ನಿಮ್ಮ ಟೊಮೆಟೊ ಸೇವನೆ ಸರಿಯಾಗಿದೆಯೆ?

ಸಾಂದರ್ಭಿಕ ಚಿತ್ರ | Photo Credit : freepik
ಎಪ್ರಿಲ್ 30ರಂದು ‘ದಿ ಮೆಲ್ ರಾಬಿನ್ಸ್’ ಪಾಡ್ ಕಾಸ್ಟ್ ನಲ್ಲಿ ಆಗಮಿಸಿದ ಡಾ. ಲ್ಯೂಸಿಯ ಅರೋನಿಕ ಟೊಮೆಟೋದಿಂದ ಸಂಪೂರ್ಣ ಪ್ರಯೋಜನ ಪಡೆಯುವುದು ಹೇಗೆ ಎಂದು ವಿವರಿಸಿದ್ದಾರೆ.
ಕಡಿಮೆ ಕ್ಯಾಲರಿ ಇರುವ ಮತ್ತು ಪೋಷಕಾಂಶಗಳಿಂದ ತುಂಬಿರುವ ಟೊಮೆಟೊ ಸೇವಿಸಲು ಹಲವು ಮಾರ್ಗಗಳಿವೆ. ಆರೋಗ್ಯ ಪ್ರಜ್ಞೆ ಇರುವ ಬಹಳಷ್ಟು ಮಂದಿ ಟೊಮ್ಯಾಟೊವನ್ನು ಹಸಿಯಾಗಿ ತಿನ್ನುತ್ತಾರೆ. ಆದರೆ, ಫೋಷಕಾಂಶ ಸಂಶೋಧಕರು ಮತ್ತು ವೈದ್ಯರಾದ ಲ್ಯೂಸಿಯ ಅರೋನಿಕ ಅವರ ಪ್ರಕಾರ ಟೊಮೆಟೋವನ್ನು ಹಸಿಯಾಗಿ ತಿನ್ನಬಾರದು. ಎಪ್ರಿಲ್ 30ರಂದು ‘ದಿ ಮೆಲ್ ರಾಬಿನ್ಸ್’ ಪಾಡ್ ಕಾಸ್ಟ್ ನಲ್ಲಿ ಆಗಮಿಸಿದ ಅವರು ಟೊಮೆಟೋದಿಂದ ಸಂಪೂರ್ಣ ಪ್ರಯೋಜನ ಪಡೆಯುವುದು ಹೇಗೆ ಎಂದು ವಿವರಿಸಿದ್ದಾರೆ.
ಟೊಮೆಟೊಗಳಲ್ಲಿವೆ ಲೈಕೋಪೀನ್
ಮೆಲ್ ರಾಬಿನ್ಸ್ ಅವರು ಟೊಮೆಟೊ ಪ್ರೀತಿ ಬಗ್ಗೆ ಡಾ. ಅರೋನಿಕಾರನ್ನು ಕೇಳಿದಾಗ ಅವರು ಹೇಳಿರುವುದು, ಇಟಲಿ ಮೂಲದವರಾದ ಕಾರಣದಿಂದ ಟೊಮೆಟೊ ಬಹಳ ಪ್ರಿಯ. ಹಾಗೆಯೇ ಶಕ್ತಿಯುತ ಆಂಟಿ ಆಕ್ಸಿಡಂಟ್ ಆಗಿರುವ ಲೈಕೊಪೀನ್ ಟೊಮೆಟೊದಲ್ಲಿರುವುದು ಮತ್ತೊಂದು ಕಾರಣ. “ಲೈಕೋಪೀನ್ ಹೃದಯರಕ್ತನಾಳದ ಮತ್ತು ಚರ್ಮದ ಲಾಭಗಳನ್ನು ಹೊಂದಿರುವುದು ಅಧ್ಯಯನಗಳಲ್ಲಿ ಸಾಬೀತಾಗಿದೆ. ಮುಖ್ಯವಾಗಿ ಲೈಕೊಪೀನ್ ಎಲ್ಡಿಎಲ್ (ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್) ಆಕ್ಸಿಡೇಶನ್ ಅನ್ನು ನಿಜವಾಗಿಯೂ ಕಡಿಮೆ ಮಾಡಬಹುದು.
ಟೊಮೆಟೊದಲ್ಲಿರುವ ಲೈಕೋಪೀನ್ ಚರ್ಮದ ಆರೋಗ್ಯಕ್ಕೂ ಉಪಯುಕ್ತ ಎಂದು ಅವರು ಹೇಳಿದ್ದಾರೆ. “ಆಂತರಿಕವಾಗಿ ಚರ್ಮದ ಆರೈಕೆ ಮಾಡಬಹುದು. ವಾಸ್ತವದಲ್ಲಿ ನಮ್ಮ ಎಸ್ಪಿಎಫ್ (ಸನ್ ಪ್ರೊಟೆಕ್ಷನ್ ಫ್ಯಾಕ್ಟರ್) ಅನ್ನು ಉತ್ತೇಜಿಸುತ್ತದೆ. ನಮ್ಮ ಆಂತರಿಕ ಎಸ್ಪಿಎಫ್ ಅನ್ನು ಶೇ 40ರಷ್ಟು ಉತ್ತೇಜಿಸುತ್ತದೆ. ಲೈಕೋಪಿನ್ ಡಿಎನ್ಎಯನ್ನು ಸರಿಪಡಿಸುತ್ತದೆ ಮತ್ತು ಕಲಾಜನ್ ವಿಭಜನೆ ಮತ್ತು ವಯಸ್ಸಿನ ಕಲೆಗಳ ರಚನೆಯನ್ನು ಸಕ್ರಿಯವಾಗಿ ಪ್ರತಿಬಂಧಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಲೈಕೋಪಿನ್ ಲಾಭ ಪಡೆಯುವುದು ಹೇಗೆ?
“ಟೊಮೆಟೊಗಳಿಂದ ಲೈಕೋಪಿನ್ ಸೇವನೆ ಪ್ರಮಾಣವನ್ನು ಹೆಚ್ಚಿಸಬೇಕೆಂದರೆ ಅದನ್ನು ಆಲಿವ್ ಎಣ್ಣೆಯಲ್ಲಿ ಬೇಯಿಸಬೇಕು. ಅಥವಾ ಯಾವುದೇ ಇತರ ಎಣ್ಣೆಯಲ್ಲಿ ಬೇಯಿಸಿದರೆ ಲೈಕೋಪಿನ್ ಹೀರುವಿಕೆ ಹೆಚ್ಚಾಗಲಿದೆ. ಆಲಿವ್ ಎಣ್ಣೆ ಜೊತೆಗೆ ಬೆರೆಸಿದಾಗ ಲೈಕೋಪಿನ್ ಲಭ್ಯತೆ ಶೇ 70ರಷ್ಟು ಏರಿಸಿರುತ್ತೀರಿ” ಎಂದು ಅವರು ಹೇಳಿದ್ದಾರೆ. ಅದಕ್ಕೆ ಮುಖ್ಯ ಕಾರಣ ಲೈಕೋಪಿನ್ ಲಿಪೊಸಲ್ಯುಬಲ್ ಆಗಿರುತ್ತದೆ. ಕೊಬ್ಬು ಇಲ್ಲದೆ ಅದನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. “ಮೂಲತಃ ಟೊಮೆಟೊವನ್ನು ಆಲಿವ್ ಎಣ್ಣೆಯಿಂದ ಪೇಸ್ಟ್ ಆಗಿ ಬೇಯಿಸುವ ಮೂಲಕ 3 ಚಮಚ ಟೊಮೆಟೊ ಪೇಸ್ಟ್ ಮತ್ತು ಆಲಿವ್ ಎಣ್ಣೆಯಿಂದ 10 ಮಿಲಿಗ್ರಾಂ ಲೈಕೋಪಿನ್ ಪಡೆಯಬಹುದು” ಎಂದು ಅವರು ಹೇಳಿದ್ದಾರೆ.
ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸಮಸ್ಯೆಗಳಿದ್ದರೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಭೇಟಿಯಾಗಿದೆ.






