ಕೋಟಿಯಷ್ಟು ಪಾವತಿಸದೆ ಕೇವಲ ಹೇಳಿಕೆಗಳಲ್ಲಷ್ಟೇ ಆರೋಗ್ಯ ಸೇವೆಯಾಗುತ್ತಿರುವಂತಿದೆ.

ಯಾವ ಆಧುನಿಕ ಚಿಕಿತ್ಸೆಯನ್ನೂ ನೀಡಲಾಗದ, ಯಾವ ಸಾಕ್ಷ್ಯಾಧಾರಗಳೂ ಇಲ್ಲದ, ಈ ದೇಶದ ಕಾನೂನುಗಳಲ್ಲಿ ಆಧುನಿಕ ಚಿಕಿತ್ಸೆಯನ್ನು ಬಳಸಲು ಅವಕಾಶವೂ ಇಲ್ಲದ ಆಯುಷ್ ಚಿಕಿತ್ಸಕರನ್ನು 7000 ಪ್ರಾಥಮಿಕ, 3000 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೇಮಿಸಲಾಗಿದೆ. ಏಳೂವರೆ ಲಕ್ಷ ಆಯುಷ್ ಚಿಕಿತ್ಸಕರನ್ನು ವೈದ್ಯರೆಂದು ಪರಿಗಣಿಸಿ ದೇಶದಲ್ಲಿ 800 ಜನರಿಗೆ ಒಬ್ಬ ವೈದ್ಯರಿದ್ದಾರೆ, ಹೀಗೆ ವಿಶ್ವ ಆರೋಗ್ಯ ಸಂಸ್ಥೆಯ ಸಾವಿರ ಜನರಿಗೊಬ್ಬ ವೈದ್ಯನಿರಬೇಕೆಂಬ ಆಶಯವನ್ನು ನಾವು ಮೀರಿಯಾಗಿದೆ ಎಂದು ಸಂಸತ್ತಿನಲ್ಲಿ ಸರಕಾರವು ಹೇಳಿಕೊಂಡಿದೆ. ಅದೇ ಸರಕಾರವು, ವೈದ್ಯರ ಕೊರತೆಯಿದೆ, ಅದನ್ನು ನೀಗಿಸುವುದಕ್ಕೆ ಇನ್ನಷ್ಟು ಆಧುನಿಕ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಿದ್ದೇವೆ, ಇನ್ನೈದು ವರ್ಷಗಳಲ್ಲಿ ಇನ್ನೂ 75000 ಸೀಟುಗಳು ಲಭ್ಯವಾಗಲಿವೆ ಎಂದೂ ಹೇಳುತ್ತಿದೆ! ಇನ್ನಷ್ಟು ಸೀಟುಗಳು ಬೇಕೆನ್ನುವ ಸರಕಾರವೇ ಸೀಟುಗಳು ಖಾಲಿ ಉಳಿಯುತ್ತಿವೆ ಎಂದೂ ಹೇಳುತ್ತಿದೆ, ಅರ್ಹತಾ ಅಂಕಗಳನ್ನು ವರ್ಷದಿಂದ ವರ್ಷಕ್ಕೆ ಇಳಿಸುವ ಕೆಲಸವನ್ನೂ ಮಾಡುತ್ತಿದೆ! ಈಗಾಗಲೇ ಇರುವ 808 ವೈದ್ಯಕೀಯ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯು ವಿಪರೀತವಾಗಿದೆ; ಎಐಐಎಂಎಸ್ ನಲ್ಲಿ ಶೇ. 40ರಷ್ಟು ಕೊರತೆಯಿದ್ದರೆ, ಕರ್ನಾಟಕದ ಎಲ್ಲಾ ಸರಕಾರಿ ಕಾಲೇಜುಗಳಲ್ಲಿ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳ ಬಹುತೇಕ ಕಾಲೇಜುಗಳಲ್ಲಿ ಬೋಧಕರ ಕೊರತೆಯಿದೆ. ಖಾಸಗಿ ಕಾಲೇಜುಗಳಲ್ಲಿ ಲೆಕ್ಕಕ್ಕಿರುವ ಬೋಧಕರು ಪಾಠಕ್ಕಿಲ್ಲದೆ ಕೋಟಿಗಟ್ಟಲೆ ಕೊಟ್ಟು ಸೇರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇರುವ ಕಾಲೇಜುಗಳಲ್ಲಿ ಬೋಧಕರಿಲ್ಲ, ಇರುವ ಸೀಟುಗಳು ತುಂಬುವುದಿಲ್ಲ, ಆದರೂ ಇನ್ನಷ್ಟು ಕಾಲೇಜುಗಳನ್ನು ತೆರೆಯುವ ಅಸಂಬದ್ಧವಾದ, ಅಪಾಯಕಾರಿಯಾದ ಕೆಲಸವಾಗುತ್ತಿದೆ. ಸಾಕ್ಷ್ಯಾಧಾರಿತ ಆಧುನಿಕ ವೈದ್ಯ ಶಿಕ್ಷಣದಲ್ಲಿ ಆಧಾರರಹಿತವಾದ ಆಯುರ್ವೇದ, ಯೋಗಗಳನ್ನು ಕಲಬೆರಕೆ ಮಾಡಿ ಆಧುನಿಕ ವೈದ್ಯವಿಜ್ಞಾನವನ್ನೇ ಕೆಡಿಸಿ ಮುಗಿಸುವ ಯೋಜನೆ ಕಾರ್ಯಗತವಾಗುತ್ತಿದೆ, ದೇಶದ ಅತಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಾದ ನಿಮ್ಹಾನ್ಸ್, ಎಐಐಎಂಎಸ್, ಪುದುಚೇರಿಯ ಜಿಪ್ಮರ್ ಮುಂತಾದೆಡೆಗಳಲ್ಲಿ ಆಯುರ್ವೇದ, ಯೋಗಗಳನ್ನು ತೂರಿಸಿ ಆ ಸಂಸ್ಥೆಗಳ ಮಾನಹರಣ ಮಾಡಲಾಗುತ್ತಿದೆ. ಇವನ್ನೆಲ್ಲ ನಿಯಂತ್ರಿಸಬೇಕಾದ ಎನ್ಎಂಸಿ ಸರಕಾರದ ಮುಷ್ಟಿಯೊಳಗೇ ಇದೆ, ಪ್ರಶ್ನಿಸಬೇಕಾದ ಐಎಂಎ ಮತ್ತಿತರ ಸಂಘಟನೆಗಳು ಸರಕಾರಕ್ಕೆ ಚಪ್ಪಾಳೆ ತಟ್ಟುವುದರಲ್ಲೇ ವ್ಯಕ್ತವಾಗಿವೆ, ವಿರೋಧಿಸಬೇಕಾದ ವಿದ್ಯಾರ್ಥಿಗಳು ಮತ್ತು ಹೆತ್ತವರು ತೆಪ್ಪಗಿದ್ದಾರೆ.

share
ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಡಾ. ಶ್ರೀನಿವಾಸ ಕಕ್ಕಿಲ್ಲಾಯ
Next Story
X