Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನೀವು ನಿರ್ಜಲೀಕರಣಕ್ಕೆ ತುತ್ತಾಗಿದ್ದೀರಿ...

ನೀವು ನಿರ್ಜಲೀಕರಣಕ್ಕೆ ತುತ್ತಾಗಿದ್ದೀರಿ ಎನ್ನುವುದನ್ನು ತಿಳಿಯುವುದು ಹೇಗೆ? ಯಾವಾಗ ಆಸ್ಪತ್ರೆಗೆ ಧಾವಿಸಬೇಕು?

ಮುಂಗಾರು ಮಳೆ ಮತ್ತು ಹೊಟ್ಟೆಯ ಸೋಂಕು

ವಾರ್ತಾಭಾರತಿವಾರ್ತಾಭಾರತಿ15 July 2023 7:04 PM IST
share
ನೀವು ನಿರ್ಜಲೀಕರಣಕ್ಕೆ ತುತ್ತಾಗಿದ್ದೀರಿ ಎನ್ನುವುದನ್ನು ತಿಳಿಯುವುದು ಹೇಗೆ? ಯಾವಾಗ ಆಸ್ಪತ್ರೆಗೆ ಧಾವಿಸಬೇಕು?

- ಅನೋನಾ ದತ್ತ - indianexpress.com

ಹೊರಗೆ ಊಟ ಮಾಡಿದ ಬಳಿಕ ಬೇಧಿಯಿಂದ ಬಳಲುತ್ತಿದ್ದ 30ರ ಹರೆಯದ ಮಹಿಳೆಯೋರ್ವಳು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡು ಚೇತರಿಸಿಕೊಳ್ಳಲು ನಿರ್ಧರಿಸಿದ್ದಳು. ನಮ್ಮಲ್ಲಿ ಹೆಚ್ಚಿನವರಂತೆ ಬೇಧಿ ತನ್ನಿಂತಾನೆ ನಿಲ್ಲುತ್ತದೆ ಎಂದು ಆಕೆ ಭಾವಿಸಿದ್ದಳು. ಶರೀರದಲ್ಲಿ ನೀರಿನ ಅಂಶ ಕಾಯ್ದುಕೊಳ್ಳಬೇಕು ಎನ್ನುವುದು ಆಕೆಗೆ ಗೊತ್ತಿತ್ತು,ಆದರೆ ಪದೇ ಪದೇ ಮೂತ್ರ ವಿಸರ್ಜನೆಯಿಂದಾಗಿ ಆಕೆಗೆ ಸಾಕಷ್ಟು ನೀರು ಕುಡಿಯಲಾಗಿರಲಿಲ್ಲ ಮತ್ತು ಅಂತಿಮವಾಗಿ ತೀವ್ರ ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು.

ಮಹಿಳೆ ತೀವ್ರ ನಿರ್ಜಲೀಕರಣಕ್ಕೆ ತುತ್ತಾಗಿದ್ದಳು. ಆಕೆಗೆ ಆಸ್ಪತ್ರೆಯಲ್ಲಿ ಐವಿ ಫ್ಲುಯಿಡ್ ನೀಡಬೇಕಾಗಿತ್ತು. ಯಾವುದೇ ಜಠರಗರುಳಿನ ರೋಗದಲ್ಲಿ ನಿರ್ಜಲೀಕರಣವು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದ್ದು, ಜನರು ಆಸ್ಪತ್ರೆಗೆ ಭೇಟಿ ನೀಡುವುದನ್ನು ಅಗತ್ಯವಾಗಿಸುತ್ತದೆ ಎನ್ನುತ್ತಾರೆ ದಿಲ್ಲಿಯ ಸರ್ ಗಂಗಾರಾಮ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಅತುಲ್ ಗೋಗಿಯಾ. ಮನೆಯಲ್ಲಿಯೇ ಇದ್ದುಕೊಂಡು ಚೇತರಿಸಿಕೊಳ್ಳುವುದು ಸರಿ, ಆದರೆ ಜನರು ಎಚ್ಚರಿಕೆಯ ಸಂಕೇತಗಳ ಮೇಲೆ ನಿಗಾಯಿರಿಸುವುದು ಮತ್ತು ಸಮಸ್ಯೆಯು ಎದುರಾಗುವ ಮುನ್ನವೇ ವೈದ್ಯಕೀಯ ನೆರವನ್ನು ಪಡೆಯುವುದು ಅಗತ್ಯವಾಗಿದೆ ಎಂದು ಡಾ.ಗೋಗಿಯಾ ಹೇಳಿದರು.

ಚಿಕಿತ್ಸೆಯ ಬಳಿಕ ಮಹಿಳೆ ಸಮಸ್ಯೆಯಿಂದ ಮುಕ್ತಗೊಂಡಿದ್ದಾಳೆ. ಈ ಎಚ್ಚರಿಕೆ ಲಕ್ಷಣಗಳು ಕಂಡು ಬಂದ ಬಳಿಕ ಮನೆಯಲ್ಲಿ ಉಳಿದುಕೊಳ್ಳಬಾರದು ಅಥವಾ ಆ್ಯಂಟಿಬಯಾಟಿಕ್ಸ್ ಗಳನ್ನು ಸೇವಿಸಿ ಸ್ವಯಂ ವೈದ್ಯಕ್ಕೆ ಪ್ರಯತ್ನಿಸಬಾರದು ಎನ್ನುತ್ತಾರೆ ವೈದ್ಯರು.

ನೀವು ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

ಟೈಫಾಯ್ಡ್ ಮತ್ತು ಗ್ಯಾಸ್ಟೋಎಂಟರೈಟಿಸ್ (ಜಠರಗರುಳಿನ ಉರಿಯೂತ)ದಂತಹ ಉದರ ರೋಗಗಳು ಸಾಮಾನ್ಯವಾಗಿ ಅತಿಸಾರ ಮತ್ತು ವಾಂತಿಗೆ ಕಾರಣವಾಗುತ್ತವೆ ಮತ್ತು ಇದರಿಂದ ಶರೀರದಲ್ಲಿ ದ್ರವಗಳು ನಷ್ಟಗೊಳ್ಳುತ್ತವೆ. ನೀರು ಮತ್ತು ಎಳನೀರು, ಲಿಂಬೆನೀರು, ಮಜ್ಜಿಗೆಯಂತಹ ಜಲಸಂಚಯ ದ್ರವಗಳನ್ನು ಹಿಡಿದಿಟ್ಟುಕೊಳ್ಳಲು ವ್ಯಕ್ತಿಯ ಶರೀರಕ್ಕೆ ಸಾಧ್ಯವಾಗದಿದ್ದಾಗ ಅದು ತೀವ್ರ ನಿರ್ಜಲೀಕರಣ ಮತ್ತು ಲವಣಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.

ಜಠರಗರುಳಿನ ಸೋಂಕಿಗೆ ತುತ್ತಾದ ವ್ಯಕ್ತಿಯು ಅತಿಯಾದ ಮಲಮೂತ್ರಗಳನ್ನು ವಿಸರ್ಜಿಸುತ್ತಿದ್ದರೆ (ದಿನಕ್ಕೆ 10ರಿಂದ 20ಕ್ಕೂ ಅಧಿಕ ಸಲ) ಖಂಡಿತವಾಗಿ ವೈದ್ಯರನ್ನು ಭೇಟಿಯಾಗಬೇಕು. ಒಂದೆರಡು ದಿನಗಳ ಕಾಲ ಮನೆಯಲ್ಲಿ ಇದ್ದುಕೊಂಡು ಲಕ್ಷಣಗಳನ್ನು ಕಾಯ್ದು ನೋಡುವುದು ಸರಿ,ಆದರೆ ನಂತರವೂ ಅತಿಸಾರ ಮತ್ತು ವಾಂತಿ ಕಡಿಮೆಯಾಗದಿದ್ದರೆ ಸೂಕ್ತ ಆ್ಯಂಟಿಬಯಾಟಿಕ್ ಗಳನ್ನು ತೆಗೆದುಕೊಳ್ಳಲು ವ್ಯಕ್ತಿಯು ವೈದ್ಯರ ಬಳಿ ಹೋಗಬೇಕಾಗುತ್ತದೆ ಎಂದು ಡಾ.ಗೋಗಿಯಾ ಹೇಳಿದರು.

ಎಚ್ಚರಿಕೆಯ ಸಂಕೇತಗಳನ್ನು ವಿವರಿಸಿದ ದಿಲ್ಲಿಯ ಮ್ಯಾಕ್ಸ್ ಹಾಸ್ಪಿಟಲ್-ಸಾಕೇತ್ನ ಹಿರಿಯ ವೈದ್ಯ ಡಾ.ರೊಮೆಲ್ ಟಿಕೂ ಅವರು, ವ್ಯಕ್ತಿಯು ಹಾಸಿಗೆಯಿಂದ ಏಳಲಾಗದಷ್ಟು ದುರ್ಬಲಗೊಂಡಿದ್ದರೆ ವೈದ್ಯರನ್ನು ಭೇಟಿಯಾಗಲೇಬೇಕು. ನೀರು ಅಥವಾ ಬಾಯಿ ಮೂಲಕ ಸೇವಿಸಿದ ಔಷಧಿಗಳನ್ನು ಶರೀರವು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ಮೂತ್ರ ವಿಸರ್ಜನೆಯಾಗದಿದ್ದರೆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಮೂತ್ರವಿಸರ್ಜನೆ ಆಗದಿರುವುದು ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿರಬಹುದು ಎನ್ನುವುದನ್ನು ಸೂಚಿಸುತ್ತದೆ. ತೀವ್ರ ನಿರ್ಜಲೀಕರಣ ಪ್ರಕರಣಗಳು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತವೆ. ಐವಿ ಫ್ಲುಯಿಡ್ಗಳು ಮತ್ತು ಆ್ಯಂಟಿಬಯೊಟಿಕ್ಗಳ ಮೂಲಕ ಮೂತ್ರಪಿಂಡಗಳನ್ನು ಪೂರ್ವಸ್ಥಿತಿಗೆ ಮರಳಿಸಬಹುದು,ಆದರೆ ಪರಿಸ್ಥಿತಿ ಅಷ್ಟೊಂದು ಹದಗೆಡಲು ಅವಕಾಶ ನೀಡುವುದೇಕೆ? ಜನರು ತಮ್ಮ ರೋಗಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ವೈದ್ಯರನ್ನು ಬೇಗ ಭೇಟಿಯಾಗಬೇಕು ಎಂದು ಹೇಳಿದರು. ವೈದ್ಯರನ್ನು ಭೇಟಿಯಾಗಲು ಎರಡು ದಿನಗಳಿಗಿಂತ ಹೆಚ್ಚು ವಿಳಂಬಿಸಬಾರದು ಎಂದರು.

ಯಾವ ಔಷಧಿಗಳನ್ನು ಸೇವಿಸಬೇಕು?

ಮುಂಗಾರು ಮಳೆಯ ಆಗಮನದೊಂದಿಗೆ ಟೈಫಾಯ್ಡ ಮತ್ತು ಗ್ಯಾಸ್ಟೋಎಂಟರೈಟಿಸ್ ಪ್ರಕರಣಗಳು ಹೆಚ್ಚಿವೆ. ಕಳೆದ 10 ದಿನಗಳಲ್ಲಿ ದಿಲ್ಲಿಯಲ್ಲಿ ಇಂತಹ ಪ್ರಕರಣಗಳಲ್ಲಿ ಶೇ.20ರಿಂದ 30ರಷ್ಟು ಏರಿಕೆ ಕಂಡು ಬಂದಿದೆ.

ಹೆಚ್ಚಿನ ಸೋಂಕುಗಳಿಗೆ ಬ್ಯಾಕ್ಟೀರಿಯಾ ಕಾರಣವಾಗಿದ್ದರೂ ವೈರಸ್ಗಳು ಕೂಡ ಜಠರಗರುಳು ಕಾಯಿಲೆಯ ಲಕ್ಷಣಗಳನ್ನುಂಟು ಮಾಡುತ್ತವೆ.

ವೈರಸ್ನಿಂದ ಸೋಂಕುಂಟಾಗಿದ್ದರೆ ಔಷಧಿಗಳ ಅಗತ್ಯವಿಲ್ಲ. ವಿಶ್ರಾಂತಿಯನ್ನು ಪಡೆಯುವ ಮತ್ತು ಸಾಕಷ್ಟು ನೀರನ್ನು ಸೇವಿಸುವ ಮೂಲಕ ವ್ಯಕ್ತಿಯು ಚೇತರಿಸಿಕೊಳ್ಳಲು ಸಾಧ್ಯ. ಆದರೆ ಟೈಫಾಯ್ಡಿನಂತಹ ಸೋಂಕುಗಳಿಗೆ ಸೂಕ್ತ ಔಷಧೋಪಚಾರ ಅಗತ್ಯವಾಗುತ್ತವೆ ಎನ್ನುತ್ತಾರೆ ಡಾ.ಟಿಕೂ.

ಕೃಪೆ: indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X